Advertisement

ಸಂಸ್ಕೃತಿ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸಿ: ಮೈನಾ ಸದಾನಂದ ಶೆಟ್ಟಿ

12:53 AM Apr 18, 2019 | Sriram |

ಮಹಾನಗರ: ನಮ್ಮ ಪೂರ್ವ ಜರು ಆಚರಿಸಿಕೊಂಡು ಬಂದ ಸಂಸ್ಕೃತಿ, ನಡವಳಿಕೆಗಳಿಗೆ ಧಾರ್ಮಿಕ ಹಿನ್ನೆಲೆ ಇದೆ. ಅದನ್ನು ನಾವು ಮರೆಯಲಾಗದು. ನಮ್ಮ ಆಹಾರ, ಆರೋಗ್ಯ, ದೈವ ಭಕ್ತಿ ಅದನ್ನು ಹೊಂದಿಕೊಂಡಿರುತ್ತದೆ. ಇದರಿಂದಾಗಿ ನಮ್ಮ ಹಿರಿಯರು ನೂರಾರು ಕಾಲ ಯಾವುದೇ ರೋಗ ರುಜಿನಗಳಿಲ್ಲದೆ ಬಾಳಿದ್ದರು ಎಂದು ಶ್ರೀದೇವಿ ಎಜುಕೇಶನ್‌ ಟ್ರಸ್ಟ್‌ನ ಆಡಳಿತ ನಿರ್ದೇಶಕಿ ಮೈನಾ ಸದಾನಂದ ಶೆಟ್ಟಿ ಹೇಳಿದರು.

Advertisement

ನಗರದ ಬಲ್ಮಠ ರಸ್ತೆಯ ಕುಡ್ಲ ಫೆವಿಲಿಯನ್‌ನಲ್ಲಿ ಮಹಿಳಾ ವಿಭಾಗದಿಂದ ನಡೆದ ಬಿಸು ದಿನ ಕಾರ್ಯಕ್ರಮದಲ್ಲಿ ಬಿಸುಕಣಿ ಉದ್ಘಾಟಿಸಿ ಮಾತನಾಡಿದ ಆವರು, ನಾವು ನಡೆದು ಬಂದ ದಾರಿ ಸಂಸ್ಕೃತಿ ಇದನ್ನು ಮುಂದಿನ ಪೀಳಿಗೆಗೆ ಮುಂದುವರಿಸ‌ಬೇಕಾಗಿದೆ ಎಂದರು.

ಕ್ಷೇಮಾ ನಿಟ್ಟೆ ಮಾನವಿಕಾ ವಿಭಾಗದ ಮುಖ್ಯಸ್ಥೆ ಗೀತಾ ಹೆಗಡೆ ಬಿಸು ಸಂದೇಶ ನೀಡಿ ಮಾತನಾಡಿ,ಸಾಂಪ್ರದಾಯಿಕ ಮತ್ತು ಸಂಸ್ಕೃತಿಯ ಬದುಕು, ಹಿರಿಯರ ಎಲ್ಲ ಆಚರಣೆಯಲ್ಲಿ ಧಾರ್ಮಿಕ ಹಿನ್ನೆಲೆ ಇದೆ. ಬಿಸು ನಮ್ಮ ಬದುಕಿಗೆ ಆಸರೆಯಾಗುವ ಸಲಕರಣೆಗಳನ್ನು ಆರಾಧಿಸುವ ದಿನ ಹಾಗೂ ಹೊಸ ವರ್ಷವನ್ನು ಸ್ವಾಗತಿಸುವ ಸಮಯ. ಯುವ ಪೀಳಿಗೆಯನ್ನು ವಿದೇಶಿ ಸಂಸ್ಕೃತಿಯ ವ್ಯಾಮೋಹದಿಂದ ಹೊರತಂದು ನಮ್ಮ ಸಂಸ್ಕೃತಿಯ ಆಚರಣೆಗೆ ಅವರನ್ನು ತೊಡಗಿಸುವಲ್ಲಿ ನಾವು ಪ್ರಯತ್ನಿಸಬೇಕಾಗಿದೆ ಎಂದರು.

ಮಂಗಳಾದೇವಿಯ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲ ಸಮಾಜ ಬಾಂಧವರೊಡನೆ ಕಷ್ಟ ಸುಖಗಳಲ್ಲಿ ಭಾಗವಹಿಸಿ ಅಶಕ್ತರಿಗೆ ನೆರವು ನೀಡುತ್ತಿರುವ ಎ. ಸದಾನಂದ ಶೆಟ್ಟಿ ನೇತೃತ್ವದ ಸಂಘಟಣೆಯ ಕಾರ್ಯ ಪ್ರಶಂಸನೀಯ ಎಂದ ಅವರು ಇಂತಹ ಸಮಾಜಮುಖೀ ಚಟುವಟಿಕೆಗಳಿಂದ ಸಂಘಟನೆಗಳು ಬೇಗ ಜನ ಪ್ರೀತಿಗಳಿಸುತ್ತವೆ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಟ್ರಸ್ಟ್‌ನಲ್ಲಿ ಸಮಾನ ಮನಸ್ಕರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪರಿಣತರ ತಂಡವಿದ್ದು, ಇದರಿಂದ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಭವಿಷ್ಯದಲ್ಲಿ ಇನ್ನಷ್ಟು ಸಮಾಜಮುಖೀ ಕಾರ್ಯಕ್ರಮಗಳ ರೂಪುರೇಖೆ ತಯಾರಿಸಿ ಮುನ್ನಡೆಯಬೇಕಾಗಿದೆ ಎಂದರು.

Advertisement

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಧನೆಗೈದ ನಿವೃತ್ತ ವಿಜಯ ಬ್ಯಾಂಕ್‌ನ ವಲಯ ಪ್ರಬಂಧಕ ಎ. ಕೃಷ್ಣಾನಂದ ಶೆಟ್ಟಿ ಮತ್ತು ವಸಂತಿ ಕೆ. ಶೆಟ್ಟಿ ದಂಪತಿ ಇವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಸಮಾರಂಭ ದಲ್ಲಿ ಸಭಿ ಸವಾಲು, ಬಿಸು ಪದರಂಗಿತ, ರಸಪ್ರಸ್ನೆ ಸ್ಪರ್ಧೆಗಳು ಏರ್ಪಡಿಸಲಾಯಿತು.

ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಿ. ಶೆಟ್ಟಿ ಇವರ ನೇತೃತ್ವದಲ್ಲಿ ಅಮೃತ ಪಲಹಾರ ವಿತರಣೆ, ಸಿರಿಮನೆ ಕಮಲಾಕ್ಷ ಬಿ. ಶೆಟ್ಟಿಯವರಿಂದ ತುಳುನಾಡ ಸಂಸ್ಕೃತಿಯ ವಸ್ತು ಪ್ರದರ್ಶನ ಮತ್ತು ಮುರಳೀಧರ ಕಾಮತ್‌ ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಯುವ ವಿಭಾಗದ ಅಧ್ಯಕ್ಷ ದೇವಿಚರಣ್‌ ಶೆಟ್ಟಿ, ಕಾರ್ಯದರ್ಶಿ ವಸಂತ್‌ ಕುಮಾರ್‌ ಶೆಟ್ಟಿ, ಕೊಡಾ¾ಣು ರಾಮಚಂದ್ರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಕಮಲಾಕ್ಷ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವಸಂತ್‌ ಕುಮಾರ್‌ ಶೆಟ್ಟಿ ಪ್ರಸ್ತಾಪಿಸಿ ಸಂಘಟನ ಕಾರ್ಯದರ್ಶಿ ರಾಜಗೋಪಾಲ ರೈ ಸ್ವಾಗತಿಸಿ,ಸೀತಾರಾಮ ಶೆಟ್ಟಿ ವಂದಿಸಿದರು.ಕದ್ರಿ ನವನೀತ ಶೆಟ್ಟಿ ಮತ್ತು ಸಾಹಿಲ್‌ ರೈ, ನಿತೀಶ್‌ ಎಕ್ಕಾರು ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next