Advertisement

5ಜಿ ಕರೆ ಪರೀಕ್ಷೆ ಯಶಸ್ವಿ: ಸಚಿವ

11:01 PM May 19, 2022 | Team Udayavani |

ನವದೆಹಲಿ: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ಐಐಟಿ ಮದ್ರಾಸ್‌ನಲ್ಲಿ 5ಜಿ ಕರೆ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

Advertisement

ಇಡೀ 5ಜಿ ತಂತ್ರಜ್ಞಾನವನ್ನು ಭಾರತದಲ್ಲೇ ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಐಐಟಿ ಮದ್ರಾಸ್‌ನಲ್ಲಿ ಯಶಸ್ವಿಯಾಗಿ 5ಜಿ ಕರೆ ಮಾಡಿದ್ದೇನೆ ಎಂದಿದ್ದಾರೆ.

ಮುಂದಿನ ವಾರವೇ 5ಜಿ ಸ್ಪೆಕ್ಟ್ರಮ್‌ ಮಾರಾಟ ಮಾಡುವ ಸಂಬಂಧ ಕ್ಯಾಬಿನೆಟ್‌ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ವರ್ಷಾಂತ್ಯದೊಳಗೆ ದೇಶಾದ್ಯಂತ 5ಜಿ ನೆಟ್‌ವರ್ಕ್‌ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next