ಹೈದರಾಬಾದ್: ಒಬ್ಬರನ್ನು ಮದುವೆಯಾಗಿ ಜೀವನ ನಿಭಾಯಿವುದು ಸಾಮಾನ್ಯ ಹಾಗೂ ಕೆಲವರಿಗೆ ಇದು ಸವಾಲು. ಆದರೆ ಇಲ್ಲೊಂದು ವಿಚಿತ್ರ ಮದುವೆಯೊಂದು ನಡೆದಿದೆ.
ಎಂ ಸತ್ತಿಬಾಬು ಎಂಬ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಇತ್ತೀಚೆಗೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಗ್ರಾಮವೊಂದರಲ್ಲಿ ಅನೇಕ ಮಂದಿಯ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದು ಸಾಮಾನ್ಯ ಮದುವೆಯಲ್ಲ. ಇಲ್ಲಿ ಎಂ ಸತ್ತಿಬಾಬು ಮದುವೆಯಾಗಿರುವುದು ಒಬ್ಬರನ್ನಲ್ಲ ಇಬ್ಬರನ್ನು.!
ಕಳೆದ ಮೂರು ವರ್ಷಗಳಿಂದ ಯರ್ರಬೋರು ಗ್ರಾಮದ ಎಂ ಸತ್ತಿಬಾಬು ಬೇರೆ ಬೇರೆ ಗ್ರಾಮದ ಸ್ವಪ್ನಾ ಮತ್ತು ಸುನೀತಾ ಎನ್ನುವವರನ್ನು ಪ್ರೀತಿಸುತ್ತಿದ್ದರು. ಒಂದು ರೀತಿ ಇಬ್ಬರೊಂದಿಗೂ ಸತ್ತಿಬಾಬು ಲಿವಿಂಗ್ ರಿಲೇಷನ್ ಶಿಪ್ ನಂತೆ ಇದ್ದರು. ಇಬ್ಬರೊಂದಿಗೆ ಸತ್ತಿಬಾಬು ದೈಹಿಕ ಸಂಪರ್ಕವನ್ನು ಹೊಂದಿ ಮಕ್ಕಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಹಸೆಮಣೆಯಲ್ಲೇ ಕುಡಿದು ಟೈಟಾಗಿ ಬಿದ್ದ ವರ: ಮದುವೆಯನ್ನೇ ರದ್ದು ಮಾಡಿ ಹೊರ ನಡೆದ ವಧು; ವಿಡಿಯೋ
ಸುನೀತಾ ಗಂಡು ಮಗುವಿಗೆ ಜನ್ಮ ನೀಡದ್ದು, ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮದುವೆಯ ವಿಚಾರವಾಗಿ ಸತ್ತಿಬಾಬು ಅವರೊಂದಿಗೆ ಎರಡೂ ಕುಟುಂಬಗಳು ಜಗಳವಾಡಿದೆ. ಅದ್ಯಾಗೋ ಸತ್ತಿಬಾಬು ಎರಡು ಕುಟುಂಬದವರ ಮನವೊಲಿಸಿ ಇಬ್ಬರನ್ನು ಮದುವೆಯಾಗುವುದಾಗಿ ಮದುವೆ ಆಮಂತ್ರಣದಲ್ಲಿ ಇಬ್ಬರ ಹೆಸರನ್ನು ಅಚ್ಚಾಗಿಸುತ್ತಾರೆ.
ಈ ವಿಚಾರ ಕೆಲ ಮಾಧ್ಯಮದವರಿಗೆ ತಿಳಿದಿದೆ. ಅಧಿಕಾರಿಗಳು ಬಂದು ಮದುವೆ ನಿಲ್ಲಿಸುತ್ತಾರೆ ಎನ್ನುವ ಭೀತಿಯಲ್ಲೇ ಮೂರು ಕುಟುಂಬ ಮುಹೂರ್ತಕ್ಕಿಂತ ಕೆಲ ಸಮಯದ ಮುಂಚೆಯೇ ಮದುವೆ ಕಾರ್ಯಕ್ರಮವನ್ನು ನೆರವೇರಿಸಿದೆ.
ಕೆಲ ಬುಡುಕಟ್ಟು ಸಮುದಾಯದಲ್ಲಿ ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಇಬ್ಬರನ್ನೂ ಮುದುವೆಯಾಗುವ ಸಂಪ್ರದಾಯವಿದೆ.