Advertisement
ಇಂಥ ನೂರಾರು ಆಕ್ರೋಶಭರಿತ ಮಾತುಗಳು ತೆಲಂಗಾಣಾದ್ಯಂತ ಪ್ರತಿಧ್ವನಿಸುತ್ತಿವೆ. ಸಹಾಯ ನೀಡುವ ನೆಪದಲ್ಲಿ ಹೈದರಾಬಾದ್‌ನ 25ರ ಹರೆಯದ ಪಶುವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಸುಟ್ಟು ಹಾಕಿದ ಘಟನೆಯು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ವ್ಯಾಪಕ ಪ್ರತಿಭಟನೆಗಳು ಆರಂಭವಾಗಿವೆ.
Related Articles
ಮನವೊಲಿಕೆಗೆ ಬಗ್ಗದ್ದಕ್ಕೆ ಕೊನೆಗೆ ಪೊಲೀಸರು ಲಘು ಲಾಠೀಪ್ರಹಾರ ಮಾಡುವ ಮೂಲಕ ಪ್ರತಿಭಟನಕಾರರನ್ನು ಚದುರಿಸಿದರು. ವಿದ್ಯಾರ್ಥಿ ಗಳ ಮತ್ತೂಂದು ಗುಂಪು ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ, ಆಕೆಯ ಮನೆ ಮುಂದೆ ಪ್ರತಿಭಟನೆ ನಡೆಸಿದೆ. ಜತೆಗೆ ಶಂಶಾಬಾದ್‌ನಲ್ಲಿ ರಸ್ತೆತಡೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಈ ನಡುವೆ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಸ್ಥಳೀಯ ಬಾರ್ ಅಸೋಸಿಯೇಶನ್ ಕೂಡ ನಿರ್ಧಾರ ಕೈಗೊಂಡಿದೆ.
Advertisement
ಜನರ ತೀವ್ರ ಪ್ರತಿಭಟನೆಯಿಂದ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಅಸಾಧ್ಯವಾದ ಕಾರಣ ಪೊಲೀಸ್ ಠಾಣೆಗೆ ಆಗಮಿಸಿದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರು 14 ದಿನಗಳ ನ್ಯಾಯಾಂಗ ಬಂಧನದ ಆದೇಶ ಜಾರಿ ಗೊಳಿಸಿದರು. ಅನಂತರ ಆರೋಪಿಗಳನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವಾಹನಗಳ ಮೇಲೆ ಪ್ರತಿಭಟನಕಾರರು ಕಲ್ಲೆಸೆದರು. ರಾಜ್ಯಪಾಲರ ಭರವಸೆ
ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಕೋರ್ಟ್ ನಲ್ಲಿ ದಿನಂಪ್ರತಿ ವಿಚಾರಣೆ ನಡೆಸಲು ನಿರ್ಧರಿಸ ಲಾಗಿದೆ. ಸಂತ್ರಸ್ತೆಯ ಮನೆಯವರಿಗೆ ನ್ಯಾಯ ಒದಗಿಸಲು ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ತೆಲಂಗಾಣ ರಾಜ್ಯಪಾಲರು ತಿಳಿಸಿದ್ದಾರೆ.