Advertisement
ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ, ಯಾದವ್, ಇದು ಚಿರಾಗ್ ಗೆ ಬಿಟ್ಟ ವಿಚಾರ. ಆರ್ ಎಸ್ ಎಸ್ ನಂತಹ ಕೋಮುವಾದದ ಪಕ್ಷದಲ್ಲಿಯೇ ಮುಂದುವರಿಯುತ್ತಾರಾ ಅಥವಾ ಜನಪರ ಪಕ್ಷಕ್ಕೆ ಸೇರುತ್ತಾರಾ ಎನ್ನುವುದು ಅವರ ಕಾದು ನೋಡಬೇಕು.
Related Articles
Advertisement
ಇನ್ನು, ನಿತೀಶ್ ಕುಮಾರ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಯಕೊಂಡ ಅವರು, “ಎಲ್ ಜೆಪಿ ಯಲ್ಲಿ ಮಾಡಿದ ಕುತಂತ್ರದ ಹಿಂದಿನ ಸೂತ್ರಧಾರಿ ಯಾರೆಂದು ಎಲ್ಲರಿಗೂ ತಿಳಿದಿದೆ. ನಿತೀಶ್ ಕುಮಾರ್ ತಮ್ಮ ಸಮಯವನ್ನು ಜೋಡ್-ಟೋಡ್ ರಾಜಕೀಯ ಮಾಡಲು ಬಳಸದಿದ್ದರೆ, ಬಿಹಾರದ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.
ಸಂಸತ್ತಿನ ಕೆಳಮನೆಯಲ್ಲಿದ್ದ ತನ್ನ ಆರು ಸಂಸದರಲ್ಲಿ ಐವರು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಾಗ ಎಲ್ ಜೆ ಪಿ ಭಾರಿ ಹಿನ್ನಡೆ ಕಂಡ ಕೆಲವು ದಿನಗಳ ನಂತರ ಯಾದವ್ ಈ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ಇದನ್ನೂ ಓದಿ : ಗಂಗಾವತಿ : ಪಡಿತರ ಅಕ್ಕಿ ಅಕ್ರಮ ಸಾಗಾಟ : ಆಹಾರ ಇಲಾಖೆ- ಪೊಲೀಸರ ದಾಳಿ