Advertisement

ತೆಗ್ಗಿ ಗ್ರಾಮಸ್ಥರ ಪಕ್ಷಿ ಪ್ರೇಮಕ್ಕೆ ಕೈ ಮುಗಿ!

03:05 AM Nov 18, 2017 | |

ಮಾನವ ಸಂಘ ಜೀವಿ ಹಾಗೂ ಸಮಾಜಜೀವಿ. ಪ್ರಾಚೀನ ಕಾಲದಿಂದಲೂ ಮಾನವನಿಗೂ, ಪಕ್ಷಿಗಳಿಗೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ ಕಾಲದಿಂದಲೂ ಸಂದೇಶ ರವಾನಿಸಲು ಪಾರಿವಾಳಗಳನ್ನು ಉಪಯೋಗಿಸುತ್ತಿದ್ದರು ಎಂಬುದು ಹಲವು ಉಲ್ಲೇಖದಿಂದ ತಿಳಿದು ಬರುತ್ತದೆ. ಈಗ ಅರಣ್ಯ ಸಂಪತ್ತು ಕಡಿಮೆಯಾಗುತ್ತಿರುವುದರಿಂದ ಪಕ್ಷಿ$, ಪ್ರಾಣಿ ಸಂಕುಲಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿವೆ. ಈ ಮಾತಿಗೆ ಅಪವಾದವೆಂಬಂತೆ ಇಲ್ಲೊಂದು ಪುಟ್ಟ ಗ್ರಾಮವಿದೆ. ಇಲ್ಲಿ ಇಡೀ ಊರಿನ ಗ್ರಾಮಸ್ಥರೇ ಪಾರಿವಾಳಗಳನ್ನು ಸಾಕಿ ಪಕ್ಷಿ$ ಪ್ರೇಮ
 ಮೆರೆದಿದ್ದಾರೆ.

Advertisement

  ಅದುವೇ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ತೆಗ್ಗಿ ಗ್ರಾಮ. ಇಲ್ಲಿ 2000 ಜನಸಂಖ್ಯೆ ಇದೆ.  ಎಲ್ಲಾ ವರ್ಗದವರೂ ಇದ್ದಾರೆ. ಈ ಊರಿನ ಮಧ್ಯದಲ್ಲಿ ಮಾರುತೇಶ್ವರ(ಆಂಜನೇಯ) ದೇವಸ್ಥಾನವಿದೆ. ಇದನ್ನು ಸಂಪೂರ್ಣ ಕಲ್ಲಿನಲ್ಲೇ ನಿರ್ಮಿಸಲಾಗಿದೆ.  ಇದರ ಮೇಲ್ಭಾಗದಲ್ಲಿ  ಸಾವಿರಾರು ಪಾರಿವಾಳಗಳು ವಾಸವಾಗಿವೆ. ಇವುಗಳ ವಾಸಕ್ಕಾಗಿ ಚಿಕ್ಕ ಚಿಕ್ಕ ಮನೆ(ಗೂಡು) ನಿರ್ಮಿಸಿ ಪಾರಿವಾಳಗಳ ವಾಸಕ್ಕೆ ಅನುಕೂಲ ಮಾಡಿ ಕೊಡಲಾಗಿದೆ.  ಇದನ್ನೆಲ್ಲಾ ಮಾಡಿದ್ದು ಗ್ರಾಮಸ್ಥರು ಅನ್ನೋದು ವಿಶೇಷ. 

ರಾತ್ರಿ ಸಮಯದಲ್ಲಿ ಪಾರಿವಾಳಗಳು ವಾಸ್ತವ್ಯ ಮಾಡಿ, ಹಗಲು ಹೊತ್ತಿನಲ್ಲಿ ಆಹಾರದ ಸಲುವಾಗಿ ಬೇರೆ ಕಡೆ ಹೋಗಿ ಪುನಃ ರಾತ್ರಿ ತಮ್ಮ ವಾಸಸ್ಥಳಕ್ಕೆ ಬರುತ್ತವೆ. ಇವುಗಳಿಗೆ ಊರ ಗ್ರಾಮಸ್ಥರೇ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಇದಕ್ಕೆ ಊರ ಎಲ್ಲ ಹಿರಿಯರು, ಯುವಕರು ಕಾರ್ಯ ನಿರ್ವಹಿಸುತ್ತಾರೆ. 

 ಬೇರೆ ಊರಿನವರು ಪಾರ್ಶ್ವವಾಯು ರೋಗಕ್ಕೆ ಮದ್ದಿಗಾಗಿ ಪಾರಿವಾಳಗಳನ್ನು ಹಿಡಿದೊಯ್ಯಲು ಬಂದರೆ ತಡೆಯುತ್ತಾರೆ. ಎಲ್ಲರೂ ಭದ್ರತಾ ಕಾವಲುಗಾರರಂತೆ ನಿಗಾ ವಹಿಸುತ್ತಾರೆ. ಊರ ದೇವಾಲಯದ ಪಕ್ಕದಲ್ಲೇ ಬಾವಿ ಇದೆ. ಈ ಬಾವಿಯಲ್ಲಿ ಬೇಸಿಗೆಯಲ್ಲೂ ನೀರು ಇರುವುದರಿಂದ ಪಾರಿವಾಳಗಳಿಗೆ ನೀರಿನ ಸಮಸ್ಯೆ ಇಲ್ಲ. ಬಾವಿಯಲ್ಲಿ ಪಾರಿವಾಳಗಳು ಇರಲು, ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಈ ಬಾವಿಗೆ ತಂತಿ ಬೇಲಿ ನಿರ್ಮಿಸಿರುವುದರಿಂದ ಪಾರಿವಾಳಗಳನ್ನು ಬೆಕ್ಕು ಮತ್ತು ಇತರ ಪ್ರಾಣಿಗಳಿಂದ ರಕ್ಷಿಸಲೂ ಸಹಕಾರಿಯಾಗಿದೆ. ಅಪರೂಪದ ಪಾರಿವಾಳ ಸಂಕುಲ ವೀಕ್ಷಿಸಲು ಸುತ್ತಮುತ್ತಲಿನ ಜನರು ದೂರದ ಊರಿನಿಂದ ತಂಡ ತಂಡವಾಗಿ ಬಂದು ಹೋಗುತ್ತಾರೆ. 

Advertisement

ಎಚ್‌.ಆರ್‌.ಕಡಿವಾಲ

Advertisement

Udayavani is now on Telegram. Click here to join our channel and stay updated with the latest news.

Next