Advertisement

Tejasvi Surya: 15,000 ಎಕರೆ ಭೂಕಬಳಿಕೆಗೆ ವಕ್ಫ್ ಯತ್ನ

11:42 PM Oct 25, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಸಾಗುವಳಿ ರೈತರ ಜಮೀನನ್ನು ತನ್ನದು ಎಂದು ಹೇಳಿಕೊಂಡು ಅನ್ನದಾತರನ್ನು ಒಕ್ಕಲೆಬ್ಬಿಸಲು ವಕ್ಫ್ ಬೋರ್ಡ್‌ ಹೊರಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

Advertisement

ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 15 ಸಾವಿರ ಎಕರೆ ರೈತರ ಜಮೀನನ್ನು ವಕ್ಫ್ ಬೋರ್ಡ್‌ ತನ್ನದು ಎಂದು ಹೇಳಲು ಹೊರಟಿದೆ. ಸಚಿವ ಜಮೀರ್‌ ಅಹ್ಮದ್‌ ಖಾನ್‌ ತರಾತುರಿಯಲ್ಲಿ ಸರಕಾರಿ ಅಧಿಕಾರಿಗಳ ಮೂಲಕ ಸಾಗುವಳಿ ರೈತರ ಜಮೀನನ್ನು ವಕ್ಫ್ ಬೋರ್ಡ್‌ಗೆ ಸೇರಿಸಲು ಹೊರಟಿದ್ದಾರೆ. ರೈತರ ಜಮೀನು ಉಳಿಸಲು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದರು.

ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಕೋಲ್ಹಾರ ತಾಲೂಕಿನ ಭಾಗದ ಜಮೀನು ಕಳೆದುಕೊಳ್ಳುವ ಭಯದಲ್ಲಿ
ರುವ ರೈತರು ಶುಕ್ರವಾರ ಜಯನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ ವಕ್ಫ್ ಬೋರ್ಡ್‌ನ ಭೂ ಕಬಳಿಕೆ ಬಗ್ಗೆ ಅಳಲು ತೋಡಿಕೊಂಡರು.

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ವಿಜಯ ಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮವೊಂದರಲ್ಲೇ ಸುಮಾರು 11,500 ಎಕರೆ ಭೂಮಿಯನ್ನು ವಕ್ಫ್ ಬೋರ್ಡ್‌ ತನ್ನದು ಎಂದು ಹೇಳಿಕೊಂಡು ರೈತರಿಗೆ ನೋಟಿಸ್‌ ನೀಡಿದೆ.

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು ಅಂತಾ ವಿಜಯಪುರ ಜಿಲ್ಲೆಯ ಅಧಿಕಾರಿಗಳು ರೈತರ ಜಮೀನನ್ನು ವಕ್ಫ್ ಬೋರ್ಡ್‌ಗೆ ಸೇರಿಸಲು ಹೊರಟಿದ್ದಾರೆ ಎಂದು ದೂರಿದರು.

Advertisement

ವಕ್ಫ್ ಬೋರ್ಡ್‌ ಕಾಯ್ದೆ ಬದಲಾವಣೆ ಪ್ರಧಾನಿ ನರೇಂದ್ರ ಮೋದಿ ಅವರು ತೀರ್ಮಾನಿಸಿದ್ದಾರೆ. ಇದರಿಂದಾಗಿ ವಕ್ಫ್ ಬೋರ್ಡ್‌ನ ಆಟೋಪಗಳಿಗೆ ತೆರೆಬೀಳಲಿದೆ. ರಾಜ್ಯವಷ್ಟೇ ಅಲ್ಲ, ತಮಿಳುನಾಡು, ಗುಜರಾತ್‌ನಲ್ಲಿ ಕೂಡ ಕರ್ನಾಟಕದ ರೈತರಂತೆ ಅನ್ಯಾಯವಾಗಿದೆ. ಈ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next