Advertisement

ವಿಷಯ ಗೊತ್ತಾಗಿ ಇಡೀ ರಾತ್ರಿ ನಿದ್ದೆಯೇ ಬರಲಿಲ್ಲ

07:11 AM Mar 27, 2019 | Team Udayavani |

ಅಭ್ಯರ್ಥಿ ಆಯ್ಕೆಯಂತಹ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲರ ಸಹಮತ ಪಡೆದು ನಿರ್ಧಾರ ಕೈಗೊಂಡಿರುತ್ತಾರೆ. ಎಲ್ಲ ನಾಯಕರು ತಮ್ಮ ಬೆಂಬಲ, ಆಶೀರ್ವಾದ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ದೊಡ್ಡ
ಬಹುಮತದೊಂದಿಗೆ ಗೆಲ್ಲುತ್ತೇವೆ.’ ಇದು ಅಚ್ಚರಿಯ ಬೆಳವಣಿಗೆಯಲ್ಲಿಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರು ತಮ್ಮ ಆಯ್ಕೆ ಕುರಿತು
ನೀಡಿದ ಖಡಕ್‌ ಸ್ಪಷ್ಟನೆ. ಕ್ಷೇತ್ರದ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ  ಯಾದ 16 ಗಂಟೆಯೊಳಗೆ ನಾಮಪತ್ರ ಸಲ್ಲಿಸಿದ ಅವರು “ಉದಯವಾಣಿ’ಗೆ ಸಂದರ್ಶನ ನೀಡಿದ್ದು, ವಿವರ ಹೀಗಿದೆ.

Advertisement

ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಗ್ಗೆ ಏನು ಹೇಳುವಿರಿ?
ನನ್ನ ಆಯ್ಕೆ ಅನಿರೀಕ್ಷಿತವಾಗಿ ನನ್ನ ಆಯ್ಕೆ ಅನಿರೀಕ್ಷಿತವಾಗಿದ್ದು, ಅಚ್ಚರಿಯ ಜತೆಗೆ ಅತೀವ ಸಂತೋಷ ಉಂಟು ಮಾಡಿದೆ. ಯುವ ಕಾರ್ಯಕರ್ತರ ಮೇಲೆ ಹೆಚ್ಚಿನ ವಿಶ್ವಾಸವಿಡುವುದು ನಮ್ಮ ಪಕ್ಷದ ವೈಶಿಷ್ಟé. ಇದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನೂ ತೋರಿಸುತ್ತದೆ. ಅತಿ ಮಹತ್ವದ ಹಾಗೂ ಸವಾಲಿನ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ವರಿಷ್ಠರು, ರಾಷ್ಟ್ರೀಯ
ನಾಯಕರು, ರಾಜ್ಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ದೊಡ್ಡ ಜವಾಬ್ದಾರಿ ನೀಡಿದ ವಿಷಯ ತಿಳಿದು ಇಡೀ ರಾತ್ರಿ ನಿದ್ರೆಯೇ ಬರಲಿಲ್ಲ. ಅದನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕಾಯಿತು.

ನಿಮ್ಮ ಆಯ್ಕೆಗೆ ಪರಿಗಣಿಸಿರಬಹುದಾದ ಅಂಶಗಳು ಏನಿರಬಹುದು?
ಇದು ನನ್ನನ್ನು ಆಯ್ಕೆ ಮಾಡಿದ ಪಕ್ಷದ ರಾಷ್ಟ್ರೀಯ ವರಿಷ್ಠರು ಹಾಗೂ ರಾಜ್ಯ ನಾಯಕರಿಗಷ್ಟೇ ಗೊತ್ತು. ನನ್ನ ಪ್ರಕಾರ 1996ರಲ್ಲಿ ಯುವಕರಾಗಿದ್ದ ಅನಂತ ಕುಮಾರ್‌ ಅವರಿಗೆ ಪಕ್ಷ ಅವಕಾಶ ನೀಡಿತ್ತು. ಪಕ್ಷದ ವಿಶೇಷವೆಂದರೆ ಹೊಸ ರಕ್ತವನ್ನು ಪರಿಚಯಿಸುವ ಮೂಲಕ ಡೈನಾಮಿಕ್‌ ಆಗಿರುವ ಜೀವಂತ ಸಂಘಟನೆ ರೂಪಿಸುವುದು. ಸಂಘಟನೆ ಜೀವಂತವಾಗಿರಬೇಕಾದರೆ ಹೊಸ ರಕ್ತ ಸೇರ್ಪಡೆಯಾಗಬೇಕು. ಪಕ್ಷವು ಹೊಸ ಕಾರ್ಯಕರ್ತರಿಗೆ ಪ್ರತಿ ಬಾರಿ ಅವಕಾಶ ನೀಡುತ್ತಾ ಬಂದಿದೆ. ಕಳೆದ ಲೋಕಸಭಾ
ಚುನಾವಣೆ ವೇಳೆ ಪ್ರತಾಪ್‌ಸಿಂಹ ಅವರಿಗೆ ಅವಕಾಶ ನೀಡಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸಪ್ತಗಿರಿಗೌಡ ಅವರಿಗೆ ಅವಕಾಶ ನೀಡಿತ್ತು. ಹಾಸನದಲ್ಲಿ ಪ್ರೀತಂಗೌಡ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಕರಾವಳಿ ಭಾಗದಲ್ಲಿ ಸಾಕಷ್ಟು ಯುವ ಶಾಸಕರಿದ್ದಾರೆ. ಹೊಸ ರಕ್ತಕ್ಕೆ ಅವಕಾಶ ನೀಡಿ ಸಂಘಟನೆ ಬಲಪಡಿಸಬೇಕು ಎಂಬ ಉದ್ದೇಶದಿಂದ ಅವಕಾಶ ನೀಡಬಹುದು. ಅದನ್ನು ಹೊರತುಪಡಿಸಿದರೆ ಬೇರೆ
ಕಾರಣವಿರಲಾರದುನನ್ನ ಆಯ್ಕೆ ಅನಿರೀಕ್ಷಿತವಾಗಿದ್ದು, ಅಚ್ಚರಿಯ ಜತೆಗೆ ಅತೀವ
ಸಂತೋಷ ಉಂಟು ಮಾಡಿದೆ. ಯುವ ಕಾರ್ಯಕರ್ತರ ಮೇಲೆ ಹೆಚ್ಚಿನ ವಿಶ್ವಾಸವಿಡುವುದು ನಮ್ಮ ಪಕ್ಷದ ವೈಶಿಷ್ಟé. ಇದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನೂ ತೋರಿಸುತ್ತದೆ. ಅತಿ ಮಹತ್ವದ ಹಾಗೂ ಸವಾಲಿನ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ವರಿಷ್ಠರು, ರಾಷ್ಟ್ರೀಯ
ನಾಯಕರು, ರಾಜ್ಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ದೊಡ್ಡ ಜವಾಬ್ದಾರಿ ನೀಡಿದ ವಿಷಯ ತಿಳಿದು ಇಡೀ ರಾತ್ರಿ ನಿದ್ರೆಯೇ ಬರಲಿಲ್ಲ. ಅದನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕಾಯಿತು.

ನಿಮ್ಮ ಆಯ್ಕೆಗೆ ಪರಿಗಣಿಸಿರಬಹುದಾದ ಅಂಶಗಳು ಏನಿರಬಹುದು?
ಇದು ನನ್ನನ್ನು ಆಯ್ಕೆ ಮಾಡಿದ ಪಕ್ಷದ ರಾಷ್ಟ್ರೀಯ ವರಿಷ್ಠರು ಹಾಗೂ ರಾಜ್ಯ ನಾಯಕರಿಗಷ್ಟೇ ಗೊತ್ತು. ನನ್ನ ಪ್ರಕಾರ 1996ರಲ್ಲಿ ಯುವಕರಾಗಿದ್ದ ಅನಂತ ಕುಮಾರ್‌ ಅವರಿಗೆ ಪಕ್ಷ ಅವಕಾಶ ನೀಡಿತ್ತು. ಪಕ್ಷದ ವಿಶೇಷವೆಂದರೆ ಹೊಸ ರಕ್ತವನ್ನು ಪರಿಚಯಿಸುವ ಮೂಲಕ ಡೈನಾಮಿಕ್‌ ಆಗಿರುವ ಜೀವಂತ ಸಂಘಟನೆ ರೂಪಿಸುವುದು. ಸಂಘಟನೆ ಜೀವಂತವಾಗಿರಬೇಕಾದರೆ ಹೊಸ ರಕ್ತ ಸೇರ್ಪಡೆಯಾಗಬೇಕು. ಪಕ್ಷವು ಹೊಸ ಕಾರ್ಯಕರ್ತರಿಗೆ  ಪ್ರತಿ ಬಾರಿ ಅವಕಾಶ ನೀಡುತ್ತಾ ಬಂದಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರತಾಪ್‌ಸಿಂಹ ಅವರಿಗೆ ಅವಕಾಶ ನೀಡಿತ್ತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸಪ್ತಗಿರಿಗೌಡ ಅವರಿಗೆ ಅವಕಾಶ ನೀಡಿತ್ತು. ಹಾಸನದಲ್ಲಿ ಪ್ರೀತಂಗೌಡ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಕರಾವಳಿ ಭಾಗದಲ್ಲಿ ಸಾಕಷ್ಟು ಯುವ ಶಾಸಕರಿದ್ದಾರೆ. ಹೊಸ ರಕ್ತಕ್ಕೆ ಅವಕಾಶ ನೀಡಿ ಸಂಘಟನೆ ಬಲಪಡಿಸಬೇಕು ಎಂಬ ಉದ್ದೇಶದಿಂದ ಅವಕಾಶ ನೀಡಬಹುದು. ಅದನ್ನು ಹೊರತುಪಡಿಸಿದರೆ ಬೇರೆ ಕಾರಣವಿರಲಾರದು

ನಿಮ್ಮ ಆಯ್ಕೆ ಸಂದರ್ಭದಲ್ಲಿ ಸ್ವಾಗತದ ಜತೆಗೆ “ಗೋ ಬ್ಯಾಕ್‌’ ಪ್ರತಿರೋಧವೂ ಕೇಳುತ್ತಿದೆಯೆಲ್ಲಾ? ಅಭ್ಯರ್ಥಿಗಳ ಆಯ್ಕೆ ನಿರ್ಧಾರವನ್ನೆಲ್ಲಾ ಏಕಪಕ್ಷೀಯವಾಗಿ
ಕೈಗೊಳ್ಳುವುದಿಲ್ಲ. ಎಲ್ಲರ ಸಹಮತ ಪಡೆದೇ ಈ ರೀತಿ ನಿರ್ಧಾರ ಕೈಗೊಂಡಿರುತ್ತಾರೆ. ಎಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆರೆದುಕೊಂಡು ಪ್ರಚಾರದಲ್ಲಿ ತೊಡಗುತ್ತೇನೆ. ಎಲ್ಲರೂ ಬೆಂಬಲ ನೀಡಿದ್ದಾರೆ.

Advertisement

 ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಇಂತಹ ಅವಕಾಶ ಸಿಗುವ ನಿರೀಕ್ಷೆ ಇತ್ತೇ?
ವಿದ್ಯಾರ್ಥಿ ಪರಿಷತ್‌, ಸಂಘ ಹಾಗೂ ಬಿಜೆಪಿಯಲ್ಲಿ ತೊಡಗಿಸಿ ಕೊಂಡವರು ತತ್ವ, ಸಿದ್ಧಾಂತ ಕ್ಕೆ ಕೆಲಸ ಮಾಡುವವರಾಗಿರುತ್ತಾರೆ. ಇಲ್ಲಿ ಕಾರ್ಪೋರೇಟ್‌ ಕಂಪೆನಿಯ ಕೆರಿಯರ್‌ ಪಾಥ್‌ನಂತೆ ನಿರೀಕ್ಷೆಗಳಿರುವುದಿಲ್ಲ. ನಮ್ಮ ಸಿದಾಟಛಿಂತಕ್ಕಾಗಿ ನಿರ್ವಹಿಸುವ
ಕೆಲಸದಲ್ಲಿ ಸಿಗುವ ಖುಷಿಯಿಂದಾಗಿ ಆ ಕಾರ್ಯದಲ್ಲಿ ನಿರತರಾಗಿರುತ್ತೇವೆ. ಆ ಪ್ರಕ್ರಿಯೆಯಲ್ಲಿ ಅನಿರೀಕ್ಷಿತವಾಗಿ ಅವಕಾಶ ದೊರೆತಾಗ ಆ ಸಿದ್ಧಾಂತ ವನ್ನು ಇನ್ನಷ್ಟು ಹೇಗೆ ಗಟ್ಟಿಗೊಳಿಸ ಬಹುದು ಎಂಬುದಕ್ಕೆ ಗಮನ ನೀಡಿ ಆ ನಿಟ್ಟಿನಲ್ಲಿ ತೊಡಗಿಸಿ ಕೊಳ್ಳುತ್ತೇವೆ. ಹಾಗಾಗಿ ವೈಯಕ್ತಿಕ ನಿರೀಕ್ಷೆ, ಧ್ಯೇಯೋ ದ್ದೇಶಗಳಿರುವುದಿಲ್ಲ.

 ಅನಂತ ಕುಮಾರ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸಲು ಆತ್ಮವಿಶ್ವಾಸವಿದೆಯೇ? ಅಳುಕಿದೆಯೇ?
ಇಂತಹ ಪ್ರತಿಷ್ಠಿತ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆಚ್ಚು ಆತ್ಮವಿಶ್ವಾಸವಿರ ಬೇಕು. ಅನಂತ ಕುಮಾರ್‌ ಆರು ಬಾರಿ ಗೆದ್ದಿರುವ ಬಿಜೆಪಿಯ ಭದ್ರ ಕೋಟೆ ಇದು. ಕಾರ್ಯಕರ್ತರು, ನಾಯಕರ ಸಹಕಾರವಿದೆ. ಅನಂತ ಕುಮಾರ್‌ ಅವರ ಪ್ರತಿ ಬಾರಿಯ ಸ್ಪರ್ಧೆಯಲ್ಲೂ ಗೆಲುವಿನ ಅಂತರ ಹೆಚ್ಚುತ್ತಿತ್ತು. ಅದರಂತೆ ಈ ಬಾರಿಯೂ ದೊಡ್ಡ ಬಹುಮತ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅನಂತ ಕುಮಾರ್‌ ಅವರಿಗೆ ಕೃತಜ್ಞತೆ
ಸಲ್ಲಿಸಲಾಗುವುದು.

 ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ ಕಣದಲ್ಲಿದ್ದು, ಈ ಬಗ್ಗೆ ಏನು ಹೇಳುವಿರಿ?
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಹಿರಿಯರು. ಆದರೆ ಭಾರತೀಯ ಸೈನ್ಯ ಹಾಗೂ ಯೋಧರ ಬಗ್ಗೆ ಹಗುರವಾಗಿ ಮಾತನಾಡಿದವರನ್ನು ಕಾಂಗ್ರೆಸ್‌ ಪಕ್ಷವು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಕ್ಷೇತ್ರದ ಮತದಾರರಿಗೆ
ಅವಮಾನ ಮಾಡಿದೆ. ಕ್ಷೇತ್ರದ ಕಾರ್ಯಕರ್ತರು, ಪ್ರಜ್ಞಾವಂತ ದೇಶಭಕ್ತ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

 ಪ್ರಧಾನಿ ಮೋದಿಯವರನ್ನು ವಿರೋಧಿಸುವವರು ದೇಶ ವಿರೋಧಿಗಳು ಎಂಬ ತಮ್ಮ ಹೇಳಿಕೆ ಬಗ್ಗೆ ಈಗ ಏನು ಹೇಳುವಿರಿ?
ನಾನು ಯಾವ ಸಂದರ್ಭ ಕುರಿತಂತೆ ಆ ಹೇಳಿಕೆ ನೀಡಿದ್ದೇನೆ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಲು, ದ್ವೇಷಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಪ್ರಧಾನಿಯವರ ವಿರುದಟಛಿ ತೋರುತ್ತಿರುವ ಪ್ರತಿರೋಧ,
ದ್ವೇಷವು ಕ್ರಮೇಣ ದೇಶದ ವಿರುದಟಛಿ ತೋರುವ ದ್ವೇಷವಾಗಿ ಪರಿವರ್ತನೆಯಾಗುವ ಮಟ್ಟ ತಲುಪಿದೆ. ಇದನ್ನು ಶತ್ರು ರಾಷ್ಟ್ರಗಳು ಬಳಸಿಕೊಳ್ಳುವ, ಲಾಭ ಪಡೆಯುವ ಅಪಾಯವಿದೆ. ಹಾಗಾಗಿ 2019ರ ಚುನಾವಣೆಯಲ್ಲಿ ಮೋದಿಯವರೊಂದಿಗಿದ್ದರೆ ದೇಶದ ಪರವಿದ್ದಂತೆ ಹಾಗೂ ಮೋದಿಯವರ ವಿರುದಟಛಿವಾಗಿದ್ದರೆ ದೇಶಕ್ಕೆ  ರುದಟಛಿವಾಗಿದ್ದಂತೆ. ಇದು ಅಪಾಯಕಾರಿ ಎಂಬರ್ಥದಲ್ಲಿ ಹೇಳಿದ್ದೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ.

ಯಾರು ತೇಜಸ್ವಿ ಸೂರ್ಯ?
ಬೆಂಗಳೂರು ದಕ್ಷಿಣಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ
ದಿ.ಅನಂತ ಕುಮಾರ್‌ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಯುವಕ ಈಗ ಅದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಬಸವನಗುಡಿ ಶಾಸಕ ಎಲ್‌.ಎ.ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗನಾಗಿರುವ, ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ 28 ವರ್ಷದ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ನಗರದ ಕುಮಾರನ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ,ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದು, ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಸದ್ಯ ರಾಜ್ಯ ಹೈಕೋಟ್‌ ìನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಕಾರ್ಯಕರ್ತರಾಗಿದ್ದರು. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next