Advertisement

ತೆಲಸಂಗ: ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ “ದಾಖಲಾತಿ ಕೊರತೆ’

04:16 PM Mar 20, 2024 | Team Udayavani |

ಉದಯವಾಣಿ ಸಮಾಚಾರ
ತೆಲಸಂಗ: ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ವ್ಯಾಮೋಹದಿಂದ ಜನರನ್ನು ದೂರವಿಡಲು ರಾಜ್ಯ ಸರಕಾರ 2019-20ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿತ್ತು. ಆದರೆ ಆಂಗ್ಲ ಮಾಧ್ಯಮ ಶಿಕ್ಷಕರ ನೇಮಕಾತಿ ಮಾಡದೇ ಇರುವುದರಿಂದ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಬಂದ್‌ ಆಗುತ್ತಿರುವುದು ಮಾತ್ರವಲ್ಲ,ದಾಖಲಾತಿ ಪಡೆದ ಮಕ್ಕಳ ಭವಿಷ್ಯ
ಕತ್ತಲೆಗೆ ದೂಡಿದಂತಾಗಿದೆ.

Advertisement

ಸರಕಾರ ಅಥಣಿ ತಾಲೂಕಿನ ಬಾಡಗಿ, ಹಾಲಳ್ಳಿ, ಅಡಹಳ್ಳಿ, ಸಿದ್ದೇವಾಡಿ, ಬೇವನೂರ, ಇಂಗಳಗಾಂವ, ಯಂಕಚ್ಚಿ, ರೆಡ್ಡೇರಹಟ್ಟಿ,
ಅರಳಿಹಟ್ಟಿ ಒಟ್ಟು 9 ಗ್ರಾಮಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿತ್ತು. ಹಾಲಳ್ಳಿ, ಅಡಹಳ್ಳಿ, ಬೆವನೂರ, ನದಿ
ಇಂಗಳಗಾಂವ, ಯಕ್ಕಂಚಿ, ಅರಳಿಹಟ್ಟಿ ಒಟ್ಟು ಸರಕಾರಿ 6 ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದೂ ದಾಖಲಾತಿಯಾಗಿಲ್ಲ. ಇನ್ನೊಂದೆಡೆ ಖಾಸಗಿ ಇಂಗ್ಲಿಷ್‌ ಶಾಲೆಗಳಲ್ಲಿ ಮಕ್ಕಳಿಗೆ ದಾಖಲೆ ಸಿಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ.

ರಾಜ್ಯ ಸರ್ಕಾರ ಕನ್ನಡ ಮಾಧ್ಯಮದ ಶಿಕ್ಷಕರಿಗೆ ಇಂಗ್ಲಿಷ್‌ ಮಾಧ್ಯಮ ತರಬೇತಿ ನೀಡಿ ಇಂಗ್ಲಿಷ್‌ ಶಾಲೆಗಳಲ್ಲಿ ಪಾಠ ಮಾಡಲು ಹಚ್ಚುತ್ತಿದೆ. ಕನ್ನಡ ಮಾಧ್ಯಮದ ಶಿಕ್ಷಕ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಬಹುದೇ? ಒಂದು ವೇಳೆ ನೀಡಿದರೂ ಆಂಗ್ಲ ಮಾಧ್ಯಮ ಪಾಠಕ್ಕೆ ನ್ಯಾಯ ದೊರಕಿಸಲು ಸಾಧ್ಯವೇ? ಎಂಬ ಪ್ರಶ್ನೆ ಪಾಲಕರಲ್ಲಿ  ಎದುರಾಗಿದೆ. ರಾಜ್ಯ ಸರಕಾರದ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭದಿಂದ ನಮ್ಮ ಮಗುವಿಗೂ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯುತ್ತದೆ ಎಂದು ಸಂತಸಪಟ್ಟಿದ್ದ ಬಡ, ಮಧ್ಯಮ ವರ್ಗಗಳ ಕುಟುಂಬಗಳ ಕನಸಿಗೆ ತಣ್ಣೀರೆರಚಿದಂತಾಗಿದೆ.

ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರತ್ಯೇಕ ಟೀಚರ್‌ ಇಲ್ಲ. ಇದ್ದವರಿಗೆ ಟ್ರೇನಿಂಗ್‌ ಕೊಟ್ಟಿದ್ದೇವೆ. ಇಂಗ್ಲಿಷ್‌ ಶಿಕ್ಷಕರ ನೇಮಕಾತಿ ಸರಕಾರ
ಹಂತದಲ್ಲಿ ನಡೆಯಬೇಕಿದೆ. ಅತಿಥಿ ಶಿಕ್ಷಕರನ್ನು ಕೊಡುತ್ತಿದ್ದೇವೆ. ಸದ್ಯಕ್ಕೆ ಟೀಚರ್‌ ಕೊರತೆ ಇಲ್ಲ.

ಮೋಹನಕುಮಾರ ಹಂಚಾಟೆ, 
ಉಪ ನಿರ್ದೇಶಕರು, ಚಿಕ್ಕೋಡಿ.

Advertisement

ಸರಕಾರ ಕೂಡಲೇ ಇಂತಹ ಅವೈಜ್ಞಾನಿಕ ಕ್ರಮಗಳನ್ನು ಕೈ ಬಿಡಬೇಕು. ಪ್ರತ್ಯೇಕ ಆಂಗ್ಲ ಭಾಷಾ ಶಿಕ್ಷಕರ ನೇಮಕ ಮಾಡಬೇಕು.
ಸೊರಗುತ್ತಿರುವ ಆಂಗ್ಲ ಮಾಧ್ಯಮ ಸರಕಾರಿ ಶಾಲೆಗಳಿಗೆ ಜೀವ ತುಂಬಿ ಮಧ್ಯಮ ವರ್ಗದ ಮಕ್ಕಳಿಗೂ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು.
ಹಣಮಂತ ಪಡಸಲಗಿ, ಪಾಲಕರು, ಬಾಡಗಿ.

*ಜಗದೀಶ ತೆಲಸಂಗ

Advertisement

Udayavani is now on Telegram. Click here to join our channel and stay updated with the latest news.

Next