ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದ ರಸ್ತೆ ವಿಚಾರದಲ್ಲಿ ತಹಶೀಲ್ದಾರ್ ಅವರು ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಚಿಕ್ಕಾಡೆ ಗ್ರಾಮದ ರೈತ ಮುಖಂಡ ಹರೀಶ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಾಡೆ ಗ್ರಾಮದಲ್ಲಿ ಸರ್ವೆ ನಂಬರ್ 286 ಬಿ9 ನಿಂಗೇಗೌಡ ಬಿನ್ ಜವರೇಗೌಡರ ಹೆಸರಿನಲ್ಲಿದೆ.
ಸರ್ವೆ ನಂಬರ್ ಜಾಗದಲ್ಲಿ ಏಕಾಏಕಿ ಕಾನೂನು ಬಾಹಿರವಾಗಿ ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್ ರಾಜಕೀಯ ಒತ್ತಡಕ್ಕೆ ಮಣಿದು ವ್ಯಕ್ತಿಯೊಬ್ಬರಿಗೆ ರಸ್ತೆ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದಾರೆ. ಅಲ್ಲದೆ ಎಸಿ, ತಹಶೀಲ್ದಾರ್ ಅವರು ಪೊಲೀಸರ ರಕ್ಷಣೆಯಲ್ಲಿ ಕಾನೂನು ಬಾಹಿರ ರಸ್ತೆ ನಿರ್ಮಾಣ ಮಾಡಿಸಿದ್ದಾರೆ. ಇದನ್ನು ಆ ವಾರ್ಡ್ ಗ್ರಾಪಂ ಸದಸ್ಯರು ಪ್ರಶ್ನಿಸಿದರೆ ಕಾನೂನು ರಕ್ಷಣೆ ಮಾಡ ಬೇಕಿರುವ ತಹಶೀಲ್ದಾರರೇ ಕಾನೂನು ಉಲ್ಲಂ ಸಿ ಧಮಕಿ ಹಾಕಿದ್ದಾರೆ ಎಂದು ಕಿಡಿಕಾರಿದರು.
ಕಾನೂನು ಉಲ್ಲಂಘಿಸಿದರೆ ಚಳವಳಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕಿರುವ ತಹಶೀಲ್ದಾರ್ ಅವರು ಯಾರೊಂದಿಗೂ ಸೌಜನ್ಯ ದಿಂದ ವರ್ತಿಸುವುದಿಲ್ಲ. ಈಗಾಗಲೆ ನಾವು ಸಂಬಂಧಿಸಿದ ಮೇಲಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಹಶೀಲ್ದಾರ್ ವಿರುದ್ಧ ದೂರು ನೀಡಿದ್ದೇವೆ. ಮೊದಲು ತಹಶೀಲ್ದಾರ್ ತಮ್ಮ ನಡವಳಿಕೆ ತಿದ್ದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ತಹಶೀಲ್ದಾರ್ ವಿರುದ್ಧ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿಸ್ತುಬದ್ಧ ಕಾಮಗಾರಿ ನಡೆಯುತ್ತಿಲ್ಲ: ಚಿಕ್ಕಾಡೆ ಗ್ರಾಮಕ್ಕೆ 2.50 ಕೋಟಿ ವೆಚ್ಚದ ಅನುದಾನ ಬಿಡುಗಡೆ ಮಾಡಿಸಿರುವುದಕ್ಕೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಕಾಮಗಾರಿಯ ಗುಣಮಟ್ಟ ಹಾಗೂ ಶಿಸ್ತುಬದ್ಧವಾಗಿ ನಡೆಯುತ್ತಿಲ್ಲ. ವ್ಯಕ್ತಿಯೊಬ್ಬರಿಗೆ ಅನುಕೂಲ ಮಾಡಿಕೊಡಲು ಎರಡು ಅಡಿ ಜಾಗಬಿಟ್ಟು ರಸ್ತೆ ಜಾಗದಲ್ಲಿಯೇ ಚರಂಡಿ ನಿರ್ಮಿಸಿ ರಸ್ತೆ ಮಾಡಲು ಮುಂದಾಗಿದೆ. ಕಾಮಗಾರಿಗಳಲ್ಲಿ ಎಲ್ಲರಿಗೂ ಸರಿಸಮಾನ ನ್ಯಾಯ ದೊರಕಿಸಿಕೊಡುವಂತಿರ ಬೇಕು. ಆದರೆ, ಈ ಕಾಮಗಾರಿಯಲ್ಲಿ ವ್ಯಕ್ತಿಯೊಬ್ಬ ಹಿತಕಾಯಲು ಹೊರಟಿದ್ದಾರೆ.ಇದಾಗಬಾರದು ರಸ್ತೆ ಅಭಿವೃದ್ಧಿ ಗುಣಮಟ್ಟದಿಂದ ಕೂಡಿದ್ದು ನ್ಯಾಯಸಮ್ಮತವಾಗಿರಬೇಕು ಎಂದು ಒತ್ತಾಯಿಸಿದರು. ಚಿಕ್ಕಾಡೆ ಗ್ರಾಮದ ಕೆಲವು ಜೆಡಿಎಸ್ ಮುಖಂಡರು ನನ್ನ ವಿರುದ್ಧ ಕಳಪೆ ಕಾಮಗಾರಿ ಎಂದು ಆರೋಪಿಸಿದ್ದಾರೆ.
ನಾನು ಗ್ರಾಮದಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿದ್ದೇನೆ. ಆ ಕಾಮಗಾರಿ ನಡೆದು ಸುಮಾರು 7 ವರ್ಷಗಳೇ ಕಳೆದಿವೆ. ಅದರಲ್ಲಿ ಒಂದು ರಸ್ತೆಯ ಡೆಕ್ ಅಲ್ಲಿನ ಸ್ಥಳೀಯರು ಎತ್ತಿನಗಾಡಿ ನಿಲ್ಲಿಸುವುದು, ಸೌದೆ ಹಾಕಿದ್ದರಿಂದ ಇಲಿ, ಹೆಗ್ಗಣಗಳು ಒಳಗೆ ಸೇರಿಕೊಂಡಿದ್ದರಿಂದ ಒಂದು ಡೆಕ್ ಸ್ವಲ್ಪಕುಸಿದಿದೆ. ಅದಕ್ಕೆ ನನ್ನ ವಿರುದ್ಧ ಕಳಪೆ ಕಾಮಗಾರಿ ಎಂದು ಆರೋಪ ಮಾಡಿದ್ದಾರೆ. ಇದೀಗ ನನ್ನ ಮೇಲೆ ಕಳಪೆ ಕಾಮಗಾರಿ ಆರೋಪಿಸುವ ಇವರು ಕಾಮಗಾರಿ ನಡೆಯುವಾಗಲೇ ನನ್ನನ್ನು ಪ್ರಶ್ನಿಸಿಬಹುದಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷದ ರಾಜಕಾರಣ: ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ವಿಜೇಂದ್ರಮೂರ್ತಿ ಮಾತನಾಡಿ, ಶಾಸಕ ಪುಟ್ಟರಾಜು ಚಿಕ್ಕಾಡೆ ಅಭಿವೃದ್ಧಿಗಾಗಿ ನಾಲ್ಕೈದು ಕೋಟಿ ಅನುದಾನ ನೀಡಿದ್ದಾರೆ. ಯಾರೇ ಆದರೂ ದ್ವೇಷದ ರಾಜಕಾರಣ ಮಾಡಬಾರದು. ಚಿಕ್ಕಾಡೆ-ಪಟ್ಟ ಸೋಮನಹಳ್ಳಿ ಸಂಪರ್ಕ ರಸ್ತೆಯೂ ಕಳಪೆ ಕಾಮಗಾರಿಯಿಂದ ಕೂಡಿದೆ. ಎಲ್ಲೆಲ್ಲಿ ಕಳಪೆ ಕಾಮಗಾರಿಯಾಗಿದೆ ಎನ್ನುವುದು ನಮಗೂ ಗೊತ್ತಿದೆ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ರೈತಮುಖಂಡ ವಿಜೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್, ಸದಸ್ಯ ರವಿಂದ್ರಸ್ವಾಮಿ, ಜಯರಾಮು, ಡೇರಿ ಮಾಜಿ ನಿರ್ದೇಶಕ aಕಿರಣ್‌ಕುಮಾರ್, ಅನಿಲ್‌ಕುಮಾರ್ ಮತ್ತಿತರರಿದ್ದರು.