Advertisement
ಸದ್ಯ ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ಮತ್ತು ಸರಕಾರ ತಪ್ಪನ್ನು ಒಪ್ಪಿಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ಪ್ರಾಥಮಿಕ ವರದಿಯಲ್ಲಿ ತಾಂತ್ರಿಕ ಮತ್ತು ಮಾನವ ದೋಷಗಳಿವೆ ಎಂಬುದು ಸಾಬೀತಾಗಿದೆ. ಆದರೆ ಕೆಲವೇ ವಿದ್ಯಾರ್ಥಿಗಳ ಫಲಿ ತಾಂಶದ ಮೇಲೆ ಇದು ಪರಿಣಾಮ ಉಂಟು ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.ಈಗ ಉತ್ತರಪತ್ರಿಕೆಗಳನ್ನು ಉಚಿತವಾಗಿ ಮರು ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದ್ದು, ಈಗಾಗಲೇ ಆರಂಭವಾಗಿದೆ.
ಮೊದಲ ಬಾರಿ ಪ್ರಕಟವಾದ ಫಲಿತಾಂಶದಲ್ಲಿ ಹಲವರಿಗೆ ತಪ್ಪು ಅಂಕಗಳನ್ನು ನೀಡಿರುವುದು ಮರುಮೌಲ್ಯಮಾಪನದ ವೇಳೆ ತಿಳಿದುಬಂದಿದೆ. ಪರೀಕ್ಷೆಗೆ ಹಾಜರಾದರೂ ಫಲಿತಾಂಶದಲ್ಲಿ ಗೈರು ಎಂದು ನಮೂದಿಸಿರುವುದು ಮತ್ತು ಮೊದಲ ವರ್ಷದಲ್ಲಿ ಪಾಸಾಗಿದ್ದರೂ ಎರಡೂ ವರ್ಷಗಳ ಸಂಯೋಜಿತ ಫಲಿತಾಂಶ ನೀಡುವಾಗ ಫೇಲ್ ಎಂದು ನಮೂದಿಸಿರುವುದು ತಿಳಿದುಬಂದಿದೆ.