Advertisement

ನೋಡದೇ ಬಣ್ಣ ಹೇಳುವುದು

09:59 AM Dec 13, 2019 | mahesh |

ಮ್ಯಾಜಿಕ್‌ ಪ್ರದರ್ಶನಕ್ಕೆ ಬಂದವರನ್ನು ನಿಮ್ಮ ಕಡೆ ಸೆಳೆಯಬೇಕು. ಅದಕ್ಕೆ ಏನು ಮಾಡ್ತೀರ? ತಲೆ ಬಿಸಿ ಬೇಡ. ಹೀಗೆ ಮಾಡಿ, ನೀವು ಮ್ಯಾಜಿಕ್‌ ಪ್ರದರ್ಶನವನ್ನು ನೀಡುತ್ತಿರುವಾಗ ಪ್ರೇಕ್ಷಕರೆದುರು ನಿಮಗೆ ಯಾವುದೇ ವಸ್ತುವನ್ನು ನೋಡದೇ ಅದರ ಬಣ್ಣವನ್ನು ಹೇಳುವ ವಿಶೇಷ ಶಕ್ತಿ ಇದೆ ಅಂತ ಒಂದು ಡೈಲಾಗ್‌ ಬಿಡಿ. ಇದನ್ನು ಮಾಡಿ ತೋರಿಸಲು ಪ್ರೇಕ್ಷಕರಲ್ಲಿ ಒಬ್ಬರನ್ನು ವೇದಿಕೆಗೆ ಕರೆಯಿರಿ. ಅವರಿಗೆ ಬೇರೆ ಬೇರೆ ಬಣ್ಣದ ಕ್ರೇಯಾನ್‌ ಇರುವ ಪಾಕೆಟ್‌ ಕೊಟ್ಟು ಯಾವುದಾದರೂ ಒಂದು ಬಣ್ಣದ ಕ್ರೇಯಾನನ್ನು ತೆಗೆದುಕೊಂಡು ನಿಮ್ಮ ಕೈಗೆ ಕೊಡಬೇಕೆಂದು ಅವರಿಗೆ ಹೇಳಿ. ಆದರೆ, ಆತ ಇದನ್ನು ಮಾಡುವಾಗ ನೀವು ಪ್ರೇಕ್ಷಕರ ಕಡೆ ಬೆನ್ನು ಹಾಕಿ, ಎರಡೂ ಕೈಗಳನ್ನು ನಿಮ್ಮ ಬೆನ್ನ ಹಿಂದೆ ಹಿಡಿದು ನಿಲ್ಲಬೇಕು. ಅಂದರೆ, ಕ್ರೇಯಾನಿನ ಬಣ್ಣವನ್ನು ನೀವು ನೋಡುವಂತಿಲ್ಲ. ಆತ ಅದನ್ನು ಇಟ್ಟ ತಕ್ಷಣ ನೀವು ಪ್ರೇಕ್ಷಕರ ಕಡೆ ತಿರುಗಿ ನಿಮ್ಮ ಬಲಗೈಯನ್ನು ಮುಂದೆ ತಂದು ಆ ಪ್ರೇಕ್ಷಕ ಸಹಾಯಕನ ಹಣೆಯ ಮೇಲೆ ಹೆಬ್ಬೆರಳನ್ನು ಒತ್ತಿ ಹಿಡಿದು ಕ್ರೇಯಾನಿನ ಬಣ್ಣವನ್ನು ಕರಾರುವಾಕ್ಕಾಗಿ ಹೇಳಿ, ನೀವು ಹೀಗೆ ಹೇಳುತ್ತಿದ್ದಂತೆಯೇ ಎಲ್ಲರಲ್ಲೂ ಅಚ್ಚರಿ ಮೂಡಿ ಮೂಗಿನ ಮೇಲೆ ಬೆಳ್ಳು ಇಟ್ಟುಕೊಂಡಿರುತ್ತಾರೆ.

Advertisement

ಇದರ ರಹಸ್ಯ ಇಷ್ಟೆ: ಸಹಾಯಕ ಕ್ರೇಯಾನನ್ನು ನಿಮ್ಮ ಕೈಯಲ್ಲಿ ಇಟ್ಟ ತಕ್ಷಣ ನೀವು ಪ್ರೇಕ್ಷಕರ ಕಡೆ ತಿರುಗಿ. ಆದರೆ, ಈ ಸಮಯದಲ್ಲಿ ನಿಮ್ಮ ಬಲಗೈಯ ಹೆಬ್ಬೆರಳ ಉಗುರುರಿನಿಂದ ಕ್ರೇಯಾನನ್ನು ಸ್ವಲ್ಪವೇ ಕೆರೆಯಿರಿ. ಈಗ ಅದರ ಬಣ್ಣ ನಿಮ್ಮ ಉಗುರ ತುದಿಗೆ ತಾಗಿರುತ್ತದೆ. ತಕ್ಷಣವೇ ಕ್ರೇಯಾನನ್ನು ನಿಮ್ಮ ಎಡಗೈಗೆ ವರ್ಗಾಯಿಸಿ. ಎಡಗೈ ಬೆನ್ನ ಹಿಂದೆಯೇ ಇರಲಿ. ನಿಮ್ಮ ಬಲಗೈ ಹೆಬ್ಬೆರಳನ್ನು ಸಹಾಯಕನ ಹಣೆಗೆ ಒತ್ತಿ ಹಿಡಿದಾಗ ಬಣ್ಣ ಯಾವುದೆಂದು ನೋಡಿ ಗಟ್ಟಿಯಾಗಿ ಹೇಳಿ.

ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next