Advertisement

ಅರ್ಚಕರ ಮದುವೆಯಾದ್ರೆ ಸಿಗಲಿದೆ 4 ಲಕ್ಷ!

06:00 AM Oct 20, 2017 | |

ಹೈದರಾಬಾದ್‌: ಅರ್ಚಕರಿಗೆ ಯೋಗ್ಯ ವಧು ಸಿಗುವುದು ಕಷ್ಟ ಎನ್ನುವ ಮಾತು ಪದೇ ಪದೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರವೇ ಇದಕ್ಕೊಂದು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ! 

Advertisement

ಹೌದು, ಇನ್ಮುಂದೆ ಅರ್ಚಕರು ಈ ಸಮಸ್ಯೆ ಎದುರಿಸಬೇಕಾಗಿಲ್ಲ. ಏಕೆಂದರೆ, ಅರ್ಚಕರನ್ನು ವಿವಾಹವಾಗುವ ಯುವತಿಯರಿಗೆ 3 ಲಕ್ಷ ರೂ. ಬಹುಮಾನ ಸಿಗಲಿದೆ. ಜತೆಗೆ ಒಂದು ಲಕ್ಷ ರೂ ಮದುವೆಯ ವೆಚ್ಚವನ್ನೂ ನೀಡಲಾಗುತ್ತದೆ. ತೆಲಂಗಾಣ ರಾಜ್ಯ ಸರ್ಕಾರದ ಹೊಸ ಯೋಜನೆ ಇದು.

ಇತ್ತೀಚೆಗಷ್ಟೇ ಕೆ.ಚಂದ್ರಶೇಖರ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರ ಮಹಿಳೆಯರಿಗೆ ಸೀರೆ ನೀಡುವ ಯೋಜನೆಯನ್ನು ಜಾರಿ ಮಾಡಿತ್ತು. ಇದಕ್ಕೆ ಸಿಕ್ಕ ಭಾರಿ ಜನಪ್ರಿಯತೆ ಬೆನ್ನಲ್ಲೇ ಇದೀಗ ಮತ್ತೂಂದು ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಸಿದಟಛಿತೆ ನಡೆಸಿದೆ.

“ಕಲ್ಯಾಣಮಸ್ತು’ ಎಂಬ ಶಿರೋನಾಮೆಯ ಹೊಸ ಯೋಜನೆ ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ ಎಂದು ತೆಲಂಗಾಣ ಬ್ರಾಹ್ಮಣ ಸಂಕ್ಷೇಮ ಪರಿಷತ್‌ನ ಅಧ್ಯಕ್ಷ ಕೆ.ವಿ.ರಮಣಾಚಾರಿ ತಿಳಿಸಿದ್ದಾರೆ.

ಸರ್ಕಾರದ ವತಿಯಿಂದ ನೀಡಲಾಗುವ 3 ಲಕ್ಷ ರೂ. ಮೊತ್ತವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಶಾಖೆಯಲ್ಲಿ
ವಧು ಮತ್ತು ವರನ ಜಂಟಿ ಖಾತೆಯಲ್ಲಿ ಮೂರು ವರ್ಷಗಳ ಕಾಲ ಠೇವಣಿ ಇರಿಸಲಾಗುತ್ತದೆ. ದಂಪತಿಗೆ ಜನಿಸುವ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಹಣಕಾಸಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗುತ್ತದೆ
ಎಂದಿದ್ದಾರೆ. ಜತೆಗೆ, ಮದುವೆ ಖರ್ಚಿಗೆಂದು 1 ಲಕ್ಷರೂ. ನೀಡಲಾಗುತ್ತದೆ.

Advertisement

ವಿವಾಹವಾಗಲು ಬಯಸುವ ವಧುವಿನ ಹೆತ್ತವರು ಸರ್ಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು. ವರನ ಹೆತ್ತವರೂ ಅದೇ ಮಾದರಿ ಅನುಸರಿಸಬೇಕು. ಇಂತಿಷ್ಟೇ ಸಂಖ್ಯೆಯ ಜೋಡಿಗಳು ಎಂದು ನಿಗದಿ ಮಾಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next