ಹೊಸಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಂಬರುವ ಜಿಪಂ, ತಾಪಂ ಹಾಗೂ ನಗರಸಭೆ ಚುನಾವಣೆಗೆ ಕಾರ್ಯಕರ್ತರು ಅಣಿಯಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.
ನಗರದ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಮಂಡಲಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಬರೀ ಟೀಕೆಯಲ್ಲಿ ಮುಳುಗಿವೆ. ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪನವರು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.ಬಿಜೆಪಿ ಕಾರ್ಯಕರ್ತರು, ಮುಖಂಡರು ಕೂಡ ಜನರ ಸಮಸ್ಯೆಗೆ ಧ್ವನಿಯಾಗಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್‌ಮುಖಂಡರು ಹಾಗೂ ಕಾರ್ಯಕರ್ತರು ಬರೀ ಚುನಾವಣೆಗೆ ಬರುತ್ತಾರೆ. ಚುನಾವಣೆಬಳಿಕ ಮಾಯವಾಗುತ್ತಾರೆ. ನಿರಂತರ ಜನರ ಜತೆಗೆ ಇರುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದರು.
ಬಿಜೆಪಿಯಲ್ಲಿ ಹಿರಿಯರ ಮಾರ್ಗದರ್ಶನದ ಜತೆಗೆ ತತ್ತ್ವ ಸಿದ್ಧಾಂತ ಪಾಲನೆ ಮಾಡಲಾಗುತ್ತದೆ. ಉಳಿದ ಪಕ್ಷದಲ್ಲಿ ಬರೀ ಹಣ, ಅಧಿಕಾರಕ್ಕೆ ಬೆಲೆ ನೀಡಲಾಗುತ್ತದೆ. ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷರಿಗೆ ದೊರೆಯುವ ಗೌರವಕಾರ್ಯಕರ್ತನಿಗೂ ದೊರೆಯುತ್ತದೆ.ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ವಿಜಯನಗರ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂದರು.
ಬಿಜೆಪಿಯ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ನಾಳಿ ತಿಮ್ಮಪ್ಪ ಮಾತನಾಡಿ,ಪ್ರತಿಪಕ್ಷಗಳು ಲಸಿಕೆ ಬಗ್ಗೆಯೂ ಅಪಪ್ರಚಾರನಡೆಸಿದವು. ಈಗ ತಾವೇ ಲಸಿಕೆ ಸಿಗುತ್ತಿಲ್ಲಎಂದು ಮತ್ತೂಮ್ಮೆ ಅಪಪ್ರಚಾರಕ್ಕೆ ಇಳಿದಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ಹೀಗಾಗಿಮುಂಬರುವ ಜಿಪಂ, ತಾಪಂ, ನಗರಸಭೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.
ಬಿಜೆಪಿ ಉಪಾಧ್ಯಕ್ಷಅನಂತ ಪದ್ಮನಾಭ ಮಾತನಾಡಿದರು.ಮಂಡಲ ಅಧ್ಯಕ್ಷ ಬಸವರಾಜ್ ನಾಲತ್ವಾಡ ಅಧ್ಯಕ್ಷತೆ ವಹಿಸಿದ್ದರು. ಹುಡಾ ಅಧ್ಯಕ್ಷ ಅಶೋಕ್ ಜೀರೆ, ಮುಖಂಡರಾದ ಬುಕ್ಕಸಾಗರ ಸಂಗಪ್ಪ, ಭಾರತಿ ಪಾಟೀಲ್, ಟಿಂಕರ್ ರಫೀಕ್, ಕೆ.ಎಸ್. ರಾಘವೇಂದ್ರ, ಜೀವರತ್ನಂ ಮತ್ತಿತರರಿದ್ದರು. ಮಂಡಲಪ್ರ. ಕಾರ್ಯದರ್ಶಿ ಶಂಕರ್ ಮೇಟಿ ನಿರ್ವಹಿಸಿದರು.