Advertisement

ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದ ತೆಕ್ಕಟ್ಟೆ ಸರಕಾರಿ ಪ್ರಾ. ಶಾಲೆ

01:01 AM May 30, 2019 | sudhir |

ತೆಕ್ಕಟ್ಟೆ: ಗುಣಾತ್ಮಕ ಶಿಕ್ಷಣದಲ್ಲಿ ಶಿಕ್ಷಣ ಇಲಾಖೆಯಿಂದ ಎ ಗ್ರೇಡ್‌ ಪಡೆದುಕೊಂಡಿರುವ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಈ ಬಾರಿ ದಾಖಲಾತಿಯಲ್ಲೂ ದಾಖಲೆ ಬರೆದಿದೆ.

Advertisement

1892ರಲ್ಲಿ ಸ್ಥಾಪನೆಯಾಗಿ ಪಾರಂಪರಿಕ ಶಾಲೆ ಎಂಬ ಹೆಸರು ಪಡೆದ ಈ ಶಾಲೆಗೆ ಈ ಬಾರಿ 137 ವಿದ್ಯಾರ್ಥಿಗಳ ದಾಖಲಾತಿಯಾಗಿದೆ.

ವೈಶಿಷ್ಟ್ಯತೆಗಳು

2017-18ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಇಂಗ್ಲೀಷ್‌ ಮಾಧ್ಯಮ ವಿಭಾಗ, ಚಿಲ್ಡ್ರನ್‌ ಪಾರ್ಕ್‌, ಕಂಪ್ಯೂಟರ್‌ ಹಾಗೂ ಚಿತ್ರಕಲಾ ತರಬೇತಿ ಶಿಕ್ಷಣ ವ್ಯವಸ್ಥೆ, ವಿಜ್ಞಾನ ಕಲಿಕೆಗೆ ಸುಸಜ್ಜಿತ ಪ್ರತ್ಯೇಕ ಪ್ರಯೋಗಾಲಯ, ಸ್ಕೌಟ್ಸ್‌ , ಗೈಡ್ಸ್‌, ಕಬ್ಸ್, ಬುಲ್ ಬುಲ್, ಸೇವಾ ದಳ, ಯೋಗ ಶಿಕ್ಷಣ ತರಬೇತಿ, ಪ್ರತಿ ತರಗತಿಗೂ ರೇಡಿಯೋ ಬ್ರಾಡ್‌ ಕಾಸ್ಟಿಂಗ್‌ ವ್ಯವಸ್ಥೆ, ಎಲ್ಸಿಡಿ ಪ್ರಾಜೆಕ್ಟರ್‌ನ ಅಳವಡಿಕೆ, ಎಜ್ಯುಸ್ಯಾಟ್ ಬಳಕೆ, ಕ್ರೀಡಾ ಚಟುವಟಿಕೆಗೆ ವಿಶೇಷ ಆದ್ಯತೆ , ಆಕರ್ಷಕ ಸಮವಸ್ತ್ರ, ಮಾಸಿಕ ಹಸ್ತಪತ್ರಿಕೆ ಇತ್ಯಾದಿಗಳನ್ನು ಹೊಂದಿದ್ದು, ಉತ್ತಮ ಶಾಲೆ ಎಂಬ ರಾಜ್ಯ ಪ್ರಶಸ್ತಿಯನ್ನೂ ಪಡೆದಿದೆ. ಜತೆಗೆ ವಿದ್ಯಾರ್ಥಿಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಿಗೆ ಸಿದ್ಧಪಡಿಸುವುದರೊಂದಿಗೆ ಕೌಶಲ ವೃದ್ಧಿಗೂ ಆದ್ಯತೆ ನೀಡುತ್ತಿದೆ.

ಸ್ಥಳಾವಕಾಶದ ಅಗತ್ಯ

Advertisement

ಕಳೆದ ಶೈಕ್ಷಣಿಕ ವರ್ಷ ಇಲ್ಲಿ ಒಟ್ಟು 487 ಮಕ್ಕಳಿದ್ದರು. ಜತೆಗೆ 15 ಖಾಯಂ ಶಿಕ್ಷಕರು, ಐವರು ಗೌರವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಷ್ಟು ಪ್ರಮಾಣದ ವಿದ್ಯಾರ್ಥಿಗಳಿಗೆ ಬೋಧಕರ ಸಂಖ್ಯೆ ಸಾಲದು. 2.6 ಕೋ.ರೂ. ವೆಚ್ಚದಲ್ಲಿ ಕೇಂದ್ರ ಸರಕಾರದಿಂದ ಸುನಾಮಿ ರಕ್ಷಣೆಗಾಗಿ ಬಂದ ಅನುದಾನದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು ಈ ಬಾರಿ 5,6,7ನೇ ತರಗತಿ ನಡೆಸುವ ಇರಾದೆ ಹೊಂದಲಾಗಿದೆ.

ಶಾಲಾ ಪ್ರಗತಿಗೆ ಯತ್ನ

ಗುಣಾತ್ಮಕ ಶಿಕ್ಷಣ ಹಾಗೂ ಗೌರವ ಶಿಕ್ಷಕರ ಭತ್ಯೆ ಹಾಗೂ ಶಾಲಾ ಅಭಿವೃದ್ಧಿಯ ದೃಷ್ಟಿಯಿಂದ ತೆಕ್ಕಟ್ಟೆ ಎಜುಕೇಶನ್‌ ಟ್ರಸ್ಟ್‌ ಹಾಗೂ ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಕರ್ಣಾಟಕ ಬ್ಯಾಂಕ್‌ ಲಿ.ಮಂಗಳೂರು ಇವರು ಗುಣಮಟ್ಟದ ಶಿಕ್ಷಣ ಮತ್ತು ಕಲಿಕೆ, ದಾಖಲಾತಿ, ಹಾಜರಾತಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಗಮನಿಸಿ ಸುಮಾರು ರೂ. 21ಲಕ್ಷದ 31 ಸಾವಿರ ಮೌಲ್ಯದ ಶಾಲಾ ಬಸ್ಸು ಕೊಡುಗೆಯಾಗಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next