Advertisement
ಮೊನ್ನೆ ಕಾಲೇಜು ವಾರ್ಷಿಕೋತ್ಸವ ಆಯ್ತಲ್ಲ, ಅಲ್ಲಿಯವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು. ಅದಾದ ನಂತರವೇ ಮನಸ್ಸು ಇಷ್ಟೊಂದು ಡಿಸ್ಟರ್ಬ್ ಆಗಿರೋದು. ಆ ಕಾರ್ಯಕ್ರಮದಲ್ಲಿ ನೀನು ಅಷ್ಟೊಂದು ಚೆನ್ನಾಗಿ ಹಾಡ್ತೀಯಾ ಅಂತ ನಾನು ಊಹಿಸಿಯೂ ಇರಲಿಲ್ಲ. ಹಾಡು ಮುಗಿದ ಮೇಲೂ ನೀನ್ಯಾಕೆ ಕಾಡ್ತಿದ್ದೀಯ ಅಂತಾನೇ ಗೊತ್ತಾಗ್ತಿಲ್ಲ. ಆವತ್ತೇ ನಿನ್ನ ಪರಿಚಯ ಮಾಡಿಕೊಂಡಿದ್ದರಿಂದ, ಗೆಳೆತನದ ವೇಷ ಧರಿಸಿದ ಪ್ರೀತಿ ನಮ್ಮಿಬ್ಬರಲ್ಲೂ ಹುಟ್ಟಿರುವುದಂತೂ ನಿಜ.
Related Articles
Advertisement
ಇರೋ ಒಂದು ಹೃದಯಾನ ಪುಕ್ಕಟೆ ಕದೊRಂಡು ಹೋಗೋಕೂ ನೀನು ತಯಾರಿದ್ದಂತೆ ಕಾಣಿಸ್ತಿದೆ. ಅದೆಲ್ಲ ಇರಲಿ, ಈಗ ಮ್ಯಾಟರ್‌ಗೆ ಬರ್ತೀನಿ. ಸರಿಯಾಗಿ ಕೇಳಿಸ್ಕೋ, ಯಾರೋ ಕಳಿಸಿದ ಸಂದೇಶವನ್ನೇ ನಿನಗೆ ಫಾರ್ವರ್ಡ್ ಮಾಡಿ ಪ್ರೀತಿ ಒಲಿಸಿಕೊಳ್ಳುವ ಪುಢಾರಿ ಪ್ರೇಮಿಯಲ್ಲ ನಾನು. ನನ್ನೀ ಹೃದಯದಲ್ಲಿ ನಿನಗೆಂದೇ ಹುಟ್ಟಿಕೊಂಡು, ಅಕ್ಷರ ರೂಪದಲ್ಲಿ ನಿನ್ನ ಸೇರೋದಕ್ಕೆ ಬಂದಿರೋ ಭಾವನೆಗಳಿವು. ಈ ನನ್ನ ನಿಷ್ಕಲ್ಮಶ ಭಾವನೆಗಳಿಗೆ ಬೆಲೆ ನೀಡದ ನಿರ್ದಯಿ ನೀನಲ್ಲ ಅಂದೊRàತೀನಿ. ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ ಕಣೇ. ನನ್ನ ಪ್ರೀತಿನ ಒಪ್ಕೋ…
ಅರೇ! ಇದನ್ನೇ ಕಾಲೇಜಿನಲ್ಲಿ ನಾನು ಸಿಕ್ಕಾಗ ನೇರವಾಗಿ ಹೇಳಬಹುದಿತ್ತಲ್ಲ? ಅಂತ ನೀನು ಕೇಳಬಹುದು. ಈ ಮನದ ಭಾವನೆಗಳನ್ನ ಕಾಲೇಜು ಅಂಗಳದಲ್ಲಿ ನಿಂತು ಅಷ್ಟೊಂದು ಜನರ ಮುಂದೆ ಪಟಪಟಾ ಅಂತ ಹೇಳುವಷ್ಟು ಧೈರ್ಯವಿಲ್ಲ. ಅದೇ ಕಾರಣದಿಂದ ಈ ಪತ್ರ ಬರೆದಿರೋದು. ಇದನ್ನು ಓದಿ ಸುಮ್ಮನಾಗಬೇಡ. ಉತ್ತರ ಬರಿ. ಪ್ಲೀಸ್, ನಂಗೆ ಖುಷಿಯಾಗುವಂಥ ಉತ್ತರವನ್ನೇ ಹೇಳು! – ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ