ಹೈದರಾಬಾದ್ : ಚಿಕ್ಕ ವಯಸ್ಸಿನಲ್ಲೇ ಕೆಟ್ಟ ಅಭ್ಯಾಸಕ್ಕೆ ಕೈ ಹಾಕಿದ ಮಗನನ್ನು ಸರಿ ದಾರಿಗೆ ತರಲು ನಾನಾ ರೀತಿಯ ಕಸರತ್ತುಗಳನ್ನು ಮಾಡಬೇಕಾಗುತ್ತದೆ, ಅದರಂತೆ ಗಾಂಜಾ ವ್ಯಸನಕ್ಕೆ ಒಳಗಾದ ಹದಿನೈದು ವರ್ಷದ ಮಗನನ್ನು ಸರಿ ದಾರಿಗೆ ತರಲು ಎಷ್ಟೇ ಬುದ್ದಿಮಾತು ಹೇಳಿದರೂ ಪ್ರಯೋಜನವಾಗದಿದ್ದಾಗ ಹೆತ್ತ ತಾಯಿಯೇ ತನ್ನ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗ ಥಳಿಸಿ ಕಣ್ಣಿಗೆ ಖಾರದ ಪುಡಿ ಹಾಕಿ ಬೆಂಡೆತ್ತಿದ್ದಾಳೆ.
ಅಂದಹಾಗೆ ಈ ಘಟನೆ ನೀಡಿರುವುದು ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಕೊಡಡ್ ನಲ್ಲಿ. ಹೆತ್ತ ತಾಯಿ ತನ್ನ ಮಗನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಗಾಂಜಾ ಸೇವನೆಯ ಗೀಳು ಹಿಡಿದುಬಿಟ್ಟಿದೆ, ದಿನ ಕಳೆದಂತೆ ಬಾಲಕ ಗಾಂಜಾ ವ್ಯಸನಿಯಾಗತೊಡಗಿದ ಇದರಿಂದ ಚಿಂತೆಗೀಡಾದ ತಾಯಿ ಮಗನಿಗೆ ಬುದ್ದಿಮಾತು ಹೇಳಿದ್ದಾಳೆ, ಆದರೂ ಬುದ್ದಿ ಮಾತು ಕೇಳದ ಮಗ ಶಾಲೆಗೂ ಹೋಗದೆ ಗಾಂಜಾ ಸೇವನೆಯಲ್ಲೇ ತೊಡಗಿದ್ದ ಇದರಿಂದ ಕೋಪಗೊಂಡ ತಾಯಿ ಮಗನನ್ನು ಕೆಟ್ಟ ಚಟಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕೆಂದು ಧೈರ್ಯ ಮಾಡಿ ಮನೆಯ ಹೊರಗಿರುವ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾಳೆ, ಅಲ್ಲದೆ ಕಣ್ಣಿಗೆ ಖಾರದ ಪುಡಿ ಹಾಕಿ ಶಿಕ್ಷೆ ನೀಡಿದ್ದಾಳೆ.. ಕಣ್ಣಿಗೆ ಖಾರದ ಪುಡಿ ಬೀಳುತ್ತಿದ್ದಂತೆ ಉರಿ ತಡೆಯಲಾರದೆ ಹಗ್ಗ ಬಿಚ್ಚುವಂತೆ ಕೋಗಿಕೊಂಡಿದ್ದಾನೆ ಇದು ಯಾವುದಕ್ಕೂ ಜಗ್ಗದ ತಾಯಿ ಕೊನೆಗೆ ಇನ್ನು ಮುಂದೆ ಗಾಂಜಾ ಸೇವನೆ ಮಾಡುವುದಿಲ್ಲ ಎಂದು ಗೋಗರೆದಿದ್ದಾನೆ ಆ ಬಳಿಕ ಕಂಬಕ್ಕೆ ಕಟ್ಟಿಹಾಕಿದ್ದ ಮಗನನ್ನು ತಾಯಿ ಬಿಡಿಸಿದ್ದಾಳೆ…
Related Articles
ತಾಯಿ ಮಗನನ್ನು ಶಿಕ್ಷಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.. ಅಲ್ಲದೆ ತಪ್ಪು ಮಾಡಿದ ಮಗನನ್ನು ಸರಿ ದಾರಿಗೆ ತರಲು ತಾಯಿ ಮಾಡಿದ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..