Advertisement

ಟಿಟಿಡಿ ಯಿಂದ ಇತಿಹಾಸ ತಿರುಚುವ ಕೆಲಸ ನಿಲ್ಲಬೇಕು : ಅಂಜನಾದ್ರಿಯಲ್ಲಿ ಸಂಸದ ತೇಜಸ್ವಿ ಸೂರ್ಯ

07:52 PM Apr 03, 2022 | Team Udayavani |

ಗಂಗಾವತಿ : ಆಂಜನೇಯನ ಜನ್ಮಸ್ಥಳದ ಕುರಿತು ತಿರುಪತಿ ತಿರುಮಲ ದೇವಸ್ಥಾನಂ ನವರು ಇತಿಹಾಸ ತಿರುಚುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಈಗಾಗಲೇ ಹಿಂದೂ ಪುರಾಣ ಮಹಾನ್ ಗ್ರಂಥಗಳಲ್ಲಿ ಹನುಮಂತನ ಜನ್ಮ ಭೂಮಿ ಹಂಪಿ ಹತ್ತಿರದ ಕಿಷ್ಕಿಂದಾ ಅಂಜನಾದ್ರಿ ಪರ್ವತವಾಗಿದೆ ಎಂದು ಸಾರಿ ಹೇಳುತ್ತಿವೆ ಎಂದು ಸಂಸದ ಹಾಗೂ ಬಿಜೆಪಿ ಯುವ ಘಟಕದ ರಾಷ್ಟಿಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

Advertisement

ಅವರು ಬಿಜೆಪಿಯ ಯುವ ಮೋರ್ಚಾದ ಭಾರತ ದರ್ಶನ ಪ್ರವಾಸದ ನಿಮಿತ್ತ ತಾಲೂಕಿನ ಇತಿಹಾಸ ಪ್ರಸಿದ್ಧ ನವವೃಂದಾವನಗಡ್ಡಿ ಹಾಗೂ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರಕಾರ ಹನುಮಂತ ಜನ್ಮಸ್ಥಳದ ಕುರಿತು ಸ್ಪಷ್ಟತೆ ನೀಡಿದ್ದು ಆದರೂ ಟಿಟಿಡಿ ಪುನಹ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಅಂಜನಾದ್ರಿಯನ್ನು ಅಯೋಧ್ಯೆಯಂತೆ ಅಭಿವೃದ್ಧಿ ಮಾಡಲು ಈಗಾಗಲೇ ರಾಜ್ಯ ಮತ್ತು ಕೇಂದರ ಸರಕಾರ ನೀಲನಕ್ಷೆ ಸಿದ್ಧವಾಗಿದೆ.ತಾವು ಅಯೋಧ್ಯೆಯ ಧಾರ್ಮಿಕ ಸಭೆಯಲ್ಲಿ ಕಿಷ್ಕಿಂದಾ ಅಂಜನಾದ್ರಿ ಬಗ್ಗೆ ಪ್ರಸ್ತಾಪ ಮಾಡಿದ ತಕ್ಷಣ ಅಲ್ಲಿಯ ಸಾಧು ಸಂತರು ಕರ ತಾಂಡವ ಮಾಡಿ ಹರ್ಷ ವ್ಯಕ್ತಪಡಿಸಿದ್ದರು. ಕಿಷ್ಕಿಂದಾ ಪ್ರದೇಶಕ್ಕೆ ವಿಶ್ವದಲ್ಲಿ ಮಹತ್ವದ ಸ್ಥಾನವಿದೆ. ಇಲ್ಲಿಗೆ ದೇಶದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಭೇಟಿ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.

ಇದನ್ನೂ ಓದಿ : ವೀರನಾಗಮ್ಮ ದೇವಾಲಯದ ಅಭಿವೃದ್ದಿಗೆ ಬದ್ಧ: ಶಾಸಕ ಡಾ.ಜಿ.ಪರಮೇಶ್ವರ್

ಈ ಸಂದರ್ಭದಲ್ಲಿ ಬಿಜೆಪಿ ಯುವಘಟಕದ ರಾಜ್ಯಾಧ್ಯಕ್ಷ ಸಂದೇಶ ಪಾಟೀಲ್, ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಮುಖಂಡರಾದ ಕೆಲೋಜಿ ಸಂತೋಷ, ವಾಸುದೇವ ನವಲಿ, ಸಾಗರ ಮುನವಳ್ಳಿ,ನರಸಿಂಗರಾವ್ ಕುಲಕರ್ಣಿ ನರಸಿಂಗರಾವ್ ಕುಲಕರ್ಣಿ , ಅರ್ಚಕ ಸುಮಂತಕುಲಕರ್ಣಿ ಇದ್ದರು.

Advertisement

ಕೆಲ ಮಾಧ್ಯಮಗಳು ಅಭಿವೃದ್ಧಿ ವಿಷಯ ಬಿಟ್ಟು ಬರೀ ರಾಜಕೀಯವಾಗಿ ಸುದ್ದಿ ಮಾಡುವ ಆತುರದಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕನ್ನಡ ಕೆಲ ಮಾಧ್ಯಮಗಳ ತಮ್ಮ ವಾಹಿನಿಯ ಟಿಆರ್‌ಪಿ ಪ್ರಚಾರಕ್ಕೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮುಖಂಡರ ಮಧ್ಯೆ ಜಗಳ ಹಚ್ಚುವ ಕೆಲಸ ಬಿಡಬೇಕು.
– ತೇಜಸ್ವಿ ಸೂರ್ಯ ಸಂಸದರು ಹಾಗೂ ಅಧ್ಯಕ್ಷರು ಬಿಜೆಪಿ ರಾಷ್ಟಿಯ ಯುವ ಘಟಕ

Advertisement

Udayavani is now on Telegram. Click here to join our channel and stay updated with the latest news.

Next