Advertisement

ವಿಮಾನದಲ್ಲಿ ಐಪಿಎಸ್ ಅಧಿಕಾರಿಯ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆ

09:14 AM Jul 24, 2022 | Team Udayavani |

ಅಮರಾವತಿ: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ದೆಹಲಿಯಿಂದ ಹೈದರಾಬಾದ್‌ ಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಐಪಿಎಸ್ ಅಧಿಕಾರಿಯೊಬ್ಬರ ಜೀವ ಉಳಿಸಿದ್ದಾರೆ.

Advertisement

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 1994ರ ಬ್ಯಾಚ್‌ನ ಅಧಿಕಾರಿಯಾಗಿರುವ ಕೃಪಾನಂದ ತ್ರಿಪಾಠಿ ಉಜೇಲಾ ಅವರು ಸದ್ಯ ಹೈದರಾಬಾದ್‌ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಮೇಡಂ ಗವರ್ನರ್ ನನ್ನ ಜೀವವನ್ನು ಉಳಿಸಿದರು. ಅವರು ನನಗೆ ತಾಯಿಯಂತೆ ಸಹಾಯ ಮಾಡಿದರು. ಇಲ್ಲದಿದ್ದರೆ ನಾನು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ” ಎಂದು ಉಜೇಲಾ ಶನಿವಾರ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಆಂಧ್ರಪ್ರದೇಶ ಕೇಡರ್‌ ಗೆ ಸೇರಿದ ಉಜೇಲಾ ಅವರು ಪ್ರಸ್ತುತ ಹೆಚ್ಚುವರಿ ಡಿಜಿಪಿ (ರಸ್ತೆ ಸುರಕ್ಷತೆ) ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ಮಂಗಳೂರು: ಬೆಂಗಳೂರಿಗೆ ಹೆಚ್ಚುವರಿ ವಿಶೇಷ ರೈಲು ಬೇಡಿಕೆಗೆ ಸ್ಪಂದಿಸಿದ ರೈಲ್ವೇ ಮಂಡಳಿ

Advertisement

ವೃತ್ತಿಯಲ್ಲಿ ವೈದ್ಯರಾಗಿರುವ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಶುಕ್ರವಾರ ಮಧ್ಯರಾತ್ರಿ ತೆಲಂಗಾಣ ರಾಜಧಾನಿಗೆ ವಿಮಾನ ಪ್ರಯಾಣ ನಡೆಸುತ್ತಿದ್ದಾಗ ಐಪಿಎಸ್ ಅಧಿಕಾರಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಅವರನ್ನು ಭೇಟಿ ಮಾಡಿದರು.

“ಆ ಸಮಯದಲ್ಲಿ ನನ್ನ ಹೃದಯ ಬಡಿತವು ಕೇವಲ 39 ಆಗಿತ್ತು, ಮೇಡಮ್ ಗವರ್ನರ್ ಅದನ್ನು ತಿಳಿದು ಅವರು ನನಗೆ ಮುಂದೆ ಬಾಗಲು ಸಲಹೆ ನೀಡಿದರು ಮತ್ತು ನನಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡಿದರು, ಇದು ನನ್ನ ಉಸಿರಾಟವನ್ನು ಸ್ಥಿರಗೊಳಿಸಿತು” ಎಂದು ಉಜೇಲಾ ಹೇಳಿದರು.

“ಗವರ್ನರ್ ಮೇಡಂ ಆ ವಿಮಾನದಲ್ಲಿ ಇಲ್ಲದಿದ್ದರೆ, ನನೆ ಆಸ್ಪತ್ರೆಗೆ ಬರಲೂ ಆಗುತ್ತಿರಲಿಲ್ಲ. ಅವರು ನನಗೆ ಹೊಸ ಜೀವನವನ್ನು ನೀಡಿದರು,” ಎಂದು ಸೌಂದರರಾಜನ್ ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next