Advertisement
ಏರಿಳಿತ!ಮಾರ್ಚ್‌ನ ಕೆಲವು ದಿನಗಳಲ್ಲಿ ಬಿಸಿಲು ತಾಪ ಏರಿಕೆ ಕಂಡರೂ ಉಳಿದಂತೆ ಹೆಚ್ಚಿನ ವ್ಯತ್ಯಾಸ ಕಾಣದು. ಜಿಲ್ಲೆಯಲ್ಲಿ ಮಂಗಳವಾರ 33 ಡಿಗ್ರಿ ತಾಪಮಾನ ಕಂಡು ಬಂದಿದ್ದು, ಫೆ. 26ಕ್ಕೆ 34 ಡಿಗ್ರಿ, ಫೆ. 27 ರಂದು 34 ಡಿಗ್ರಿಗೆ ಏರಿಕೆಯಾಗಲಿದೆ. ಬಳಿಕ ನಿಧಾನವಾಗಿ ಇಳಿಕೆ ಕಾಣಲಿದೆ. ಫೆ.28ರಂದು 32 ಡಿಗ್ರಿ, ಫೆ. 29 ರಂದು 32 ಡಿಗ್ರಿ ತಲುಪಿ ಮಾ.10ಕ್ಕೆ 31 ಡಿಗ್ರಿಗೆ ತಲುಪಲಿದೆ.
2020 ಮಾ.26ರಂದು 34 ಡಿಗ್ರಿ ಗರಿಷ್ಠ, ಕನಿಷ್ಠ ಮಾ.1ರಂದು 23 ಡಿಗ್ರಿ ದಾಖಲಾಗಲಿದೆ. ಉಳಿದಂತೆ 2019ರ ಮಾ. 14ರಂದು 35 ಡಿಗ್ರಿ ಗರಿಷ್ಠ, ಮಾ. 2ರಂದು 21 ಡಿಗ್ರಿ ಕನಿಷ್ಠ, 2018ರಲ್ಲಿ ಮಾ.2ರಂದು 36 ಡಿಗ್ರಿ ಗರಿಷ್ಠ, ಮಾ. 1ರಂದು 22 ಡಿಗ್ರಿ ಕನಿಷ್ಠ, 2017ರ ಮಾ.1ರಂದು 38 ಡಿಗ್ರಿ ಗರಿಷ್ಠ, ಮಾ.12ರಂದು 22 ಡಿಗ್ರಿ ಕನಿಷ್ಠ, 2016ರಲ್ಲಿ ಮಾ.3ರಂದು 35 ಡಿಗ್ರಿ ಗರಿಷ್ಠ, ಮಾ. 17ರಂದು 24 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿತ್ತು. ಕಲ್ಲಂಗಡಿ, ಎಳನೀರಿಗೆ ಬೇಡಿಕೆ
ಉಷ್ಣಾಂಶ ಹೆಚ್ಚಿಗೆಯಾದ ಕಾರಣ ಎಳನೀರು, ವಿವಿಧ ಜ್ಯೂಸ್, ಕಲ್ಲಂಗಡಿ, ವಿವಿಧ ತಂಪು ಪಾನೀಯಗಳ ಮಾರಾಟ ಹೆಚ್ಚಳವಾಗಿವೆ. ನಗರದ ಕೆಲವು ಕಡೆಗಳಲ್ಲಿ ಕಲ್ಲಂಗಡಿ, ಅನಾನಸು, ಮುಳ್ಳು ಸೌತೆ ಮಾರಾಟ ಜೋರಾಗಿದೆ. ಎಳನೀರಿನ ಬೇಡಿಕೆ ಹೆಚ್ಚುತ್ತಿದ್ದು 35 ರೂ. ಬೆಲೆ ಇದೆ, ಕೆಲ ಮಾಲ್‌ಗಳಲ್ಲಿ 24 ರೂ.ಗೂ ಲಭ್ಯವಿದೆ. ಕಾಪು, ಮಲ್ಪೆ ಹಾಗೂ ಇತರ ಕಡಲ ಕಿನಾರೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.
Related Articles
ತಾಪಮಾನ ಇತ್ತೀಚೆಗೆ 34.8 ಡಿಗ್ರಿ, 35.4 ಡಿಗ್ರಿ, 36ಡಿಗ್ರಿ ವರೆಗೆ ತಲುಪಿದೆ. ಕಳೆದ ವರ್ಷ ಬಿಸಿ ಗಾಳಿ ಪ್ರಮಾಣ ಹೆಚ್ಚಿದ್ದರಿಂದ ಸೆಕೆಯ ಪ್ರಮಾಣ ಹೆಚ್ಚಿತ್ತು. ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿ ನೀರಿನ ತೇವಾಂಶ ಕಡಿಮೆ, ಗಾಳಿಯ ಪ್ರಮಾಣ ಕಡಿಮೆಯಿಂದ ಸೆಕೆಯ ಅನುಭವ ಆಗುತ್ತಿದೆ. ಮುಂದಿನ ತಿಂಗಳು 1ರಿಂದ 2 ಡಿಗ್ರಿಯಷ್ಟು ಮಾತ್ರ ತಾಪಮಾನ ಹೆಚ್ಚಾಗಲಿದ್ದು, ಅಕಾಲಿಕ ಮಳೆಯ ಸಾಧ್ಯತೆ ಕಡಿಮೆ ಇದೆ.
-ರಂಜಿತ್ ಟಿ.ಎಚ್.,ತಾಂತ್ರಿಕ ಅಧಿಕಾರಿ, ಗ್ರಾಮೀಣ ಕೃಷಿ ಹವಾಮಾನ ಮನ್ಸೂಚನಾ ಘಟಕ, ಬ್ರಹ್ಮಾವರ
Advertisement
ಬೀಚ್‌ಗೆ ಜನರ ಲಗ್ಗೆಮಲ್ಪೆ ಬೀಚ್‌ನಲ್ಲಿ ಬೆಳಗ್ಗಿನ ಹೊತ್ತಿಗಿಂತ ಸಂಜೆ 4ರಿಂದ 7ರವರೆಗೆ ಹೆಚ್ಚಿನ ಮಂದಿ ಭೇಟಿ ನೀಡುತ್ತಿದ್ದು, ದಿನಂಪ್ರತಿ 3 ಸಾವಿರ ಮಂದಿ ಭೇಟಿ ನೀಡುತ್ತಾರೆ. ವೀಕೆಂಡ್‌ನಲ್ಲಿ 10 ಸಾವಿರ ಮಂದಿ ಭೇಟಿ ನೀಡುತ್ತಾರೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ನಿಗಮದ ಸಿಇಒ ಸುದೇಶ್ ಹೇಳುತ್ತಾರೆ. ಇದೇ ವೇಳೆ ಕಾಪುವಿನಲ್ಲೂ ವಾರಾಂತ್ಯ 6- 7 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ ಎಂದು ಕಾಪು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿ ಹೇಳುತ್ತಾರೆ.