Advertisement

ನೀರಿಲ್ಲದೇ ಬರಿದಾಗುತ್ತಿದೆ ತೀತಾ ಜಲಾಶಯ

03:29 PM Jul 28, 2019 | Suhan S |

ಕೊರಟಗೆರೆ: ಕಲ್ಪತರು ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣವಾದ ದೇವರಾಯನದುರ್ಗ ಬೆಟ್ಟದಲ್ಲಿ ಹುಟ್ಟುವ ಜಯಮಂಗಳಿ ನದಿ ನೀರಿನ ಆಸರೆ ಪಡೆದಿರುವ ತೀತಾ ಜಲಾಶಯ ಸಾವಿರಾರು ರೈತ ಕುಟುಂಬದ ಜೀವನಾಡಿ.

Advertisement

ಕೊರಟಗೆರೆ ತಾಲೂಕಿನ ಮೊದಲ ಜಲಾಶಯಕ್ಕೆ ತನ್ನದೇ ಆದ ಇತಿಹಾಸ ಇದೆ. ಜಯಮಂಗಳಿ ನದಿಯ ನೀರು ಶೇಖರಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1946ರಲ್ಲಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ಕಳೆದ 15 ವರ್ಷದಿಂದ ಜಲಾಶಯ ಬರಿದಾಗಿದ್ದು, ಎತ್ತಿನಹೊಳೆ ನೀರು ಹರಿಸಿದರೆ ಜಲಾಶಯ ಭರ್ತಿಯಾಗಿ ರೈತರ ಬಾಳು ಹಸನಾಗುತ್ತದೆ.

ಎತ್ತಿನಹೊಳೆ ನೀರು ಹರಿಸಿ: ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ರಾಜ್ಯದ ಇತಿಹಾಸ ಪ್ರಸಿದ್ಧ ಗೊರವನ ಹಳ್ಳಿ ಶ್ರೀ ಮಹಾಲಕ್ಷಿ ್ಮೕ ದೇವಾಲಯದ ಸಮೀಪ ವಿರುವ ತೀತಾ ಜಲಾಶಯ ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿದೆ. ಮಹಾಲಕ್ಷಿ ್ಮೕ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ತಪ್ಪದೆ ಜಲಾಶಯಕ್ಕೆ ಭೇಟಿ ನೀಡಿ ಸುಂದರ ಪರಿಸರ ವೀಕ್ಷಣೆ ಮಾಡು ವುದು ಸಾಮಾನ್ಯವಾಗಿದೆ. ಆದರೆ ಮಳೆ ಕೊರತೆ ಯಿಂದ ಜಯಮಂಗಳಿ ನದಿ ನೀರು ಬಾರದೆ ಬರಿದಾಗುತ್ತಿದ್ದು, ತೀತಾ ಜಲಾಶಯಕ್ಕೆ ತಾಲೂಕಿ ನಲ್ಲಿ ಆರಂಭವಾಗಿರುವ ಶಾಶ್ವತ ನೀರಾವರಿ ಯೋಜನೆಯಾದ ಎತ್ತಿನಹೊಳೆ ಪಕ್ಕದ ಬೈರ ಗೊಂಡ್ಲು ಬಳಿ ಬಫ‌ರ್‌ ಡ್ಯಾಂ ಹರಿಯುವ ಸಂದರ್ಭ ತೀತಾ ಜಲಾಶಯಕ್ಕೂ ನೀರು ಹರಿ ಸುವುದರಿಂದ ರೈತರ ಬಾಳು ಹಸನಾಗುತ್ತದೆ.

2500 ಎಕರೆ ವ್ಯಾಪ್ತಿ: ತೀತಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಒಟ್ಟು 2500 ಎಕರೆ ವ್ಯಾಪ್ತಿ ಹೊಂದಿದೆ. ಜಲಾನಯನದ ವಿಸ್ತೀರ್ಣ 175.35 ಚ.ಕೀ.ಮೀ ಆಗಿದೆ. ಹಣೆ(ಏರಿ)ಯ ಉದ್ದ 1,017 ಮೀ ಮತ್ತು 16.6ಮೀ ಎತ್ತರವಿದೆ. ನೀರಾವರಿ ತೋಬಿನ ಮಟ್ಟ 764.130ಮೀ, ಜಲಾಶಯದಲ್ಲಿ ಇರಬೇಕಾದ ಕನಿಷ್ಠ ನೀರಿನ ಮಟ್ಟ 765 ಮೀ, ಪೂರ್ಣ ಜಲಾನಯನದ ನೀರಿನ ಮಟ್ಟ 772 ಮೀ, ಜಲಾನಯನದ ಗರಿಷ್ಠ ಮಟ್ಟ 174.50ಮೀ ಆಗಿದೆ. ಒಟ್ಟು ನೀರಿನ ಸಾಮಾರ್ಥ 686 ದಶಲಕ್ಷ ಘನ ಮೀಗಳಾಗಿದೆ.

ಜಲಾಶಯದ ಎರಡು ಕಡೆ ನಾಲೆಗಳಿವೆ. ಎಡದಂಡೆ ನಾಲೆಯು 22 ಕಿ.ಮೀ ವ್ಯಾಪ್ತಿ ಹೊಂದಿದ್ದು, ಮತ್ತು ಬಲದಂಡೆ ನಾಲೆಯು 7.5 ಕಿ.ಮೀ ವ್ಯಾಪ್ತಿ ಹೊಂದಿದೆ. 202 ಹೆಕ್ಟೇರ್‌ ಪ್ರದೇಶಕ್ಕೆ ನೀರಿನ ಪೂರೈಕೆ ಆಗಲಿದೆ. ಜಯಮಂಗಳಿ ನದಿ ತುಂಬಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದರೆ ಚಿಕ್ಕಾವಳಿ ಕೆರೆ ತುಂಬಲಿದೆ. ಚಿಕ್ಕವಳಿ ಕೆರೆಯ ನೀರು ಜಯಮಂಗಳಿ ನದಿಯ ಮಾರ್ಗವಾಗಿ ಆಂಧ್ರದ ಪರಗಿ ಕೆರೆಗೆ ಹೋಗಲಿದೆ.

Advertisement

ತೀತಾ ಜಲಾಶಯದ ನೀರಿನ ಮಟ್ಟ ಒಟ್ಟು 174 ಎಂಸಿಎಫ್ಟಿ ಆಗಿದೆ. 2018-19ನೇ ಸಾಲಿನ ಜು.12ರಂದು ತೀತಾ ಜಲಾಶಯದ ನೀರಿನ ಮಟ್ಟ 96.70 ಎಂಸಿಎಫ್ಸಟಿ ಆಗಿದೆ. ಪ್ರಸ್ತುತ 2019-20ನೇ ಸಾಲಿನ ಜು.12ರ ಮಾಹಿತಿಯಂತೆ ಜಲಾಶಯದ ನೀರಿನ ಮಟ್ಟ ಒಟ್ಟು 20.48 ಆಗಿದೆ. ಮಳೆಗಾಲ ಈಗ ಪ್ರಾರಂಭವಾಗಿದೆ. ಜಯಮಂಗಳಿ ನದಿಯ ನೀರು ಬಂದು ಜಲಾ ಶಯ ಮತ್ತೆ ಭರ್ತಿಯಾಗಿ ರೈತರಿಗೆ ಅನುಕೂಲ ಆಗಲಿದೆ.ಗೊರವನಹಳ್ಳಿ, ತೀತಾ, ಮಾದವಾರ, ತಿಮ್ಮನ ಹಳ್ಳಿ, ತುಂಬುಗಾನಹಳ್ಳಿ, ಚಿಕ್ಕಾವಳ್ಳಿ, ರಾಜಯ್ಯನ ಪಾಳ್ಯ, ಹೊನ್ನಾರನಹಳ್ಳಿ, ಕ್ಯಾಮೇನ ಹಳ್ಳಿ, ಬೀದಲೋಟಿ, ಹೊಳವನಹಳ್ಳಿ, ಕತ್ತಿನಾಗೇನ ಹಳ್ಳಿ, ಕೋಡ್ಲಹಳ್ಳಿ, ವೆಂಕಟಾಪುರ ಸೇರಿದಂತೆ ಹೊಳವನ ಹಳ್ಳಿ ಹೋಬಳಿಯ ಸಾವಿರಾರು ರೈತ ಕುಟುಂಬ ಗಳಿಗೆ ನೀರಾವರಿ ಆಸರೆಯಾಗಿದೆ. ಜಲಾಶಯ ತುಂಬಿ ಕೋಡಿ ಬಿದ್ದರೆ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರು ನೆಮ್ಮದಿಯ ಜೀವನ ಸಾಗಿಸುತ್ತಾರೆ.

● ಎನ್‌.ಪದ್ಮನಾಭ್‌

Advertisement

Udayavani is now on Telegram. Click here to join our channel and stay updated with the latest news.

Next