Advertisement

ಹೊಸ ರಾಜಕೀಯ ಲೆಕ್ಕಾಚಾರ: ಟಿಆರ್‌ಎಸ್ ಗೆ ಮರು ನಾಮಕರಣ ಮಾಡಿದ ರಾವ್

02:10 PM Oct 05, 2022 | Team Udayavani |

ಹೈದರಾಬಾದ್ :ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಯನ್ನು ‘ಭಾರತ್ ರಾಷ್ಟ್ರ ಸಮಿತಿ’ (ಬಿಆರ್‌ಎಸ್) ಎಂದು ಬುಧವಾರ ಮರುನಾಮಕರಣ ಮಾಡಲಾಗಿದೆ.

Advertisement

ಪಕ್ಷದ ಮಹಾಸಭೆಯಲ್ಲಿ ಮರುನಾಮಕರಣ ಮಾಡುವ ನಿರ್ಧಾರವನ್ನು ನಿರ್ಣಯ ಅಂಗೀಕರಿಸಲಾಗಿದೆ. ಪಕ್ಷದ ಕಾರ್ಯಕರ್ತರು ಈ ನಿರ್ಧಾರವನ್ನು ಸಂಭ್ರಮಿಸಿದ್ದಾರೆ.

2024 ರ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ನಡೆಸಲು ಸಿದ್ದವಾಗಿರುವ ಚಂದ್ರಶೇಖರ್ ರಾವ್ ಮಧ್ಯಾಹ್ನ 1.19 ರ ಶುಭ ಸಮಯದಲ್ಲಿ ಬಿಆರ್‌ಎಸ್ ಪಕ್ಷದ ಹೆಸರನ್ನು ಘೋಷಿಸಿದರು.

ಇದನ್ನೂ ಓದಿ : ದುಬೈನಲ್ಲಿ ಭಾರತೀಯ-ಅರೇಬಿಕ್ ಶೈಲಿಯ ಭವ್ಯ ಹಿಂದೂ ದೇವಾಲಯ ಲೋಕಾರ್ಪಣೆ: ಇಲ್ಲಿದೆ ಚಿತ್ರಗಳು

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಈಗ ಬಿಆರ್‌ಎಸ್ ಆಗಿದೆ ಎಂದು ರಾವ್ ತಮ್ಮ ಪಕ್ಷದ ಸಭೆಯ ನಂತರ ಘೋಷಿಸಿದರು. ಹೈದರಾಬಾದ್ ನಗರದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಬಿ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.

Advertisement

ಯಾವುದೇ ಪಕ್ಷವನ್ನು ರಾಷ್ಟ್ರೀಯ ಎಂದು ಗುರುತಿಸಲು ಕೆಲವು ನಿಯಮಗಳನ್ನು ಹೊಂದಿರುವ ಚುನಾವಣಾ ಆಯೋಗಕ್ಕೆ “ಹೆಸರು-ಬದಲಾವಣೆ” ರವಾನೆಯಾಗಿದೆ.

ಹೊಸ ಪಕ್ಷವನ್ನು ರಾಷ್ಟ್ರೀಯ ಘಟಕವೆಂದು ಪರಿಗಣಿಸಲು ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಅಸ್ತಿತ್ವವನ್ನು ಹೊಂದಿರಬೇಕು ಅಥವಾ ಯಾವುದೇ ನಾಲ್ಕು ರಾಜ್ಯಗಳು ಮತ್ತು ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಶೇಕಡಾ ಆರರಷ್ಟು ಮತಗಳನ್ನು ಗೆದ್ದಿರಬೇಕು.  ಪಕ್ಷವು ಕನಿಷ್ಠ ಮೂರು ರಾಜ್ಯಗಳಲ್ಲಿ ಶೇಕಡಾ ಎರಡರಷ್ಟು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.ಸದ್ಯಕ್ಕೆ, ತೆಲಂಗಾಣದಲ್ಲಿ ಟಿಆರ್‌ಎಸ್ ಪ್ರಬಲ ಅಸ್ತಿತ್ವವನ್ನು ಹೊಂದಿದ್ದು ರಾಜ್ಯವನ್ನು ಆಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next