Advertisement
ಕಾರ್ಕಳದಿಂದ ಕುಮಟಾದೆಡೆಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಅತೀ ವೇಗದಿಂದ ಬಂದು ರಾ.ಹೆ. 66ರಲ್ಲಿ ಅಳವಡಿಸಲಾದ ಸೋಲಾರ್ ಸಿಗ್ನಲ್ ದೀಪಕ್ಕೆ ನೇರವಾಗಿ ಢಿಕ್ಕಿ ಹೊಡೆದು ರಸ್ತೆ ವಿಭಾಜಕದ ನಡುವಿನ ತಡೆಯನ್ನು ಏರಿ ನಿಂತಿದೆ. ಘಟನೆಯ ತೀವ್ರತೆಗೆ ಲಾರಿಯ ಮುಂಭಾಗದ ಮೈನ್ ಎಕ್ಸೆಲ್‌ನ ಬ್ಲೇಡ್ ಸೆಟ್‌ಗಳೆರಡು ತುಂಡಾಗಿದ್ದು ಪರಿಣಾಮವಾಗಿ ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸದಾ ಜನ ಸಂಚಾರವಿರುವ ತೆಕ್ಕಟ್ಟೆ ಪ್ರಮುಖ ಸರ್ಕಲ್‌ನಲ್ಲಿ ಈ ಅವಘಡ ಸಂಭವಿಸುವ ಸಂದರ್ಭದಲ್ಲಿ ಜನ ಸಂಚಾರವಿಲ್ಲದಿರುವ ಹಿನ್ನೆಲೆಯಲ್ಲಿ ಸಂಭವನೀಯ ಅವಘಡವೊಂದು ತಪ್ಪಿದಂತಾಗಿದೆ. ರಾ.ಹೆ. 66ರಲ್ಲಿ ದಾರಿದೀಪ ಅಳವಡಿಸುವಂತೆ
ಸ್ಥಳೀಯರ ಆಗ್ರಹ
ರಾ.ಹೆ. 66 ಕುಂದಾಪುರ – ಸುರತ್ಕಲ್ ಚತುಷ#ಥ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಯಾವುದೇ ರೀತಿಯ ದಾರಿದೀಪ ಅಳವಡಿಸದಿರುವುದರಿಂದ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಮಾರ್ಗದಲ್ಲಿ ಕತ್ತಲು ಆವರಿಸಿ ಹೆದ್ದಾರಿಯಲ್ಲಿ ಸಂಚರಿಸುವವಾಹನ ಸವಾರರಿಗೆ ಗೊಂದಲ ಏರ್ಪಟ್ಟು ರಸ್ತೆ ಅವಘಡಗಳಿಗೆ ಕಾರಣವಾಗುತ್ತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಾರ್ವಜನಿಕ ಸಮಸ್ಯೆ ತುರ್ತಾಗಿ ಸ್ಪಂದಿಸುವಂತೆ ತೆಕ್ಕಟ್ಟೆ ಬಜರಂಗ ದಳದ ಸಂಚಾಲಕ ಶ್ರೀನಾಥ್ ಶೆಟ್ಟಿ ಮೇಲ್ತಾರುಮನೆ ಆಗ್ರಹಿಸಿದ್ದಾರೆ.