Advertisement

ತೆಲಸಂಗ: ಸೈನಿಕ ಭವನ ಭಾರತಾಂಬೆಯ ದೇವಾಲಯ

05:48 PM Jan 06, 2024 | Team Udayavani |

ಉದಯವಾಣಿ ಸಮಾಚಾರ
ತೆಲಸಂಗ: ನಮಗೆ ಭಾರತವನ್ನು ಸುತ್ತಲಾಗದಿದ್ದರೂ ಗ್ರಾಮದಲ್ಲಿರುವ ಸೈನಿಕರನ್ನು ನೋಡಿದಾಗ, ಭೇಟಿಯಾದಾಗ ನಿಜವಾದ ಭಾರತ ದರ್ಶನವಾಗುತ್ತದೆ. ಹೀಗಾಗಿ ಇಂದು ನಿರ್ಮಾಣಗೊಂಡ ಸೈನಿಕ ಭವನ ನಿವೃತ್ತ ಸೆ„ನಿಕರ ಸಂಘಟನೆಯ ಶ್ರಮದ
ಭಾರತಾಂಬೆಯ ದೇವಾಲಯ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

Advertisement

ಗ್ರಾಮದ ನಿವೃತ್ತ ಸೈನಿಕ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಿಸಿದ ನೂತನ ಸೆ„ನಿಕರ ಭವನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸೈನಿಕರು ಹಾಕುವ ಮೆಡಲ್‌ಗ‌ಳು ಭಾರತ ರತ್ನಕ್ಕೆ ಸಮ. ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ
ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಂದ ಇಂದು ರಾಷ್ಟ್ರದ ಜನ ನೆಮ್ಮದಿಯಿಂದ ಇದ್ದಾರೆ ಎಂದರು.

ನಿವೃತ್ತ ಸೇನಾಧಿಕಾರಿ ಕರ್ನಲ್‌ ಬಿ.ಎಸ್‌.ಹಿಪ್ಪರಗಿ ಮಾತನಾಡಿ, ಸರಕಾರ ಮತ್ತು ಸೈನ್ಯ ನಮಗೆ ಏನೆಲ್ಲ ಕೊಟ್ಟಿದೆ. ಇಷ್ಟಿದ್ದರೂ ನಮಗೆ ಇನ್ನೂ ಬೇಕು ಅಂತ ಕೇಳುವುದು ತಪ್ಪು. ನಾವು ದೇಶ ಸೇವೆ ಮಾಡಿದ್ದೇವೆ ನಾವೇ ಶ್ರೇಷ್ಠ ಅನ್ನೋ ಭಾವನೆ ಬೇಡ. ಜನ ನಮ್ಮನ್ನು ಕರೆದು ಗೌರವಿಸುವಂತೆ ನಮ್ಮ ನಡೆ ಇರಬೇಕು . ನಾನೂ ಕೂಡಾ ಹೊಟ್ಟೆಪಾಡಿಗಾಗಿಯೇ ಸೈನ್ಯ ಸೇರಿದ್ದು. ಅದು ದೇಶ ಸೇವೆಯಾಗಿ ಪರಿವರ್ತನೆ ಆಯಿತು. ಸೈನಿಕನಾಗುವ ಭಾಗ್ಯ ಎಲ್ಲರಿಗೂ ಸಿಗಲ್ಲ. ನಮಗೆ  ಸಿಕ್ಕಿದ್ದು ಸೌಭಾಗ್ಯ ಎಂದು ತಿಳಿದು
ಶ್ರೇಷ್ಠತೆಯನ್ನು ಹೊಂದಿರಿ ಎಂದರು.

ಕುಂಬಾರ ಗುರುಪೀಠದ ಬಸವಗುಂಡಯ್ನಾ ಸ್ವಾಮೀಜಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಾಬು ಅರಟಾಳ, ನ್ಯಾಯವಾದಿ ಅಮೋಘ ಖೊಬ್ರಿ, ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ಮಿನಾಕ್ಷಿ ಬಾಣಿ, ಹಿರಿಯರಾದ ಕಾಶೀನಾಥ ಕುಂಬಾರಕರ, ಅರವಿಂದ ಉಂಡೋಡಿ, ಶಿವಪ್ಪಾ ಚೌಗಲೆ, ಬೀಸಲಪ್ಪ ತಾಂವಶಿ, ಶ್ರೀಮಂತ ಸೊಂದಕರ, ಅಣ್ಣಾಸಾಬ ಸಾವಳಗಿ, ಶಿವಮಲ್ಲಪ್ಪಾ ಕೊಳಲಿ, ಗಂಗಪ್ಪಾ ಗಂಗಾದರ, ಮಾರುತಿ ಚವ್ಹಾಣ, ಸುಭಾಸ ಮೋರೆ ಸೇರಿದಂತೆ ನೂರಾರು ಜನ ನಿವೃತ್ತ ಸೈನಿಕರು ಉಪಸ್ಥಿತರಿದ್ದರು. ಗ್ಯಾನು ನಲವಡೆ ಸ್ವಾಗತಿಸಿದರು. ಗಪೂರ ಮುಲ್ಲಾ ನಿರುಪಿಸಿದರು. ಧರೆಪ್ಪಾ ಮಾಳಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next