Advertisement

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

11:07 AM Jan 09, 2025 | |

“ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ನಾಯಕಿಯಾಗಿ ರಚನಾ ಇಂದರ್‌ ಆಯ್ಕೆಯಾಗಿದ್ದಾರೆ. ನಾಯಕ ನಿಹಾರ್‌ ಮುಖೇಶ್‌ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಅಕ್ಷರ ಪಾತ್ರದಲ್ಲಿ ರಚನಾರನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದ್ದು, ಪೋಸ್ಟರ್‌ ರಿಲೀಸ್‌ ಮಾಡಿದೆ.

Advertisement

ತೀರ್ಥರೂಪ ತಂದೆಯವರಿಗೆ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೈಸೂರು, ಕೊಚ್ಚಿ ಮೂಡಿಗೆರೆ ಸುತ್ತಮುತ್ತ ಶೇಖಡ 50ರಷ್ಟು ಶೂಟಿಂಗ್‌ ಮಾಡಿರುವ ಚಿತ್ರತಂಡ ಸಂಕ್ರಾಂತಿ ಬಳಿಕ ನಾಲ್ಕನೇ ಹಂತದ ಚಿತ್ರೀಕರಣವನ್ನು ಮೂಡಿಗೆರೆಯಲ್ಲಿ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ.

ಆ ನಂತರ ಉತ್ತರ ಭಾರತದ ಕಡೆ ಚಿತ್ರೀಕರಣ ನಡೆಸಲಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್‌ ನಡಿ ತೀರ್ಥರೂಪ ತಂದೆಯವರಿಗೆ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್‌ ಈ ಸಿನಿಮಾವನ್ನು ಪ್ರಸೆಂಟ್‌ ಮಾಡುತ್ತಿದೆ. ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್‌ ಖ್ಯಾತಿಯ ನಿಹಾರ್‌ ಮುಖೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ತೀರ್ಥರೂಪ ತಂದೆಯವರಿಗೆ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರುತ್ತಿದೆ.

ತೆಲುಗಿನಲ್ಲಿ ಪ್ರಿಯಮೈನ ನಾನ್ನಕು ಎಂಬ ಶೀರ್ಷಿಕೆ ಇಡಲಾಗಿದೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್‌ ಯರಗೇರಾ ಛಾಯಾಗ್ರಹಣ, ಜೋ ಕೋಸ್ಟ್‌ ಸಂಗೀತ, ಪ್ರಶಾಂತ್‌ ರಾಜಪ್ಪ ಸಂಭಾಷಣೆ ಇರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next