Advertisement

Singer Mangli: ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ; ಅಪಾಯದಿಂದ ಪಾರು

01:03 PM Mar 18, 2024 | Team Udayavani |

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ ಸತ್ಯವತಿ ರಾಥೋಡ್(ಮಂಗ್ಲಿ) ಅವರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಂಶಾಬಾದ್‌ನ ತೊಂಡುಪಲ್ಲಿ ಸೇತುವೆ ಬಳಿ ಭಾನುವಾರ (ಮಾ. 17 ರಂದು) ರಾತ್ರಿ ನಡೆದಿರುವುದು ವರದಿಯಾಗಿದೆ.

Advertisement

ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.  ಮಂಗ್ಲಿ ಅವರ ಕಾರಿಗೆ ಟ್ರಕ್(ಡಿಸಿಎಂ ವಾಹನ)‌ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

ಗಾಯಕಿ ಮಂಗ್ಲಿ ಮತ್ತು ಇತರ ಇಬ್ಬರು ಪ್ರಯಾಣಿಕರಾದ ಮೇಘರಾಜ್ ಮತ್ತು ಮನೋಹರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ಆಗಿದೆ.

ಮಂಗ್ಲಿ ಅವರ ಕಾರಿಗೆ ವಾಹನ ಹಿಂದಿನಿಂದ ಗುದ್ದಿದೆ. ಟ್ರಕ್ ಚಾಲಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ.‌  ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿದ್ದಾರೆ.

ಅಪಘಾತದ ಬಳಿಕ ಮಂಗ್ಲಿ ಅವರು ʼಮಾ ಸೂಪರ್ ಸಿಂಗರ್ ಪಾರ್ಟಿʼಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಯಾವುದೇ ಗಾಯಗಳು ಆಗದೆ ಇರುವುದು ಕಂಡು ಬಂದಿದೆ ಎಂದು ವರದಿ ಆಗಿದೆ.

Advertisement

ಕನ್ನಡ, ತೆಲುಗಿನಲ್ಲಿ ಜನಪ್ರಿಯ ಆಗಿರುವ ಮಂಗ್ಲಿ  ‘ರಾಮುಲೂ ರಾಮುಲಾ’, ‘ಜ್ವಾಲಾ ರೆಡ್ಡಿ’,  ‘ಹೂ ಅಂತೀಯಾ..’’,`ಕಣ್ಣೇ ಅದಿರಿಂದಿ, ‘ರಾ ರಾ ರಕ್ಕಮ್ಮ’ ಮತ್ತು ‘ಜಿಂದಾ ಬಂದಾ’ ಇತರೆ ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next