Advertisement

ಅಮೆರಿಕಾದಲ್ಲಿ ತೆಲಂಗಾಣ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಬರ್ಬರ ಹತ್ಯೆ

11:22 AM Nov 18, 2018 | Team Udayavani |

ಹೈದರಾಬಾದ್‌: ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ಮುಂದುವರಿದಿದ್ದು, ನ್ಯೂಜೆರ್ಸಿಯ ವೆಂಟ್‌ನೊàರ್‌ ಎಂಬಲ್ಲಿ  ನವೆಂಬರ್‌ 15 ರಂದು ತೆಲಂಗಾಣ ಮೂಲದ 61 ವರ್ಷ ಪ್ರಾಯದ ಸುನೀಲ್‌ ಎಡ್ಲಾ ಎನ್ನುವವರನ್ನು 16 ವರ್ಷದ ಬಾಲಕನೊಬ್ಬ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

Advertisement

ಹತ್ಯೆ ಆರೋಪಿಯಾಗಿರುವ ಬಾಲಕನನ್ನು  ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತೆಲಂಗಾಣದ ಮೇಧಕ್‌ ಜಿಲ್ಲೆಯವರಾದ ಸುನೀಲ್‌ ಎಡ್ಲಾ ಅಟ್ಲಾಂಟಿಕ್‌ ನಗರದಲ್ಲಿ ನೈಟ್‌ ಆಡಿಟರ್‌ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ 8 ಗಂಟೆಯ ವೇಳೆಗೆ ಕೆಲಸಕ್ಕೆಂದು ಹೊರಡುತ್ತಿದ್ದ ವೇಳೆ ಮನೆಯ ಎದುರಿಗೆ ಬಂದ ಬಾಲಕ ಗುಂಡಿಕ್ಕಿ ಹತ್ಯೆಗೈದು ಕಾರಿನೊಂದಿಗೆ ಪರಾರಿಯಾಗಿದ್ದ.

ಸುನೀಲ್‌ ಅವರು 1987 ರಲ್ಲೇ ಅಮೆರಿಕಕ್ಕೆ ತೆರಳಿ ವೃತ್ತಿ ಮಾಡುತ್ತಿದ್ದರು. ಈ ತಿಂಗಳ ಕೊನೆಯಲ್ಲಿ ತಾಯಿಯ 95 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತಕ್ಕೆ ಬರುವವರಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 

ಸುನೀಲ್‌ ಅವರು ಅಟ್ಲಾಂಟಾದ ಚರ್ಚ್‌ನಲ್ಲಿ ಪಿಯಾನೋವನ್ನು ಬಾರಿಸುತ್ತಿದ್ದರು ಎಂದು ತಿಳಿದು ಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next