Advertisement

Fraud Case ಟೆಲಿಗ್ರಾಂ ಆ್ಯಪ್‌ ಟಾಸ್ಕ್ : 11.15 ಲ.ರೂ. ವಂಚನೆ

12:41 AM Mar 04, 2024 | Team Udayavani |

ಮಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ರೇಟಿಂಗ್‌ ಟಾಸ್ಕ್ ನೀಡಿ ಗಾಯತ್ರಿ ಎಂಬವರಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

Advertisement

ಫೆ.23ರಂದು ಗಾಯತ್ರಿ ನಂಬರ್‌ಗೆ ಲಿಂಕ್‌ ಮೆಸೇಜ್‌ ಬಂದಿತ್ತು. ಅದನ್ನು ತೆರೆದಾಗ ಅವರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಲಾಗಿತ್ತು. ಅನಂತರ ಸ್ಟಾರ್‌ ರೇಟಿಂಗ್‌ ಎಂಬ ಟಾಸ್ಕ್ ನೀಡಲಾಗಿದ್ದು, ಮೊದಲು ಗಾಯತ್ರಿ ಅವರಿಂದ 3,000 ರೂ. ಜಮೆ ಮಾಡಿಸಿಕೊಳ್ಳಲಾಗಿತ್ತು.

ಅದಕ್ಕೆ ಪ್ರತಿಯಾಗಿ 9,440 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಯಿತು. ಬಳಿಕ ಗ್ರೂಪ್‌ ಮರ್ಚೆಂಟ್‌ ಟಾಸ್ಕ್ ಮಿಷನ್‌ ಪೂರ್ಣಗೊಳಿಸಲು ಹಣ ಪಾವತಿಸುವಂತೆ ತಿಳಿಸಿ ಫೆ.24ರಿಂದ 28ರ ವರೆಗೆ ಹಂತಹಂತವಾಗಿ ಒಟ್ಟು 11,15,500 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ಮಂಗಳೂರಿನ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next