Advertisement

ಅಫ್ಘಾನ್ ಗಡಿಯಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನ್ ನ ಕಮಾಂಡರ್ ಹತ್ಯೆ

09:22 PM Nov 07, 2022 | Team Udayavani |

ಪೇಶಾವರ: ಅಫ್ಘಾನಿಸ್ಥಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸೋಮವಾರ ಪಾಕಿಸ್ಥಾನಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನದ (ಟಿಟಿಪಿ) ಕಮಾಂಡರ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಲಿಯಾಕತ್ ಎಂದು ಗುರುತಿಸಲಾದ ಉಗ್ರ ಪೇಶಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದರು.

ಲಿಯಾಕತ್ ಕಾನೂನುಬಾಹಿರ ಟಿಟಿಪಿ ಕಮಾಂಡರ್ ಆಗಿದ್ದ.ಖೈಬರ್ ಬುಡಕಟ್ಟು ಜಿಲ್ಲೆಯ ಜಮ್ರುದ್ ತಹಸಿಲ್‌ನಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಹತ್ಯೆಗೀಡಾಗಿದ್ದಾನೆ.

ಶೋಧ ಕಾರ್ಯಾಚರಣೆಯ ವೇಳೆ ಭಯೋತ್ಪಾದನಾ ನಿಗ್ರಹ ವಿಭಾಗದ ಹೆಲಿಕಾಪ್ಟರ್‌ಗಳು ಶಂಕಿತ ಉಗ್ರರ ಅಡಗುತಾಣಗಳ ಮೇಲೂ ಶೆಲ್ ದಾಳಿ ನಡೆಸಿವೆ. ಕಾರ್ಯಾಚರಣೆಯ ವೇಳೆ ಭದ್ರತಾ ಅಧಿಕಾರಿಯೊಬ್ಬರು ಗಾಯಗೊಂಡರು ಎಂದು ಪ್ರದೇಶದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next