Advertisement

Telangana Elections 2023: ಮತ ಚಲಾಯಿಸಿದ ಜೂ.ಎನ್​ಟಿಆರ್, ಅಲ್ಲು ಅರ್ಜುನ್…

09:14 AM Nov 30, 2023 | Team Udayavani |

ಹೈದರಾಬಾದ್: ಪಂಚರಾಜ್ಯಗಳ ಪೈಕಿ ಕೊನೆಯ ರಾಜ್ಯವಾದ ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಇಂದು ಮತದಾನ ಆರಂಭಗೊಂಡಿದ್ದು, ಮತದಾರರು ಇಂದು ಬೆಳಗ್ಗಿನಿಂದಲೇ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಿದ್ದಾರೆ.

Advertisement

ತೆಲಂಗಾಣ ವಿಧಾನಸಭೆಯ 119 ಸದಸ್ಯರನ್ನು ಆಯ್ಕೆ ಮಾಡಲು ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಅಧಿಕಾರಿಗಳ ಪ್ರಕಾರ, ರಾಜ್ಯದ 35,655 ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ರಾಜ್ಯದ 3.6 ಕೋಟಿ ಮತದಾರರು 2,290 ಅಭ್ಯರ್ಥಿ ಗಳ ಭವಿಷ್ಯ ಬರೆಯಲಿದ್ದಾರೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌, ಅವರ ಪುತ್ರ- ಸಚಿವ ಕೆ.ಟಿ. ರಾಮರಾವ್‌, ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎ.ರೇವಂತ್‌ ರೆಡ್ಡಿ, ಬಿಜೆಪಿಯ ಲೋಕಸಭಾ ಸದಸ್ಯ ಬಂಡಿ ಸಂಜಯ ಕುಮಾರ್‌ ಮತ್ತು ಡಿ.ಅರವಿಂದ ಪ್ರಮುಖರು ಕಣದಲ್ಲಿದ್ದಾರೆ..

ಬಿಆರ್‌ಎಸ್ ಎಲ್ಲಾ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಕ್ರಮವಾಗಿ 111 ಮತ್ತು 8 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಸಿಪಿಐಗೆ ಒಂದು ಸ್ಥಾನವನ್ನು ನೀಡಿದೆ ಮತ್ತು ಇತರ 118 ರಿಂದ ಸ್ಪರ್ಧಿಸುತ್ತಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ನಗರದ ಒಂಬತ್ತು ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದೆ.

ಬೆಳಿಗ್ಗೆಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಗೆ ಮತದಾರರು ಬಂದು ಮತದಾನ ಮಾಡುತ್ತಿದ್ದು ಅದರಂತೆ ಹೈದರಾಬಾದ್‌ನ ಪಿ ಓಬುಲ್ ರೆಡ್ಡಿ ಪಬ್ಲಿಕ್ ಸ್ಕೂಲ್‌ನಲ್ಲಿರುವ ಮತಗಟ್ಟೆಗೆ ನಟ ಜೂನಿಯರ್ ಎನ್‌ಟಿಆರ್ ಮತ್ತು ಅವರ ಕುಟುಂಬ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಲ್ಲು ಅರ್ಜುನ್ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಜೊತೆಗೆ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನ ಜುಬಿಲಿ ಹಿಲ್ಸ್ ಶಾಸಕ ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್‌ನಲ್ಲಿ ಮತ ಚಲಾಯಿಸಿದರು.

Advertisement

ಇದನ್ನೂ ಓದಿ: Mangaluru ಪ್ರಯಾಣಿಕರೇ ಗಮನಿಸಿ: ವಿಮಾನ ಸಂಚಾರ ಸಮಯ ಬದಲು

 

Advertisement

Udayavani is now on Telegram. Click here to join our channel and stay updated with the latest news.

Next