Advertisement

Telangana Election; ಮಹಿಳಾ ಮತದಾರರ ಸೆಳೆಯಲು ಕಸರತ್ತು

09:09 PM Nov 20, 2023 | Team Udayavani |

ತೆಲಂಗಾಣದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಹಿಳಾ ಮತದಾರರತ್ತ ಎಲ್ಲ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿದೆ. ಪ್ರತಿ ಪಕ್ಷಗಳೂ ಮಹಿಳಾ ಕೇಂದ್ರಿತ ಘೋಷಣೆಗಳನ್ನು ಮಾಡುವ ಮೂಲಕ ರಾಜ್ಯದ ಹೆಂಗಳೆಯರನ್ನು ಸೆಳೆಯಲಾರಂಭಿಸಿವೆ. ಇದಕ್ಕೆ ಬಲವಾದ ಕಾರಣವೂ ಇದೆ. ಅದೇನು ಗೊತ್ತಾ? ತೆಲಂಗಾಣದ ಒಟ್ಟಾರೆ ಮತದಾರರ ಪೈಕಿ ಪುರುಷರಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿದ್ದಾರೆ.

Advertisement

ರಾಜ್ಯದಲ್ಲಿ ಸುಮಾರು 3.26 ಕೋಟಿ ಮತದಾರರಿದ್ದರೆ, ಈ ಪೈಕಿ ಪುರುಷರ ಸಂಖ್ಯೆ 1.62 ಕೋಟಿ ಹಾಗೂ ಮಹಿಳೆಯರ ಸಂಖ್ಯೆ 1.63 ಕೋಟಿಯಾಗಿದೆ. ಮಹಿಳೆಯರು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೇ ಕಾರಣಕ್ಕಾಗಿ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌ ಅವರು ಮಹಿಳೆಯರಿಗೆಂದೇ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ನಗರ ಪ್ರದೇಶದ ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಮಹಿಳಾ ವಿವಿಗಳು, ಕೈಗಾರಿಕಾ ಪಾರ್ಕ್‌ಗಳಲ್ಲಿ ಶೇ.10ರಷ್ಟು ನಿವೇಶನಗಳು ಮಹಿಳೆಯರಿಗೆ ಮೀಸಲು ಸೇರಿ ಹಲವು ಘೋಷಣೆಗಳನ್ನು ಮಾಡಲಾಗುವುದು ಎಂದೂ ತಿಳಿಸಿದ್ದಾರೆ. ಕಾಂಗ್ರೆಸ್‌ ಈಗಾಗಲೇ ಮಾಸಿಕ 2,500 ರೂ. ಆರ್ಥಿಕ ನೆರವು, ಉಚಿತ ಬಸ್‌ ಸಂಚಾರ, 500ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ಸೇರಿದಂತೆ ಹಲವು ಮಹಿಳಾ ಕೇಂದ್ರಿತ ಗ್ಯಾರಂಟಿಗಳನ್ನು ಘೋಷಿಸಿದೆ. ಈ ವಿಚಾರದಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಮಹಿಳೆಯರಿಗೆ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿ, 4 ಉಚಿತ ಗ್ಯಾಸ್‌ ಸಿಲಿಂಡರ್‌, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌ನ ಆಶ್ವಾಸನೆ ನೀಡಿದೆ. ಮಹಿಳೆಯರು ಯಾವ ಪಕ್ಷದ ಭರವಸೆಗಳಿಗೆ ಮಾರು ಹೋಗುತ್ತಾರೆಂದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next