ಒಂದು ಗಂಟೆ ವಿಳಂಬವಾದರೆ 100 ರೂ. ಪರಿಹಾರ
ಎರಡು ಗಂಟೆ ವಿಳಂಬವಾದರೆ 250 ರೂ. ಪರಿಹಾರ
ಹೊಸದಿಲ್ಲಿ: ಕೆಲವು ಪ್ರದೇಶಗಳಲ್ಲಿ ರೈಲು ವಿಳಂಬವಾಗಿ ಬರುವುದು ಮತ್ತು ತಲುಪುವುದು ಸಾಮಾನ್ಯ. ಆದರೆ ಇನ್ನು ಮುಂದೆ ರೈಲು ವಿಳಂಬವಾದರೆ ಪ್ರಯಾಣಿಕರಿಗೆ ಲಾಭವಾಗಲಿದೆ. ಹೌದು ಭಾರತೀಯ ರೈಲ್ವೇಯ ಸಹಸಂಸ್ಥೆಯಾಗಿರುವ ಐಆರ್‌ಸಿಟಿಸಿ ಈ ಯೋಜನೆಯನ್ನು ಪ್ರಕಟಿಸಿದೆ. ಇದು ತೇಜಸ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮೊದಲಿಗೆ ಜಾರಿಗೆ ಬರಲಿದೆ.
ರೈಲು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವಿಳಂಬ ವಾದರೆ ಪ್ರಯಾಣಿಕರಿಗೆ 100 ರೂ. ಪರಿಹಾರ ಸಿಗಲಿದೆ. ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವಿಳಂಬವಾದರೆ 250 ರೂ. ಪರಿಹಾರ ನೀಡಲಾಗುತ್ತದೆ ಎಂದು ರೈಲ್ವೇ ತಿಳಿಸಿದೆ.ಈಗಾಗಲೇ ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಸ್ಥೆ 25 ಲಕ್ಷ ರೂ.ಗಳ ವಿಮೆ ಒದಗಿಸುತ್ತಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಹೊಸ ಯೋಜನೆ ಪ್ರಕಟಿಸಲಾಗಿದೆ.
ವಿಶೇಷ ಎಂದರೆ 25 ಲಕ್ಷ ರೂ.ಗಳ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಮನೆಯಿಂದ ಕಳವು ಸಂಭವಿಸಿದರೂ ಅದಕ್ಕೆ ಪರಿಹಾರ ಸಿಗಲಿದೆ. ರೈಲಿನಲ್ಲಿ ಪ್ರಯಾಣದಲ್ಲಿರುವವರ ಮನೆಗೆ ಕಳ್ಳರು ನುಗ್ಗಿ ದೋಚಿದರೆ ಒಂದು ಲಕ್ಷ ರೂ.ಗಳ ಪರಿಹಾರವೂ ಸಿಗಲಿದೆ.