Advertisement

ಬಂಗಾಲ ಟಿವಿ ನಟಿ ಪಾಯಲ್‌ ಚಕ್ರವರ್ತಿ ಆತ್ಮಹತ್ಯೆ, ಕಾರಣ ನಿಗೂಢ

05:12 PM Sep 06, 2018 | Team Udayavani |

ಸಿಲಿಗುಡಿ : ಉತ್ತರ ಬಂಗಾಲದ ಸಿಲಿಗುಡಿಯ ಹೊಟೇಲ್‌ ಕೋಣೆಯಲ್ಲಿ ನೇಣು ಹಾಕಿಕೊಂಡ ರೀತಿಯಿಲ್ಲಿ, ನಿಗೂಢ ಸನ್ನಿವೇಶದಲ್ಲಿ, ಟಿವಿ ನಟಿ ಪಾಯಲ್‌ ಚಕ್ರವರ್ತಿ ಅವರ ಮೃತ ದೇಹ ಪತ್ತೆಯಾಗಿದೆ.

Advertisement

ಪಾಯಲ್‌ ಚಕ್ರವರ್ತಿ ಅವರು ದಕ್ಷಿಣ ಕೋಲ್ಕತ ನಿವಾಸಿಯಾಗಿದ್ದು ಹಲವಾರು ಟಿವಿ ಮತ್ತು ವೆಬ್‌ ಸೀರಿಯಲ್‌ಗ‌ಳಲ್ಲಿ ನಟಿಸಿದ್ದಾರೆ. ನಿನ್ನೆ ಬುಧವಾರ ಹೊಟೇಲ್‌ ಕೋಣೆಯಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಅವರ ಶವ ಪತ್ತೆಯಾಯಿತು ಎಂದು ಸಿಲಿಗುಡಿ ಪೊಲೀಸ್‌ ಕಮಿಶನರೇಟ್‌ ಡಿಸಿಪಿ ಗೌರವ್‌ ಲಾಲ್‌ ತಿಳಿಸಿದರು. 

ಈಚೆಗಷ್ಟೇ ತನ್ನ ಪತಿಯಿಂದ ಪ್ರತ್ಯೇಕಗೊಂಡಿದ್ದ 38ರ ಹರೆಯದ ಪಾಯಲ್‌ ಅವರಿಗೆ ಎರಡು ವರ್ಷ ಪ್ರಾಯದ ಮಗ ಇದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಉತ್ತರ ಬಂಗಾಲ ವೈದ್ಯಕೀಯ ಕಾಲೇಜ್‌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಹೇಳಿದರು. 

ಪಾಯಲ್‌ ಆತ್ಮಹತ್ಯೆಯ ಹಿಂದಿನ ಕಾರಣವೇನೆಂದು ತಮಗೆ ಗೊತ್ತಿಲ್ಲ ಎಂದು ಆಕೆಯ ಮನೆಯವರು ಹೇಳಿದ್ದಾರೆ. ಪಾಯಲ್‌ ತಾನು ರಾಂಚಿಗೆ ಹೋಗುವವಳಿದ್ದೇನೆ ಎಂದಿದ್ದಳು; ಸಿಲಿಗುಡಿಯಲ್ಲಿ ಆಕೆಗೇನು ಕೆಲಸವಿತ್ತೆಂದು ನನಗೆ ಗೊತ್ತಿಲ್ಲ ಎಂದು ಆಕೆಯ ತಂದೆ ಪ್ರಬೀರ್‌ ಗುಹಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next