ತೆಕ್ಕಟ್ಟೆ: ಜನ ಸಂಘದ ಮೂಲ ಸ್ವರೂಪವನ್ನು ಉಳಿಸಿಕೊಂಡು ಇಂದು ಬಿಜೆಪಿ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಸಮಿತಿಗಳ ಮೂಲಕ ಕೇಂದ್ರ ಸಮಿತಿಗೆ ಪಾರ್ಟಿಯನ್ನು ಬಲಪಡಿಸುವ ವ್ಯವಸ್ಥೆ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕಾದ ಅಗತ್ಯ ಇದೆ ಎಂದು ವಿ.ಪ. ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಎ. 16ರಂದು ತೆಕ್ಕಟ್ಟೆ ಸ.ಪ.ಪೂ. ಕಾಲೇಜಿನ ಎದುರಿನಲ್ಲಿರುವ ಪುರಾಣಿಕ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಬಿಜೆಪಿ ತೆಕ್ಕಟ್ಟೆ ಸ್ಥಾನೀಯ ಸಮಿತಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ನೂತನ ತೆಕ್ಕಟ್ಟೆ ಬಿಜೆಪಿ ಕಚೇರಿಯ ಉದ್ಘಾ ಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ತೆಕ್ಕಟ್ಟೆ ಸ್ಥಾನೀಯ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು ಹಾಗೂ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ವಾರ್ಡ್‌ನ ಪ್ರಮುಖ ಯುವ ಸಂಘಟಕರನ್ನು ಗುರುತಿಸಿ ಗೌರವಿಸಲಾಯಿತು.
ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿ ಇದರ ಅಧ್ಯಕ್ಷ ಮಲ್ಯಾಡಿ ರಾಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ವಿಧಾನ ಸಭಾಕ್ಷೇತ್ರದ ಗ್ರಾಮೀಣ ಭಾಗದಲ್ಲಿ ನೂತನವಾಗಿ ಸುವ್ಯವಸ್ಥಿತವಾಗಿ ಉದ್ಘಾಟನೆಗೊಂಡಿ ರುವ ತೆಕ್ಕಟ್ಟೆ ಬಿಜೆಪಿ ಕಚೇರಿಯು ಗ್ರಾಮೀಣ ಭಾಗದ ಮೊದಲ ಮಾದರಿ ಬಿಜೆಪಿ ಕಚೇರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಅಲ್ಲದೆ ಗ್ರಾಮೀಣ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಜತೆಗೆ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುವ ದೃಷ್ಟಿಯಿಂದ ಪಕ್ಷದಲ್ಲಿ ಯುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ ಎಂದರು.
ಬಿಜೆಪಿ ತೆಕ್ಕಟ್ಟೆ ಸ್ಥಾನೀಯ ಸಮಿತಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ನೂತನ ತೆಕ್ಕಟ್ಟೆ ಬಿಜೆಪಿ ಕಚೇರಿಯನ್ನು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ರಾಜೇಶ್ ಕಾವೇರಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್, ಮುಂಬಯಿ ಉದ್ಯಮಿ ಉಳೂ¤ರು ಮೋಹನದಾಸ್ ಶೆಟ್ಟಿ ಕಟ್ಟೆಮನೆ, ಬೆಳ್ವೆ ವಸಂತ್ ಕುಮಾರ್ ಶೆಟ್ಟಿ, ಮುಂಬಯಿ ಉದ್ಯಮಿ ರತ್ನಾಕರ ಶೆಟ್ಟಿ ಗಿಳಿಯಾರು ಬಡಾಮನೆ, ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ಮಹೇಶ್ ಪೂಜಾರಿ, ದಿನಕರ ಹೆರ್ಗ, ವಿಟuಲ ಪೂಜಾರಿ, ಕೃಷ್ಣ ನಾಯ್ಕ, ಶಾನಾಡಿ ನವೀನ್ ಹೆಗ್ಡೆ, ಬಿಜೆಪಿ ಜಿಲ್ಲಾ ಪಂಚಾಯತ್ ಮತ್ತು ಗ್ರಾ.ಪಂ. ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿ ಇದರ ಅಧ್ಯಕ್ಷ ಮಲ್ಯಾಡಿ ರಾಜೀವ ಶೆಟ್ಟಿ ಸ್ವಾಗತಿಸಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಸಂಘಟಕ ಅವಿನಾಶ್ ಶೆಟ್ಟಿ ಪಠೇಲರಮನೆ ಹಾಗೂ ಪ್ರಶಾಂತ್ ಶೆಟ್ಟಿ ಪಡುಕೆರೆ ನಿರೂಪಿಸಿ, ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಅಧ್ಯಕ್ಷ ರಾಜೇಶ್ ಕಾವೇರಿ ವಂದಿಸಿದರು.