ಬೆಂಗಳೂರು: ಜಮೀನಿಗೆ ಸಂಬಂಧಿಸಿದಂತೆ ಆರ್.ಆರ್.ಟಿ ಶಾಖೆಯಲ್ಲಿ ಪಹಣಿಯಲ್ಲಿನ ಕಾಲಂ 3, 9 ರನ್ನು ತಾಳೆ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 2.5 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್, ಮ್ಯಾನೇಜರ್ ಸೇರಿ ದಂತೆ ನಾಲ್ವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಹಶೀಲ್ದಾರ್ ನಾಗರಾಜ್ ವಿ., ಎಫ್.ಡಿ.ಎ ಶಿಲ್ಪಾ, ತಹಶೀಲ್ದಾರರ ಕಚೇರಿಯ ಮ್ಯಾನೇಜರ್ ಮಂಜುನಾಥ, ಬ್ರೋಕರ್ ಕೆಲಸ ಮಾಡು ತ್ತಿದ್ದ ಖಾಸಗಿ ವ್ಯಕ್ತಿ ಹೇಮಂತ್ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದ ಆರೋಪಿಗಳು.
ದೂರುದಾರ ಗುರುಪ್ರಸಾದ್ (55) ತಮ್ಮ ಜಮೀನಿಗೆ ಸಂಬಂಧಿಸಿದಂತೆ ಆರ್.ಆರ್.ಟಿ ಶಾಖೆಯಲ್ಲಿ ಪಹಣಿಯಲ್ಲಿನ ಕಾಲಂ 3, 9 ರನ್ನು ತಾಳೆ ಮಾಡುವ ಉದ್ದೇಶಕ್ಕಾಗಿ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಆರೋಪಿಗಳು 2.50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಆರೋಪಿ ಹೇಮಂತ್ ತಾನು ಇದೇ ಕಚೇರಿಯಲ್ಲಿ ಕಂಪ್ಯೂ ಟರ್ ಆಪರೇಟರ್ ಎಂದು ಗುರು ಪ್ರಸಾದ್‌ಗೆ ಪರಿಚಯಿಸಿಕೊಂಡು ಲಂಚ ಕೊಡುವಂತೆ ಸೂಚಿಸಿದ್ದರು. ಲಂಚ ನೀಡಲು ಇಚ್ಛಿಸದ ದೂರುದಾರರು ಲೋಕಾ ಯುಕ್ತ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾ ಯುಕ್ತ ಪೊಲೀಸರು ಬುಧವಾರ ಗುರುಪ್ರಸಾದ್ ಅವರಿಂದ ಹೇಮಂತ್ 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಹೇಮಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.