Advertisement
ಬೆಳಗ್ಗೆ ಜರಗಿದ ತೇಜಸ್ವಿನಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಭಾಗವಹಿಸಿ ಮಾತನಾಡಿದರು. ಪ್ರಮುಖರು ಉಪಸ್ಥಿತರಿದ್ದ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಾದ ಬಿ. ಸೀತಾರಾಮ ಶೆಟ್ಟಿ, ಬಿ.ಕೆ. ಖಾದರ್ ಹಾಜಿ, ಎಸ್. ಕೊಗ್ಗು ಆಚಾರ್ಯ, ಅಚ್ಯುತ , ಬಿ. ರಾಮಕೃಷ್ಣ ಭಂಡಾರಿ, ಮೂಸಾ ಉಸ್ತಾದ್, ಬಳ್ಳು ಅಶ್ವತ್ಥಕಟ್ಟೆ, ವಿದ್ಯಾ ಗಣೇಶ್, ಎ.ಕೆ. ಉಮೇಶ್, ಸುರೇಶ್ ಶೆಟ್ಟಿ ಕಯ್ನಾರ್, ಚೇವಾರು ಶಂಕರ ಕಾಮತ್, ಸ್ಟ್ಯಾನಿ ಕ್ರಾಸ್ತಾ, ಮೂಸಾ ಕುಂಞಿ, ಋತಿಕ್ ಯಾದವ್, ಅಖೀಲೇಶ್, ನಳಿನಿ ಎಸ್., ರಾಮ ಮುನ್ನೂರು, ರವಿ ನಾಯ್ಕಪು, ವಿಮಲ್ ಮಾಸ್ಟರ್, ಬಾಬು ಕುಡಾಲು, ಲತೀಫ್ ಕಾಸರಗೋಡು ಅವರನ್ನು ಸಮ್ಮಾನಿಸಲಾಯಿತು. ತರಂಗಿಣಿ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ ಸುಬ್ಬಯಕಟ್ಟೆ ಮತ್ತು ಕುಡಾಲುಮೇರ್ಕಳ ಎ.ಎಲ್.ಪಿ. ಶಾಲೆಗೆ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಮತ್ತು ಭಾಷಾ ಸಾಮರಸ್ಯದ ಕುರಿತು ಅಪರಾಹ್ನ ಜರಗಿದ ವಿಚಾರ ಸಂಕಿರಣದಲ್ಲಿ ಮಲಾರ್ ಜಯರಾಮ ರೈ ಮತ್ತು ಪಿ.ಪಿ. ಅಡಿಯೋಡಿ ಭಾಗವಹಿಸಿ ಮಾತನಾಡಿದರು. ಪ್ರಭಾಕರ ಕಲ್ಲೂರಾಯ ಅಧ್ಯಕ್ಷತೆ ವಹಿಸಿದರು. ವಿಶ್ರಾಂತ ಪರ್ತಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸಿದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಅಶೋಕ್ ಕುಮಾರ್, ವಿದ್ಯಾ ಗಣೇಶ್, ಹರೀಶ್ ಸುಲಾಯ ಒಡ್ಡಂಬೆಟ್ಟು, ವಿರಾಜ್ ಅಡೂರು, ರವೀಂದ್ರನ್ ಪಾಡಿ, ಕೇಶವಪ್ರಸಾದ್ ಕುಳಮರ್ವ, ಖಲೀಲ್ ಪುತ್ತೂರು,ಸ್ಟಾನಿ ಲೋಬೊ,ಸುಂದರ ಬಾರಡ್ಕ ಮತ್ತು ರಾಜಶ್ರೀರೈ ಅವರು ಕನ್ನಡ, ತುಳು, ಕೊಂಕಣಿ, ಮಲೆಯಾಳ, ಬ್ಯಾರಿ, ಸಂಸ್ಕೃತ ಭಾಷೆಗಳ ಸ್ವರಚಿತ ಕವನಗಳನ್ನು ವಾಚಿಸಿದರು. ವಸಂತ ಬಾರಡ್ಕ ಕನ್ನಡ ಜಾನಪದ ಹಾಡುಗಳನ್ನು ಹಾಡಿದರು. ಪ್ರೊ| ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ. ಬಾಲಕೃಷ್ಣ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಜಾನಪದ ಕಲೆಗಳಾದ ಕನ್ಯಾಪು, ಮಾದಿರ ಕುಣಿತ, ಪಾಡªನ, ಕೈಮುಟ್ಟ್ ಕಳಿ ಮತ್ತು ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರೇಕ್ಷಕರ ಮನಸೂರೆಗೊಂಡಿತು. ಚಿತ್ರ : ಫೂಟೊ ಸ್ಟಾರ್ ಬದಿಯಡ್ಕ