Advertisement

ತೆಲಂಗಾಣದಲ್ಲಿ ಖಾಸಗಿ ವಿಮಾನ ಪತನ: ಟ್ರೈನಿ ಮಹಿಳಾ ಪೈಲಟ್ ಸಾವು

05:45 PM Feb 26, 2022 | Team Udayavani |

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಶನಿವಾರ (ಫೆ.26) ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ವಿಮಾನವೊಂದು ಪತನಗೊಂಡು ಮಹಿಳಾ ಟ್ರೈನಿ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ, ಪೊಲೀಸ್ ಅಧಿಕಾರಿಯೊಬ್ಬರು, ನೆರೆಯ ಆಂಧ್ರಪ್ರದೇಶದ ಕಡೆಯಿಂದ ಬಂದ ದುರದೃಷ್ಟಕರ ವಿಮಾನವು ಮಧ್ಯಾಹ್ನದ ಮೊದಲು ಜಿಲ್ಲೆಯ ಹಳ್ಳಿಯೊಂದರಲ್ಲಿ ಪತನಗೊಂಡಿತು ಎಂದು ಹೇಳಿದರು. ಮಹಿಳಾ ಟ್ರೈನಿ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಟ್ರೈನಿ ಪೈಲಟ್‌ನ ದುರಂತ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅಪಘಾತ ಸ್ಥಳಕ್ಕೆ ತನಿಖಾ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

“ತೆಲಂಗಾಣದ ನಲ್ಗೊಂಡದಲ್ಲಿ ತರಬೇತಿ ವಿಮಾನದ ದುರಂತದ ಬಗ್ಗೆ ಕೇಳಿ ಆಘಾತವಾಗಿದೆ. ತನಿಖಾ ತಂಡವು ಸ್ಥಳಕ್ಕೆ ಧಾವಿಸಿದೆ. ದುರದೃಷ್ಟವಶಾತ್, ನಾವು ವಿದ್ಯಾರ್ಥಿ ಪೈಲಟ್ ಅನ್ನು ಕಳೆದುಕೊಂಡಿದ್ದೇವೆ. ದುಃಖಿತ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪ” ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next