Advertisement
ಇದರಿಂದ ಗ್ರಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಡಚಣೆ ಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪೂರ್ಣಕಾಲಿಕ ಪಿಡಿಓ ಇಲ್ಲ
ಈ ಹಿಂದೆ ಗ್ರಾ.ಪಂ. ಪಿಡಿಒ ಆಗಿ ಕಾರ್ಯ ನಿರ್ವಹಿಸುತಿದ್ದ ದೀಪಾ ಎನ್ನುವವರು ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿದ್ದರು. ಆದರೆ ಏಕಾಏಕಿ ಅವರ ವರ್ಗಾವಣೆಯಾಗಿದ್ದು, ಇದನ್ನು ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡುವ ಮೂಲಕ ಗ್ರಾಮಸ್ಥರು ತೀವ್ರ ರೀತಿಯಲ್ಲಿ ಪ್ರತಿಭಟಿಸಿದ್ದರು. ಆದರೂ ಏನೂ ಪ್ರಯೋಜನವಾಗಿಲ್ಲ. ಆ ನಂತರದಲ್ಲಿ ಇಲ್ಲಿಗೆ ಬೇರಾವುದೇ ಅಧಿಕಾರಿಯ ನಿಯುಕ್ತಿ ಆಗಿಲ್ಲ. ಇದರಿಂದ ಪಂಚಾಯತ್‌ನ ಅಭಿವೃದ್ಧಿ ನಿರ್ಣಯಗಳು ಹಾಗೇ ಬಾಕಿ ಉಳಿದಿವೆ.
ತೆಕ್ಕಟ್ಟೆಯಲ್ಲಿ ಪಿಡಿಒ ಇಲ್ಲದ್ದರಿಂದ ವೀರಶೇಖರ್ ಎಂಬುವವರನ್ನು ತಾತ್ಕಾಲಿಕ ವಾಗಿ ಇಲ್ಲಿಗೆ ನಿಯುಕ್ತಿಗೊಳಿಸಲಾಗಿದೆ. ಆರೆ ಅವರು ಮರವಂತೆ, ಬೇಳೂರು ಗ್ರಾ.ಪಂ.ಗಳ ಜತೆ ತೆಕ್ಕಟ್ಟೆ ಬಗ್ಗೆಯೂ ಗಮನಹರಿಸಬೇಕಿದೆ. ಇದರಿಂದ ಅವರ ಮೇಲೂ ಒತ್ತಡ ಸೃಷ್ಟಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. 2 ದಿನಗಳಲ್ಲಿ ಪಿಡಿಒ ನೇಮಕ
ಕಳೆದ ಒಂದು ವರ್ಷದಿಂದಲೂ ತೆಕ್ಕಟ್ಟೆ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಓ ಅವರು ಕಾರ್ಯ
ನಿರ್ವಹಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಎರಡು ತಿಂಗಳು ಪಿಡಿಓಗಳಿಗೆ ವಿಶೇಷ ತರಬೇತಿ ನಡೆಯುತ್ತಿದ್ದು ಇನ್ನು 2 ದಿನಗಳಲ್ಲಿ ಪೂರ್ಣಕಾಲಿಕ ಪಿಡಿಒ ಒಬ್ಬರನ್ನು ತೆಕ್ಕಟ್ಟೆ ಗ್ರಾ.ಪಂ.ಗೆ ನೇಮಿಸುತ್ತೇವೆ.
– ಕಿರಣ್ ಪಡೆ°àಕರ್, ಇಒ,ತಾ.ಪಂ. ಕುಂದಾಪುರ
Related Articles
ಈಗಿನ ಪಿಡಿಒ ಅವರಿಗೆ ಮೂರು ಗ್ರಾ.ಪಂ.ಗಳ ಜವಾಬ್ದಾರಿಯಿದ್ದು, ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಆದರೂ ಅವರು ಕಡತಗಳಿಗೆ ಸಹಿ ಹಾಕಲು ಸ್ಪಂದಿಸುತ್ತಿದ್ದಾರೆ. ಕೂಡಲೇ ಇಲ್ಲಿಗೆ ಪೂರ್ಣಕಾಲಿಕ ಪಿಡಿಒ ನೇಮಕವಾದರೆ ಉತ್ತಮ.
– ಶೇಖರ್ ಕಾಂಚನ್ ಕೊಮೆ, ಅಧ್ಯಕ್ಷರು ಗ್ರಾ.ಪಂ.ತೆಕ್ಕಟ್ಟೆ
Advertisement
– ಟಿ. ಲೋಕೇಶ್ ಆಚಾರ್ಯ