Advertisement

ಗರ್ಭಾವಸ್ಥೆಯಲ್ಲಿ ಇವುಗಳಿಗೆ ಹೇಳಿ ವಿರಾಮ..

09:18 PM Jun 03, 2019 | mahesh |

ಗರ್ಭಾವಸ್ಥೆ ಪ್ರತಿಯೊಂದು ಮಹಿಳೆಯ ಬದುಕಿನಲ್ಲೋ ಅಭೂತಪೂರ್ವ ಸಂಗತಿ. ಈ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಕೆಲವೊಂದು ಚಟುವಟಿಕೆ ಅಥವಾ ಹವ್ಯಾಸಗಳನ್ನು ಮಹಿಳೆಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ಗರ್ಭಾವಸ್ಥೆಯ ವೇಳೆ ಈ ಚಟುವಟಿಕೆಗಳಿಗೆ ವಿರಾಮ ಹೇಳುವುದು ಉತ್ತಮ.

Advertisement

ಮದ್ಯಪಾನ‌ ಸೇವನೆ
ಅಮಲು ಪದಾರ್ಥಗಳಾದ ಧೂಮಪಾನ, ಮದ್ಯಪಾನ, ಡ್ರಗ್ಸ್‌ ಸೇವನೆ ಇತ್ಯಾದಿಗಳು ಶರೀರಕಕ್ಕೆ ಯಾವತ್ತೂ ಹಾನಿಕಾರವೇ. ಅದರಲ್ಲೂ ಗರ್ಭಾವಸ್ಥೆಯಲ್ಲಿ ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇವುಗಳ ಸೇವನೆಯಿಂದಾಗಿ ಹುಟ್ಟುವ ಮಕ್ಕಳು ಅಂಗವಿಕಲರಾಗಬಹುದು. ಬುದ್ಧಿಮಾಂದ್ಯತೆ, ಬೆಳವಣಿಗೆ ಕುಂಠಿತ ಮೊದಲಾದ ರೋಗಗಳು ಉಂಟಾಗಬಹುದು.

ಕೊಬ್ಬಿನಾಂಶಯುಕ್ತ ಪದಾರ್ಥಗಳ ಸೇವನೆ
ಗರ್ಭಿಣಿಯರಾಗಿರುವ ಸಂದ‌ರ್ಭದಲ್ಲಿ ಆಹಾರ ಸೇವನೆ ಅಧಿಕವಾಗಿರುತ್ತದೆ. ಆದರೆ ಸೇವಿಸುವ ಆಹಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಮೀನು, ಕೋಳಿ ಖಾದ್ಯಗಳು, ಅತೀ ಹೆಚ್ಚು ತೈಲಾಂಶವಿರುವುದರಿಂದ ಮಗುವಿನ ಬೆಳವಣಿಗೆಗೆ ತೊಂದರೆಯಾಗುತ್ತದೆ.

ಭಾರ ಎತ್ತುವುದು ಬೇಡ
ತುಂಬಾ ಭಾರವಾದ ವಸ್ತುಗಳನ್ನು ಎತ್ತಬೇಡಿ. ಇದರಿಂದ ಮಗುವಿಗೆ ಹಾನಿಯುಂಟಾಗುತ್ತದೆ. ಇದರಿಂದ ಮಗುವಿನ ಆರೋಗ್ಯಕ್ಕೆ ಸಮಸ್ಯೆಗಳಾಗಬಹುದು.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement
Advertisement

Udayavani is now on Telegram. Click here to join our channel and stay updated with the latest news.

Next