Advertisement
ತೆಲಂಗಾಣ ಪೊಲೀಸರು ಬೋಗಸ್ ಇಸ್ಲಾಮಿಕ್ ವೆಬ್ ಸೈಟ್ ಒಂದನ್ನು ರೂಪಿಸಿದ್ದು ಅದರ ಮೂಲಕ ಮುಸ್ಲಿಂ ಯುವಕರು ಐಸಿಸ್ ಉಗ್ರ ಸಂಘಟನೆಗೆ ಸೇರುವಂತೆ ಅವರ ಬುದ್ದಿ ಪಲ್ಲಟ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
Related Articles
ತೆಲಂಗಾಣ ಪೊಲೀಸರು ಕೊಟ್ಟಿರುವ ಮಾಹಿತಿಯಿಂದಲೇ ಮಧ್ಯಪ್ರದೇಶ ಪೊಲೀಸರು ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ರೈಲಿನಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣರಾದವರನ್ನು ಬಂಧಿಸಿದ್ದಾರೆ’ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
Advertisement
ಇಲ್ಲಿ ಪ್ರಶ್ನೆ ಏನೆಂದರೆ ತೆಲಂಗಾಣ ಪೊಲೀಸರು ಮುಸ್ಲಿಂ ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರುವಂತೆ ತಮ್ಮ ಬೋಗಸ್ ವೆಬ್ ಸೈಟಿನಲ್ಲಿ ಪ್ರಚೋದಿಸುತ್ತಿದ್ದಾರೆಯೇ ? ಇದು ನ್ಯಾಯಯುತವೇ ? ಇದರಲ್ಲಿ ನೈತಿಕತೆ ಇದೆಯೇ ? ಮುಖ್ಯಮಂತ್ರಿ ಕೆ ಸಿ ಆರ್ ಅವರು ತೆಲಂಗಾಣ ಪೊಲೀಸರಿಗೆ “ಮುಸ್ಲಿಂ ಯುವಕರು ಐಸಿಸ್ ಉಗ್ರ ಸಂಘಟನೆಗೆ ಸೇರುವಂತೆ ಮಾಡಿ ಅವರನ್ನು ಬೋನಿಗೆ ಬೀಳಿಸುವಂತೆ ಮಾಡಬೇಕೆಂದು ಹೇಳಿದ್ದಾರೆಯೇ ? ಅದು ಹೌದೆಂದಾದಲ್ಲಿ ಅದರ ಸಂಪೂರ್ಣ ಹೊಣೆಗಾರಿಕೆ ಹಾಗೂ ನೈತಿಕತೆಯನ್ನು ಹೊತ್ತುಕೊಂಡು ಕೆಸಿಆರ್ ರಾಜೀನಾಮೆ ನೀಡಬೇಕಲ್ಲವೇ ? ಒಂದು ವೇಳೆ ಅವರು (ಕೆಸಿಆರ್) ಹಾಗೆ ಹೇಳಿಲ್ಲವೆಂದಾದರೆ ಅವರು ಈ ರೀತಿಯ ಹೀನಾಯ ಅಪರಾಧ ಎಸಗುತ್ತಿರುವವರ ಬಗ್ಗೆ ತನಿಖೆ ನಡೆಸಿ ಅವರನ್ನು ಶಿಕ್ಷಿಸಬೇಡವೇ ?’ ಎಂದು ದಿಗ್ವಿಜಯ್ ಪ್ರಶ್ನಿಸಿದ್ದಾರೆ.
ತೆಲಂಗಾಣ ಪೊಲೀಸರು ದಿಗ್ವಿಜಯ್ ಸಿಂಗ್ ಅವರ ಈ ಆರೋಪಗಳನ್ನು ಸಾರಾಸಗಟು ಅಲ್ಲಗಳೆದಿದ್ದಾರೆ. ಹಿರಿಯ ಜವಾಬ್ದಾರಿಯುತ ನಾಯಕನಾಗಿರುವವರು ಈ ರೀತಿ ದೇಶ ವಿರೋದಿ ಶಕ್ತಿಗಳ ವಿರುದ್ಧ ಹೋರಾಡುವ ಪೊಲೀಸರ ನೈತಿಕತೆ ಮತ್ತು ಪ್ರತಿಷ್ಠೆಯನ್ನು ಹೀಗೆ ಕೆಳಮಟ್ಟಕ್ಕೆ ಎಳೆದು ತರುವುದು ದುರದೃಷ್ಟಕರ ಎಂದವರು ಹೇಳಿದ್ದಾರೆ.