ಕಲಬುರಗಿ: ದೇಶ ಕಂಡ ಅತ್ಯುತ್ತಮನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿವಾಜಪೇಯಿ ಅವರ ಬಗ್ಗೆ ಬಹಳಹಗುರವಾಗಿ ಮಾತನಾಡಿರುವುದು ಅತ್ಯಂತ ಖೇದದ ಸಂಗತಿ. ಅವರಬಗ್ಗೆ ಕುಡುಕರು ಎಂಬಂತೆ ವ್ಯಾಖ್ಯಾನಮಾಡಿರುವುದು ಕಾಂಗ್ರೆಸ್‌ನ ಅತ್ಯಂತಕೆಟ್ಟ ಪರಂಪರೆ ತೋರಿಸುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರರಾಗಿರುವ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರಟೀಕಿಸಿದ್ದಾರೆ.
ಕಾಂಗ್ರೆಸ್ಸಿಗರು ತಮ್ಮ ಸ್ಥಿತಿಗತಿ ಕುರಿತು ಮನನಮಾಡಿಕೊಳ್ಳದಿದ್ದರೆ ಆ ಪಕ್ಷದ ಸರ್ವನಾಶಖಚಿತ. ಮುಖ್ಯವಾಗಿ ಇಂಥ ಕೀಳು ಮಟ್ಟಕ್ಕೆಕಾಂಗ್ರೆಸ್ ಯಾವಾಗಲೂ ಹೋಗುತ್ತದೆಎಂಬುದು ಎಲ್ಲರಿಗೂ ತಿಳಿದ ವಿಚಾರ. ದೇಶದಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನುಶೌಚಾಲಯಕ್ಕೆ ಇಡಬೇಕೆಂದು ಕಾಂಗ್ರೆಸ್‌ನಾಯಕರು ಹೇಳಿದ್ದಾರೆ.
ಅದಕ್ಕೆ ಬಿಜೆಪಿರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಉತ್ತರಿಸುವಾಗ ಕಾಂಗ್ರೆಸ್ ಭಾಷೆಯಲ್ಲೇಉತ್ತರಿಸಿದರೆ ಅವರಿಗೆ ಅರ್ಥವಾಗುತ್ತದೆಎನ್ನುವ ದೃಷ್ಟಿಯಿಂದ ಹುಕ್ಕಾ ಬಾರ್‌ವಿಚಾರ ಎತ್ತಿದ್ದರು ಎಂದಿದ್ದಾರೆ. ಪ್ರಧಾನಿಬಗ್ಗೆ ಕೀಳಾಗಿ ಮಾತನಾಡುವುದುಉತ್ತಮ ಸಂಸ್ಕೃತಿಯೇ? ಹುಕ್ಕಾಬಾರ್ ಬಗ್ಗೆ ಮಾತನಾಡಿದರೆ ಅದುಕೀಳು ಸಂಸ್ಕೃತಿ ಎನಿಸಿದೆಯೇ?ಇದಕ್ಕೆಲ್ಲ ಇಷ್ಟು ರಾದ್ಧಾಂತ ಬೇಕಿತ್ತೇ?ಲಘುವಾಗಿ ಮಾತನಾಡುವ ಸಂಸ್ಕೃತಿಬೇಡ. ಕಾಂಗ್ರೆಸ್‌ನದು ವಂಶ ಪಾರಂಪರ್ಯಸಂಸ್ಕೃತಿ. ಕೆಲವರು ಅದರ ಗುಲಾಮರುಇರಬಹುದು.
ಆದರೆ, ಈ ದೇಶ ಒಂದುಕುಟುಂಬದ ಆಸ್ತಿಯೂ ಅಲ್ಲ ಅಥವಾ ದೇಶದಎಲ್ಲರೂ ಕಾಂಗ್ರೆಸ್ ಗುಲಾಮರೂ ಅಲ್ಲ. ಈದೇಶವು ಎಲ್ಲರ ಆಸ್ತಿ ಎಂಬುದು ನೆನಪಿರಲಿಎಂದು ತಿರುಗೇಟು ನೀಡಿದ್ದಾರೆ.ಕಾಂಗ್ರೆಸ್ ನಡಾವಳಿಕೆಯನ್ನೇ ಅವಲೋಕಿಸಿದೆಶದ ಜನರು ಕಾಂಗ್ರೆಸ್ ಪಕ್ಷವನ್ನು ಸಂಸತ್ತಿನಲ್ಲಿಯಾವ ಮಟ್ಟಕ್ಕೆ ಇಳಿಸಿದ್ದಾರೆ ಎಂಬುದನ್ನುಆ ಪಕ್ಷದ ನಾಯಕರು ನೆನಪಿಸಿಕೊಳ್ಳಬೇಕು.ಒಟ್ಟಾರೆ ಸಂಸತ್, ರಾಜ್ಯಗಳಲ್ಲಿ ಪಕ್ಷದ ಪರಿಸ್ಥಿತಿಏನು ಎಂಬುದನ್ನು ಮನನ ಮಾಡಿಕೊಳ್ಳಿಎಂದು ಹೇಳಿದ್ದಾರೆ.