Advertisement

ಉಗ್ರರನ್ನು ಉಗ್ರರು ಎನ್ನಬಾರದಂತೆ!

01:01 AM Sep 08, 2021 | Team Udayavani |

ಇಸ್ಲಾಮಾಬಾದ್‌:  ಪಾಕಿಸ್ಥಾನದ ಮಾಧ್ಯಮಗಳು ಯಾವುದೇ ಕಾರಣಕ್ಕೂ ತಾಲಿಬಾನಿಗಳನ್ನು “ಉಗ್ರ’ರೆಂದು ಕರೆಯಬಾರದು ಎಂದು ಇಲ್ಲಿನ ನಿಷೇಧಿತ ತೆಹ್ರೀಕ್‌ ಐ ತಾಲಿಬಾನ್‌ ಪಾಕಿಸ್ಥಾನ್‌ (ಟಿಟಿಬಿ) ಸಂಘಟನೆ ಎಚ್ಚರಿಸಿದೆ.

Advertisement

ಅನೇಕ ಮಾಧ್ಯಮಗಳು ತಾಲಿಬಾನಿಗಳನ್ನು ಮತ್ತು ಟಿಟಿಬಿಯನ್ನು ಉಗ್ರರೆಂದು ಕರೆಯುತ್ತಿವೆ. ನಾವು ಎಲ್ಲ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದೇವೆ. ಹೀಗೆ ವರದಿ ಮಾಡುವುದು ಪಕ್ಷಪಾತ ಮಾಡಿದಂತಾಗುತ್ತದೆ. ಪತ್ರಕರ್ತರು ತಮ್ಮ ಕರ್ತವ್ಯದಲ್ಲಿ ಅಪ್ರಾಮಾಣಿಕತೆ ತೋರಿಸಿದಂತಾಗುತ್ತದೆ. ಯಾರು ನಮ್ಮನ್ನು ಉಗ್ರರೆನ್ನುತ್ತಾರೋ ಅವರನ್ನು ನಾವು ಶತ್ರುಗಳೆಂದು ಪರಿಗಣಿಸುತ್ತೇವೆ. ನಮ್ಮನ್ನು ಉಗ್ರರೆನ್ನದೆ ಟಿಟಿಬಿ ಎಂದೇ ಕರೆಯಬೇಕೆಂದು ಟಿಟಿಬಿ ವಕ್ತಾರ ಮೊಹಮದ್‌ ಖುರಸಾನಿ ಎಚ್ಚರಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next