Advertisement

ತೆಲಂಗಾಣ ಎನ್ ಕೌಂಟರ್; ಆರೋಪಿಗಳ ಮೃತದೇಹ ಸ್ವೀಕರಿಸಲು ನಾಲ್ಕು ಕುಟುಂಬದ ಪೋಷಕರಿಂದ ನಕಾರ

10:00 AM Dec 07, 2019 | Nagendra Trasi |

ಹೈದರಾಬಾದ್/ತೆಲಂಗಾಣ: ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ತೆಲಂಗಾಣ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದ ನಂತರ ಸುಮಾರು 8ಗಂಟೆಗಳ ಕಾಲ ಹೆಣಗಳು ಅನಾಥವಾಗಿ ಬಿದ್ದಿದ್ದವು. ಮಧ್ಯಾಹ್ನ ಪೊಲೀಸರೇ ನಾಲ್ವರ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿರುವುದಾಗಿ ವರದಿ ತಿಳಿಸಿದೆ.

Advertisement

ಶುಕ್ರವಾರ ಮುಂಜಾನೆ ಆರೋಪಿಗಳಾದ ಮಹಮ್ಮದ್ ಆರೀಫ್, ಜೊಲ್ಲು ಶಿವ, ಜೊಲ್ಲು ನವೀನ್, ಚನ್ನಕೇಶವಲು ಸೇರಿದಂತೆ ನಾಲ್ವರನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದ ಸಂದರ್ಭದಲ್ಲಿ ದೊಣ್ಣೆಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪ್ರಾಣರಕ್ಷಣೆಗಾಗಿ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ನಾಲ್ವರು ಅತ್ಯಾಚಾರ ಎಸಗಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಮೆಹಬೂಬನಗರ್ ಜಿಲ್ಲಾಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ನಾಲ್ವರು ಆರೋಪಿಗಳ ಕುಟುಂಬದವರು ಮೃತದೇಹ ಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ತೆಲಂಗಾಣ ಪೊಲೀಸರೇ ನಾಲ್ವರು ಆರೋಪಿಗಳ ಅಂತ್ಯ ಸಂಸ್ಕಾರ ನಡೆಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next