Advertisement
ಬಜೆಟ್ ಮೇಲಿನ ಚರ್ಚೆ ವೇಳೆ ಶಾಸಕರ ವೇತನ ಹೆಚ್ಚಳದ ಬಗ್ಗೆ ಜೆಡಿಎಸ್ ಸದಸ್ಯ ಭೋಜೇಗೌಡ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ತೇಜಸ್ವಿನಿಗೌಡ, ಶಾಸಕರ ವೇತನದ ಬಗ್ಗೆ ಬೇರೆ-ಬೇರೆ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸಿರಿವಂತ ರಾಜಕಾರಣಿಗಳು, ಯಾರಿಗೆಲ್ಲ ಭಗವಂತ ಅನುಕೂಲಗಳನ್ನು ಕೊಟ್ಟಿದ್ದಾನೆ, ಅವರೆಲ್ಲ ವೇತನವನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಬೇಕು. ಶಾಸಕರ ವೇತನವನ್ನು ಬೇರೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂ ದು ಸಭಾಪತಿಯವರಲ್ಲಿ ಮನವಿ ಮಾಡಿದರು.
ಈ ವೇಳೆ ಹಿರಿಯ ಸದಸ್ಯ ಎಚ್. ವಿಶ್ವನಾಥ್ ಶಾಸಕರ ಪಿಂಚಣಿ ವ್ಯವಸ್ಥೆ ಹೇಗೆ ಜಾರಿಗೆ ಬಂತು ಎಂಬ ಬಗ್ಗೆ ಸದನಕ್ಕೆ ವಿವರಿಸಿದರು. 1978ರಲ್ಲಿ ಶಾಸಕರಿಗೆ 600 ರೂ. ವೇತನ, 50 ರೂ. ಸಭಾಭತ್ಯೆ ನೀಡಲಾಗುತ್ತಿತ್ತು. ಆಗ ಪಿಂಚಣಿ ಇರಲಿಲ್ಲ. ಒಬ್ಬ ಹುಡುಗ ಶಾಸಕರ ಭವನದಲ್ಲಿ ನನ್ನ ಕಾರು ತೊಳೆದು ದಿನ 2 ರೂ. ಕೇಳುತ್ತಿದ್ದ, ಒಮ್ಮೆ ಸಿಟ್ಟಿನಲ್ಲಿ ಅವನ ಕಪಾಳಕ್ಕೆ ಹೊಡೆದೆ. ಅವನು ಮಾಜಿ ಶಾಸಕರೊಬ್ಬರ ಮಗ ಎಂದು ಗೊತ್ತಾಯಿತು. ಮಾಜಿ ಶಾಸಕರೊಬ್ಬರ ಮಗನ ಆ ಸ್ಥಿತಿ ಕಂಡು ನನಗೆ ನೋವಾಯಿತು. ದೇವರಾಜ ಅರಸು ಅವರ ಬಳಿ ಕರೆದುಕೊಂಡು ಹೋಗಿ ಪರಿಸ್ಥಿತಿ ವಿವರಿಸಿದೆ. ಇದನ್ನೂ ಓದಿ : ನನಗೆ ಯಾವುದೇ ರಾಹುಕಾಲ, ಗುಳಿಕ ಕಾಲವಿಲ್ಲ: ರೇವಣ್ಣ
Related Articles
Advertisement
ಸಿಎಂಗೆ ಪತ್ರ ಬರೆಯುತ್ತೇನೆ:ಸಭಾಪತಿ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶಿಸಿ, ನನ್ನ ಬಳಿ 20 ಮಂದಿ ಮಾಜಿ ಶಾಸಕರು ಬಂದು ತಮ್ಮ ಸಮಸ್ಯೆಗಳು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನಾನು ಪತ್ರ ಬರೆಯುತ್ತೇನೆ ಎಂದರು.