ರಬಕವಿ-ಬನಹಟ್ಟಿ: ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸಬೇಕು. ನಾವು ನೀಡುವ ಒಂದು ಓಟಿನಲ್ಲಿ ಅಪಾರ ಶಕ್ತಿ ಅಡಗಿದೆ. ನಮ್ಮ ಓಟು ದೇಶದ ಆರೋಗ್ಯ, ಶಿಕ್ಷಣಕ್ಕಾಗಿ ಮತ್ತು ದೇಶದ ಭವಿಷ್ಯವನ್ನು ನಿರ್ಧಾರ ಮಾಡುವವರಿಗೆ ನೀಡಬೇಕು. ಇದರಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ಮತ್ತು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಯುವಮೋರ್ಚಾ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ತಿಳಿಸಿದರು.
ಸೋಮವಾರ ಸಮೀಪದ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾವು ನೀಡುವ ಒಂದು ಓಟಿನಿಂದಾಗಿ ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಭಾರತದ ಸುತ್ತ ಮುತ್ತಲಿನ ದೇಶದ ಯುವಕರ ಪರಿಸ್ಥಿತಿಯನ್ನು ಗಮನಿಸಿದರೆ ಭಾರತ ದೇಶದ ಯುವಕರು ಅದೃಷ್ಟವಂತರು. ಭಾರತ ಇಂದು ವಿಶ್ವದ ಬೃಹತ್ ಆರ್ಥಿಕ ಶಕ್ತಿಯಾಗಿ ಮುನ್ನುಗ್ಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಸರ್ಕಾರ ನಿರ್ಮಾಣ ಮಾಡಬೇಕಾದ ಎರಡು ಮಹತ್ವದ ಯೋಜನೆಗಳಾಗಿವೆ. ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಗಮನ ನೀಡಬೇಕಾಗಿದೆ.
ದೇಶದ ಪ್ರಧಾನಿ ಮೋದಿ ಇಂದು ದೇಶದ ಯುವಕರ ಅಭಿವೃದ್ಧಿಗಾಗಿ ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಮುದ್ರಾ ಯೋಜನೆಗಳಂತಹ ಮಹತ್ವದ ಕಾರ್ಯಕ್ರಮಗಳ ಮೂಲಕ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯುವಕರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕು.
ಕಾಂಗ್ರೆಸ ಪಕ್ಷದ ಮುಖಂಡ ರಾಹಲು ಗಾಂಧಿ ಬೆಳಗಾವಿಯಲ್ಲಿ ಹೊಸ ಗ್ಯಾರಂಟಿ ಘೋಷಣೆ ಮಾಡಿರುವ ಪದವಿ ಯುವಕರಿಗೆ ರೂ. ೩೦೦೦ ಭತ್ಯೆ ರೂ. ಐಟಿಐ ಪಡೆದ ಯುವಕರಿಗೆ ರೂ ೧೫೦೦ ಭತ್ಯೆಗಳನ್ನು ಪಡೆದುಕೊಳ್ಳದೆ ಅತ್ಯತ್ತಮ ಉದ್ದಿಮೆಗಳಾಗಿ, ಕೃಷಿಕರಾಗುವತ್ತ ಮತ್ತು ಸ್ವಾವಲಂಬಿಗಳಾಗಿ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವತ್ತ ಗಮನ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸತತ ಪರಿಶ್ರಮ ಅಗತ್ಯವಾಗಿದೆ. ಯಾವಾಗಲೂ ಗುರಿ ಒಂದೇಯಾಗಿರಬೇಕು. ಅದನ್ನೇ ದೃಢ ವಿಶ್ವಾಸದಿಂದ ಸಾಧಿಸುವ ಛಲವನ್ನು ಹೊಂದಿರಬೇಕು ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ತೇಜಸ್ವಿ ಸೂರ್ಯ ಉತ್ತರ ನೀಡಿದರು.
ಪ್ರಾಚಾರ್ಯ ಬಸವರಾಜ ಕೊಣ್ಣೂರ, ಶಾಸಕ ಸಿದ್ದು ಸವದಿ, ರಾಜ್ಯ ಬಿಜೆಪಿ ಯುವಮೊರ್ಚಾ ಘಟಕದ ಅಧ್ಯಕ್ಷ ಡಾ.ಸಂದೀಪಕುಮಾರ ಇದ್ದರು.
ಧರೆಪ್ಪ ಉಳ್ಳಾಗಡ್ಡಿ, ಸುರೇಶ ಚಿಂಡಕ, ಪುಂಡಲೀಕ ಪಾಲಭಾವಿ, ಹನಮಂತರಾಯ ಬಿರಾದಾರ, ವಸಂತ ಹಜಾರೆ, ಅವಿನಾಶ ಹಟ್ಟಿ, ಬಾಬಾಗೌಡ ಪಾಟೀಲ, ಚಂದ್ರಕಾಂತ ಹೊಸೂರ, ವಿಶ್ವನಾಥ ಮಠದ, ಸಾಗರ ಬಾಡಗಿ, ಶೀತಲ ಕೊಣ್ಣೂರ, ನಿಖಿಲ ಕೊಣ್ಣೂರ ಸೇರಿದಂತೆ ಅನೇಕರು ಇದ್ದರು.