Advertisement

ತೆಲುಗು ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ನಿಧನ

01:19 PM Sep 08, 2020 | keerthan |

ಹೈದರಾಬಾದ್: ತೆಲುಗು ಚಿತ್ರತಂಡದ ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿಯವರು ಇಂದು ಮುಂಜಾನೆ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾದರು.

Advertisement

74 ವರ್ಷ ಪ್ರಾಯದ ನಟ ಜಯಪ್ರಕಾಶ್ ರೆಡ್ಡಿ ಆಂಧ್ರ ಪ್ರದೇಶದ ಗುಂಟೂರಿನ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು.

ಹಾಸ್ಯ ಮತ್ತು ಖಳನಟನಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ಜಯಪ್ರಕಾಶ್ ರೆಡ್ಡಿಯವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಮರಸಿಂಹ ರೆಡ್ಡಿ, ಪ್ರೇಮಿಚುಕುಂಡಮ್ ರಾ, ನರಸಿಂಹ ನಾಯ್ಡು, ನೂವೊಸ್ತಾನಂತೆ ನೇನೊದ್ದಂತನಾ, ಜುಲಾಯಿ, ರೆಡಿ, ಕಿಕ್, ಕಬಡ್ಡಿ ಕಬಡ್ಡಿ ಮುಂತಾದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದರು.

ಕಳೆದ ವರ್ಷದ ತೆರೆಕಂಡ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವರು ಚಿತ್ರದಲ್ಲಿ ಕೊನೆಯದಾಗಿ ಜಯಪ್ರಕಾಶ್ ರಡ್ಡಿ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next