Advertisement

ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ತೆಲುಗು “ಯೂ ಟರ್ನ್’: Watch

05:16 PM Aug 18, 2018 | Team Udayavani |

ಕನ್ನಡದಲ್ಲಿ ಭರ್ಜರಿ ಯಶಸ್ಸು ದಾಖಲಿಸಿರುವ “ಯೂ ಟರ್ನ್’ ತೆಲುಗು ಚಿತ್ರದ ರೀಮೇಕ್‍ನಲ್ಲಿ ನಟಿ ಸಮಂತಾ ಅಕ್ಕಿನೇನಿ ನಟಿಸಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.

Advertisement

ಇದೀಗ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ಅಲ್ಲದೇ ಟ್ರೈಲರ್ ವೀಕ್ಷಿಸಿದ ಸಿನಿಪ್ರಿಯರಿಗೆ ಸಿನಿಮಾದ ಮೇಲಿನ ಭರವಸೆಯನ್ನು ದುಪ್ಪಟ್ಟು ಮಾಡಿದೆ. ಮೂಲ ಚಿತ್ರ ನಿರ್ದೇಶಿಸಿದ್ದ ಪವನ್ ಕುಮಾರ್ ಅವರೇ ತೆಲುಗಿನಲ್ಲೂ ಆ್ಯಕ್ಷನ್ ಕಟ್ ಹೇಳಿದ್ದು, ಶ್ರದ್ಧಾ ಶ್ರೀನಾಥ್ ಮಾಡಿದ್ದ ಪತ್ರಕರ್ತೆ ಪಾತ್ರವನ್ನು ಸಮಂತಾ ನಿಭಾಯಿಸಿದ್ದಾರೆ.

ಕನ್ನಡ ಯೂ ಟರ್ನ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ, ದಿಲೀಪ್ ರಾಜ್, ರಾಧಿಕಾ ಚೇತನ್ ನಟಿಸಿದ್ದರೆ, ತೆಲುಗಿನಲ್ಲಿ ಸಮಂತಾ, ಆದಿ, ಭೂಮಿಕಾ, ರಾಹುಲ್ ಅಭಿನಯಿಸಿದ್ದಾರೆ. ಇನ್ನು ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಶ್ರೀನಿವಾಸ ಚಿತ್ತೂರಿ – ರಾಂಬಾಬು ಬಂಡವಾಳವನ್ನು ಹೂಡಿದ್ದಾರೆ. ಸೆಪ್ಟೆಂಬರ್ 13 ರಂದು ಸಿನಿಮಾ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next