Advertisement

ತೇಜಸ್ವಿ ಜನ್ಮದಿನ ಹಿನ್ನೆಲೆ :ಸೆ.8ಕ್ಕೆ  ತೇಜಸ್ವಿ ಸಾಹಿತ್ಯ ವಿಚಾರ ಮಂಥನ

04:47 PM Sep 05, 2021 | Team Udayavani |

ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 8 ರಂದು ತೇಜಸ್ವಿ ಸಾಹಿತ್ಯ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ.

Advertisement

ಅಂದು ಬೆಳಿಗ್ಗೆ 11-30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ವರ್ತಮಾನದಲ್ಲಿ ತೇಜಸ್ವಿ ವಿಚಾರಧಾರೆ ವಿಷಯದ ಕುರಿತು ಚಿಕ್ಕಮಗಳೂರಿನ ನಿವೃತ್ತ ಉಪನ್ಯಾಸಕರಾದ ಬಿ ತಿಪ್ಪೆರುದ್ರಪ್ಪ ಅವರು ಉಪನ್ಯಾಸ ನೀಡಲಿದ್ದಾರೆ. ಹಾಸನದ ಅಬಚೂರಿನ ಮಿತ್ರವೃಂದ ಪ್ರಕಾಶನದ  ತೇಜಸ್ವಿಯವರ ನೆನಪಿನ ಕಥಾಸ್ಪರ್ಧೆ 2021 ರ ತೆರೆದ ಅಂಚೆ ಎಂಬ ಕಥಾ ಸಂಕಲನ ಬಿಡುಗಡೆಯಾಗಲಿದೆ.

ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿಲ್ಲ

ಆ ದಿನ ಸಂಜೆ ತೇಜಸ್ವಿ ಓದು ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಪಾಕಕ್ರಾಂತಿ ಮತ್ತು ಇತರ ಕಥೆಗಳು ಕೃತಿಯ ಬಗ್ಗೆ ಸಾಹಿತಿಗಳಾದ ರೇಖಾ ನಾಗರಾಜರಾವ್ ಅವರು ಮಾತನಾಡಲಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಲಿದ್ದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಫೇಸ್‌ಬುಕ್‌ನ ಕೆಪಿಪಿಟ್ರಸ್ಟ್ ಅಧಿಕೃತ ಪೇಜ್‌ನಲ್ಲಿ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8971920839, 9663098873 ಗೆ ಸಂಪರ್ಕಿಸಬಹುದಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next