Advertisement

ಸರ್ಕಾರಿ ಕಡತ ವಾಪಸ್‌ ನೀಡದ ತಹಶೀಲ್ದಾರ್‌  

04:06 PM Jul 23, 2023 | Team Udayavani |

ಮುಳಬಾಗಿಲು: ಕೋಟ್ಯಾಂತರ ರೂ. ಬೆಲೆ ಬಾಳುವ 36 ಎಕರೆ ಸರ್ಕಾರಿ ಜಮೀನನ್ನು 13 ವರ್ಷಗಳ ಹಿಂದೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಅಂದಿನ ತಹಶೀಲ್ದಾರ್‌ ಜಯಮಾದವ್‌ ಹಲವಾರು ವರ್ಷಗಳ ಹಿಂದೆ ಪರಿಶೀಲನೆಗಾಗಿ ದಾಖಲೆ ಕಡತ ತೆಗೆದುಕೊಂಡು ಹೋಗಿದ್ದು, ಇದುವರೆಗೂ ಕಂದಾಯ ಇಲಾಖೆಗೆ ವಾಪಸ್‌ ನೀಡದೇ ಇರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ಆವಣಿ ಹೋಬಳಿ ರಾ.ಹೆ.75ರ ಅಂಚಿನಲ್ಲಿರುವ ಜಮ್ಮನಹಳ್ಳಿ ಸ.ನಂ. 103ರಲ್ಲಿನ ಸರ್ಕಾರಿ ಗೋಮಾಳದಲ್ಲಿ 1969-72ರ ಸಾಲಿನಲ್ಲಿ ದೇವರಾಯಸಮುದ್ರ ಜಿ.ಎಸ್‌.ವೆಂಕಟೇಶ್‌ಅಯ್ಯರ್‌, ಸ.ನಂ. 103/4, 103/5, 103/6, 103/7 ರಲ್ಲಿ ತಲಾ 5 ಎಕರೆಯಂತೆ ಒಟ್ಟು 20 ಎಕರೆ ಜಮೀನು ಮತ್ತು ಎಂ.ಆರ್‌.ವೆಂಕಟೇಶ್‌ಅಯ್ಯರ್‌ ಸಹ ಜಮ್ಮನಹಳ್ಳಿ ಸ.ನಂ.103/9, 103/10, 103/11, 103/13 ರಲ್ಲಿ ತಲಾ 4 ಎಕರೆಯಂತೆ ಒಟ್ಟು 16 ಎಕರೆ ಸೇರಿದಂತೆ 36 ಎಕರೆ ಜಮೀನನ್ನು ನಕಲಿ ದಾಖ ಲೆಗಳ ಸೃಷ್ಟಿಸಿಕೊಂಡು ಪಡೆದುಕೊಂಡಿದ್ದು, ಅಲ್ಲದೇ ಕಾನೂನು ಬಾಹಿರವಾಗಿ ಬೆಂಗಳೂರಿನ ಸಯ್ಯದ್‌ಮಸ್ತಾನ್‌ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

2010ರಲ್ಲಿ ಜಮೀನು ಮುಟ್ಟುಗೋಲು: ಈ ಕುರಿತು ದಲಿತ ಮುಖಂಡರಾದ ಕೀಲುಹೊಳಲಿ ಸತೀಶ್‌ ಮತ್ತು ಕಾರ್ಗಿಲ್‌ ವೆಂಕಟೇಶ್‌ ಜಮೀನುಗಳನ್ನು ಸರ್ಕಾರಕ್ಕೆ ಮುಟ್ಟು ಗೋಲು ಹಾಕಿಕೊಳ್ಳಬೇಕೆಂದು 2008ರಲ್ಲಿ ಅಂದಿನ ಡೀಸಿಗೆ ಅರ್ಜಿ ನೀಡಿದ್ದರು. ಡೀಸಿ ಸೂಚನೆ ಯಂತೆ ತಹಶೀಲ್ದಾರ್‌ ಜಯಮಾಧವ್‌ ವಿಚಾರಣೆ ನಡೆಸಿ, 2010ರಲ್ಲಿ ನಕಲಿ ದಾಖಲೆ ರದ್ದುಗೊಳಿಸಿ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿತ್ತು. ಜಮ್ಮನಹಳ್ಳಿ ಸ.ನಂ.103/9, 103/10, 103/11, 103/13 ರಲ್ಲಿ ತಲಾ 4 ಎಕರೆಯಂತೆ ಒಟ್ಟು 16 ಎಕರೆ ಪಹಣಿಗಳಲ್ಲಿ ಮಾತ್ರ ಎಂ.ಆರ್‌.8/2011-12, ದಿ.7/2/12 ರಂತೆ ಸರ್ಕಾರಕ್ಕೆ ಎಂದು ನಮೂದಿಸಿದೆ.

ಆದರೆ ಜಮ್ಮನಹಳ್ಳಿ ಸ.ನಂ. 103/4, 103/5, 103/6, 103/7ರಲ್ಲಿ ತಲಾ 5 ಎಕರೆ ಸೇರಿದಂತೆ 20 ಎಕರೆ ಪಹಣಿ ಗಳಲ್ಲಿ ಮಾತ್ರ ಎಂ.ಆರ್‌.13/2011/12, ದಿ.31/1/12ರಂತೆ ಸರ್ಕಾರಕ್ಕೆ ಎಂದು ನಮೂದಿಸಿದ್ದು, ಅಲ್ಲದೇ ಉತ್ಛ ನ್ಯಾಯಾ ಲಯದ ಡಬ್ಲ್ಯೂಪಿ ನಂಬರ್‌ 13679/2012, ಜುಲೈ 24 2012ರಂದು ತಡೆಯಾಜ್ಞೆ ನೀಡಿದೆ ಎಂದು ನಮೂದಿಸಲಾಗಿದೆ.

16 ಎಕರೆ ಜಮೀನು ವಶಕ್ಕೆ ಪಡೆಯದ ಇಲಾಖೆ: ಜಿ.ಎಸ್‌.ವೆಂಕಟೇಶ್‌ಅಯ್ಯರ್‌ ಹೆಸರಿನಲ್ಲಿದ್ದ 20 ಎಕರೆ ಜಮೀನು ವಿಚಾರವಾಗಿ ಎರಡು ವರ್ಷಗಳ ನಂತರ 2012ರಲ್ಲಿ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, 11 ವರ್ಷ ಕಳೆದರೂ ಯಾವ ತಹಶೀಲ್ದಾರ್‌ರು ತಡೆಯಾಜ್ಞೆ ತೆರವುಗೊಳಿಸಿಲ್ಲ. ಮುಳಬಾಗಿಲು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಓ.ಎಸ್‌/270/2014 ಪ್ರಕರಣವು ವಿಚಾರಣೆಯಲ್ಲಿದೆ, ಅಲ್ಲದೇ ಯಾವುದೇ ಅಡೆ ತಡೆಯಿಲ್ಲದ ಎಂ.ಆರ್‌.ವೆಂಕಟೇಶ್‌ಅಯ್ಯರ್‌ ಹೆಸರಿನಲ್ಲಿದ್ದ 16 ಎಕರೆ ಜಮೀನನ್ನೂ ಸಹ ವಶಕ್ಕೆ ತೆಗೆದುಕೊಳ್ಳದೇ ಕೈ ಬಿಟ್ಟಿರುತ್ತಾರೆ. ಜಮ್ಮನಹಳ್ಳಿ ಸ.ನಂ.103 ರಲ್ಲಿ 36 ಎಕರೆ ಸರ್ಕಾರಿ ಜಮೀನನ್ನು ತಹಶೀಲ್ದಾರ್‌ ಜಯ ಮಾದವ್‌ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದರೂ, ದಾಖಲೆಗಳ ಪರಿಶೀಲ ನೆಗಾಗಿ ಖುದ್ದು ಅವರೇ ಮೂಲ ಕಡತ ತೆಗೆದುಕೊಂಡು ಹೋಗಿದ್ದು, ಇದುವರೆಗೂ ಸ್ಥಳೀಯ ಕಂದಾಯ ಇಲಾಖೆಗೆ ವಾಪಸ್‌ ನೀಡಿಲ್ಲ. ಮೂಲ ಕಡತವಿಲ್ಲದೇ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯು ತ್ತಿರುವ ವಿಚಾರಣೆ ಸಿಬ್ಬಂದಿ ಬರಿಗೈಲಿ ಹಾಜರಾಗುತ್ತಿದ್ದಾರೆ. ಅಲ್ಲದೇ, ಕಡತ ಅಲಭ್ಯತೆಯಿಂದ ನ್ಯಾಯಾ ಲಯದಲ್ಲಿ ತಡೆ ಯಾಜ್ಞೆ ತೆರವುಗೊಳಿಸಿ, ಜಮೀನು ಸರ್ಕಾರದ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.

Advertisement

-ಎಂ.ನಾಗರಾಜಯ್ಯ.

Advertisement

Udayavani is now on Telegram. Click here to join our channel and stay updated with the latest news.

Next