Advertisement

ಮೋದಿ ವಿರುದ್ದ ಕಣಕ್ಕಿಳಿದಿದ್ದ ತೇಜ್‌ ಬಹದೂರ್‌ ನಾಮಪತ್ರವೇ ತಿರಸ್ಕೃತ!

09:06 AM May 02, 2019 | Vishnu Das |

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿ ಯಿಂದಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಯೋಧ ತೇಜ್‌ ಬಹದೂರ್‌ ಅವರ ನಾಮಪತ್ರವೇ ತಿರಸ್ಕೃತವಾಗಿದೆ.

Advertisement

ಗಡುವು ನೀಡಿದರೂ ಕೆಲ ದಾಖಲಾತಿಗಳನ್ನು ಸಲ್ಲಿಸಲು ವಿಫ‌ಲವಾದ ಹಿನ್ನಲೆಯಲ್ಲಿ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ನನಗೆ ನಿನ್ನೆ ಸಂಜೆ 6.15ಕ್ಕೆ ದಾಖಲಾತಿಗಳನ್ನು ನೀಡಲು ಹೇಳಿದ್ದರು. ನಾನು ಸಲ್ಲಿಸಿದರೂ ನಾಮಪತ್ರವನ್ನುತಿರಸ್ಕರಿಸಿದ್ದಾರೆ.ನಾನು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇನೆ  ಎಂದು ತೇಜ್‌ ಬಹದೂರ್‌ ಹೇಳಿದ್ದಾರೆ.

ಸೇನೆಯಿಂದ ಅಮಾನತ್ತಾದ ಕುರಿತು ವಿವರನೀಡುವಂತೆ ಆಯೋಗ ತೇಜ್‌ ಬಹದೂರ್‌ ಅವರಿಗೆ ನೊಟೀಸ್‌ ನೀಡಿತ್ತು.

ಸರ್ಕಾರಿ ಹುದ್ದೆಯಿಂದ ಅಮಾನತಾಗಿರುವವರು, ಭ್ರಷ್ಟಾಚಾರದಲ್ಲಿ ಭಾಗಿಯಾದವರು ಮತ್ತು ರಾಜ್ಯಕ್ಕೆ ಅಪನಂಬಿಕೆ ಮಾಡಿದವರು ಐದು ವರ್ಷಗಳ ಕಾಲ ಚುನಾವಣೆಯಿಂದ ಸ್ಪರ್ಧಿಸುವಂತಿಲ್ಲ ಎಂದು ಆಯೋಗ ಹೇಳಿದೆ.

Advertisement

2017 ರಲ್ಲಿ ಸೇನೆಯಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ ತೇಜ್‌ ಬಹದೂರ್‌ ಶಿಸ್ತುಕ್ರಮವಾಗಿ ಅಮಾನತುಗೊಂಡಿದ್ದರು.

ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಕೂಟ ಮೊದಲು ಬಿ ಫಾರಂ ನೀಡಿದ್ದ ಅಭ್ಯರ್ಥಿಯನ್ನು ಬದಲಿಸಿ ತೇಜ್‌ ಬಹದೂರ್‌ಗೆ ಟಿಕೆಟ್‌ ನೀಡಿತ್ತು. ಪ್ರತಿಷ್ಠಿತ ಕ್ಷೇತ್ರದಲ್ಲಿ ಈಗ ಮೈತ್ರಿ ಕೂಟ ತೀವ್ರ ಮುಖ ಂಗ ಅನುಭವಿಸಿದಂತಾಗಿದೆ.

ಇದೀಗ ವಾರಣಾಸಿಯಲ್ಲಿ ಕಾಂಗ್ರೆಸ್‌ನ ಅಜಯ್‌ ರಾಯ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಸ್ಪರ್ಧೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next